viral news today : ಹೆಂಡತಿ ಮೂಗು ಚೆಂದ ಇದೆ ಎಂದು ಕಚ್ಚಿ ತಂದ ಗಂಡ!

ಹಂಚಿಕೊಳ್ಳಿ
WhatsApp Facebook X Telegram
viral news today /
viral news today /

viral news today ಕೆಲವೊಮ್ಮೆ ಚಿತ್ರ ವಿಚಿತ್ರ ಸಂಗತಿಗಳು ಸುದ್ದಿಯಾಗುತ್ತದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಪಶ್ಚಿಮ ಬಂಗಾಳದ ಸುದ್ದಿಯೊಂದು ವೈರಲ್ ಆಗುತ್ತಿದೆ. ಪುಣ್ಯಾತ್ಮನೊಬ್ಬ ತನ್ನ ಹೆಂಡತಿಯ ಮೂಗು ಚೆಂದ ಇದೆ ಎಂದು ಹೇಳಿ , ರಾತ್ರಿ ಆಕೆ ಮಲಗಿದ್ದ ವೇಳೆ ಮೂಗು ಕಚ್ಚಿ ತಿಂದಿದ್ದಾನೆ.

viral news today /  ಚೆಂದ ಇದೆ ಎಂದು ಮೂಗು ಕಚ್ಚಿದ 

ಹೌದು, ವಿಚಿತ್ರವೆನಿಸಿದರೂ ಇಂತಹದ್ದೊಂದು ಸುದ್ದಿ ಪಶ್ಚಿಮ ಬಂಗಾಳದಿಂದ ವೈರಲ್ ಆಗಿದೆ. ಇಲ್ಲಿ ನಾಡಿಯಾದ ಶಾಂತಿಪುರದ ವಾರ್ಡ್ ಸಂಖ್ಯೆ 11 ರ ಬೆರ್ಪಾರಾ ಪ್ರದೇಶದಲ್ಲಿ  ಘಟನೆ ನಡೆದಿದೆ. ಅಲ್ಲದೆ ಸುದ್ದಿ ಮಾಧ್ಯಮಗಳ ವರದಿ ಪ್ರಕಾರ, ಮಧು ಖತುನ್ ಎಂಬವರು ಬೆರ್ಪಾರಾ ಪ್ರದೇಶದ ನಿವಾಸಿ ಬಾಪನ್ ಶೇಖ್ ರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರ ಸಂಸಾರಕ್ಕೆ ಇದೀಗ ಒಂಬತ್ತು ವರ್ಷ. ಪತಿಯು ಆಗಾಗ ತನ್ನ ಹೆಂಡತಿಯ ಬಳಿ ನಿನ್ನ ಮೂಗು ಚೆಂದ ಇದೆ, ಅದನ್ನು ಕಚ್ಚಿ ತಿನ್ನುತ್ತೇನೆ ಎನ್ನುತ್ತಿದ್ದನಂತೆ. ಈ ನಡುವೆ ಕಳೆದ ಗುರುವಾರ ರಾತ್ರಿ ಮಧು ಮಲಗಿದ್ದಾಗ, ಬಾಪನ್​ ಆಕೆಯ ಮೂಗು ಕಚ್ಚಿದ್ದಾನೆ. ನೋವು ತಡೆಯಲಾಗದೇ ಕಿರುಚಿದರು ಬಿಡದೆ ಆತ ಮೂಗು ಕಚ್ಚಿ ಹಿಡಿದಿದ್ದ ಎನ್ನಲಾಗಿದೆ. ಕೂಗು ಕೇಳಿ ಬಂದವರು ಆತನಿಂದ ಆಕೆಯನ್ನು ಬಚಾವ್ ಮಾಡಿದರು ಎನ್ನಲಾಗಿದೆ. ಇದೀಗ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಕೋರ್ಟ್ಗೆ ಹಾಜರು ಪಡಿಸಿದ್ದಾರೆ.  

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor