india Book of Records :  ಇಂಡಿಯಾ ಬುಕ್​ ಆಫ್​ ರೆಕಾರ್ಡ್​ಗೆ ಶಿವಮೊಗ್ಗದ 2 ವರ್ಷದ ಮಗು ಸೇರ್ಪಡೆ | ಈ ಮಗುವಿನ ಸಾಧನೆ ಏನು ಗೊತ್ತಾ 

india Book of Records :  ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ ( ಏಜ್​ ಇಸ್​ ಜಸ್ಟ್​ ಎ ನಂಬರ್​ ) ಈ ವಾಕ್ಯವನ್ನು ನಾವು ಆಗಾಗ ಕ್ರೀಡಾ ವಲಯ ಸೇರಿದಂತೆ ಇನ್ನಿತರೇ ಪ್ರದೇಶದಲ್ಲಿ ಕೇಳಿಯೇ ಇರುತ್ತೇವೆ. ಸಾಧನೆ ಮಾಡಬೇಕೆಂಬ ಛಲ ನಮ್ಮಲ್ಲಿದ್ದರೆ ಯಾವ ವಯಸ್ಸು ಅಡ್ಡ ಬರುವುದಿಲ್ಲ.ಅದಕ್ಕೆ ನಿದರ್ಶನವೆಂಬಂತೆ ಇಲ್ಲೊಬ್ಬ 1 ವರ್ಷ 11 ತಿಂಗಳ ಮಗು ಬುಕ್​ ಆಫ್​ ರೆಕಾರ್ಡ್​ಗೆ ಸೇರ್ಪಡೆಯಾಗಿದ್ದಾನೆ.

ಹೌದು ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಹಳ್ಳಿಯ ನಿವಾಸಿ ಚೇತನ್ ಕುಮಾರ್ ಮತ್ತು ದಿವ್ಯ ಅವರ ಪುತ್ರ  ಆರ್ಯನ್ ವಿಷಿಷ್ಟ ಸಾಧನೆ ಮೂಲಕ ಇಂಡಿಯಾ ಬುಕ್ ಆಫ್​ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದಾನೆ.

india Book of Records : ಆರ್ಯನ್​ ಮಾಡಿದ ಸಾಧನೆ ಏನು

1.11 ವರ್ಷದ ಪುಟಾಣಿ ಆರ್ಯನ್ ಎನ್.ಸಿ. 38 ವಿವಿಧ ಬಗೆಯ ವಿಷಯಗಳನ್ನು ಗುರುತಿಸಿ ಜ್ಞಾಪಕ ಶಕ್ತಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಆಗಿದ್ದಾನೆ. ಈ ಮಗು  25 ತರಕಾರಿ, 8 ಗ್ರಹಗಳು, 23 ದೇಶಗಳ ಧ್ವಜಗಳು, 11 ಬಣ್ಣಗಳು, 21 ವೃತ್ತಿಪರರು, 8 ಕೀಟಗಳು, 8 ಪುಸ್ತಕಗಳು, 9 ಸಮುದ್ರ ಪ್ರಾಣಿಗಳು, 10 ಸಂಗೀತ ವಾದ್ಯಗಳು, 24 ಕಾರು ಲೋಗೋಗಳು, 11 ದೇಹದ ಆಂತರಿಕ ಭಾಗಗಳು, 24 ಸ್ವಾತಂತ್ರ್ಯ ಹೋರಾಟಗಾರರು, 25 ಹಣ್ಣು, 30 ವಾಹನಗಳು, 7 ದೇವತೆಗಳು, 14 ಗಣಿತ ಚಿಹ್ನೆಗಳು ಹೀಗೆ 38 ವಿವಿಧ ಬಗೆಯ ವಿಷಯಗಳನ್ನು ಗುರುತಿಸಿ ಅದನ್ನು ಹೇಳುತ್ತಾನೆ. ಈ  ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆ ಮಾಡಿ ವಿಶಿಷ್ಟವಾದ ಕಿರಿಯ ಮಗು ಅನ್ನೋ ಸಾಧನೆ ಮಾಡಿ ಐಬಿಆರ್ ಸಾಧಕ ಬಿರುದು ಪಡೆದಿದ್ದಾನೆ‌.

Leave a Comment