ks eshwarappa : ಪಾಕಿಸ್ತಾನ ವಿಶ್ವದ ಭೂಪಟದಲ್ಲಿ ಇರಲ್ಲ | ಕೆ ಎಸ್​ ಈಶ್ವರಪ್ಪ

ಹಂಚಿಕೊಳ್ಳಿ
WhatsApp Facebook X Telegram
ks eshwarappa
ks eshwarappa : ಮಾಜಿ ಸಚಿವ ಕೆಎಸ್​ ಈಶ್ವರಪ್ಪರವರ ಸುದ್ದಿಗೋಷ್ಟಿ

ks eshwarappa : ಮುಂದೊಂದು ದಿನ ಪಾಕಿಸ್ತಾನ ವಿಶ್ವದ ಭೂಪಟದಲ್ಲಿ ಇರಲ್ಲ, ಅವರಿಗೆ ಕುಡಿಯೋಕೆ ನೀರು ಸಹ ಸಿಗುವುದಿಲ್ಲ ಎಂದು ಮಾಜಿ ಡಿ ಸಿ ಎಂ ಕೆ ಎಸ್​ ಈಶ್ವರಪ್ಪ ಪಾಕಿಸ್ತಾನದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಉಗ್ರರ ದಾಳಿ ಇಡೀ ಪ್ರಪಂಚದ ಗಮನ ಸೆಳೆದಿದೆ. ಘಟನೆ ಬೆನ್ನಲ್ಲೆ ಇಡೀ ಹಿಂದೂ ಸಮಾಜ ಒಂದಾಗಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಕೂಡ ಎಲ್ಲಾ ಪಕ್ಷಗಳು ಕೇಂದ್ರ ಸರ್ಕಾರದ ಜೊತೆಯಲ್ಲಿ ಒಗ್ಗೂಡಿದ್ದು ಸಂತೋಷದ ವಿಚಾರ. ಮೊದಲು ಅನೇಕ ದೇಶಗಳು ಪಾಕಿಸ್ತಾನದ ಪರವಾಗಿತ್ತು ಈಗ ಮೋದಿಯವರು ವಿಶ್ವನಾಯಕರಾಗಿದ್ದಾರೆ. ಪಾಕಿಸ್ತಾನ ಈಗ ಇಡೀ ವಿಶ್ವದ ಎದುರಲ್ಲಿ ಒಬ್ಬಂಟಿಯಾಗಿದೆ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿಶ್ವದ ಭೂಪಟದಲ್ಲಿ ಪಾಕಿಸ್ತಾನ ಇರಲ್ಲ.ಪಾಕಿಸ್ತಾನಕ್ಕೆ  ಕುಡಿಯೋಕೆ ನೀರು ಸಹ ಸಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಡೀ ಹಿಂದೂ ಸಮಾಜ ಉಪಜಾತಿಗಳ ಹೆಸರಲ್ಲಿ ಛಿದ್ರ ಛಿದ್ರವಾಗಿದೆ. ರಾಜಾರಣಿಗಳು ದೇಶವನ್ನು ಛಿದ್ರ ಮಾಡುವಲ್ಲಿ ಯಶ್ವಸ್ವಿಯಾಗಿದ್ದಾರೆ. ಕಾಶ್ಮೀರ ಘಟನೆ ನಂತರ ಇಡೀ ಭಾರತ ಒಂದು ಎಂದು ಒಂದಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ks eshwarappa : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರಿಗೆ ಅಭಿನಂದನೆ  

ಕಾಶ್ಮೀರದಲ್ಲಿ ಭಯೋದ್ಪಾದಕರು  ಧರ್ಮ ಕೇಳಿ ಬಟ್ಟೆ ಬಿಚ್ಚಿ ಗುಂಡಿನ ದಾಳಿ ನಡೆಸಿದ್ದರು. ಅದನ್ನು ಹಿಂದೂ ಸಮಾಜ ಸಹಿಸಲ್ಲ. ವಿರೋಧ ಪಕ್ಷಗಳು ಸಹ ಘಟನೆ ವಿಚಾರದಲ್ಲಿ ಎಲ್ಲರೂ ಒಂದಾಗಿದ್ದಾರೆ. ಆದ್ದರಿಂದ ಎಐಸಿಸಿ ಅಧ್ಯಕ್ಷ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.  ಪ್ರಧಾನಿಯವರು ಬಿಹಾರದಲ್ಲಿ ಭಾಷಣ ಮಾಡುವಾಗ ಸಿಂಹದ ರೀತಿಯಲ್ಲಿ ಘರ್ಜಿಸಿದ್ರು . ಉಗ್ರರು ಊಹೆನೂ ಮಾಡಿರಬಾರದು ಅಂತ ಶಿಕ್ಷೆ ಕೊಡುತ್ತೇವೆ ಎಂದಿದ್ದಾರೆ .ಸಿಂದೂ ನದಿ ನೀರು ಬಿಡಲ್ಲ ಎನ್ನುವ ತಿರ್ಮಾನ ಮಾಡಿದ್ದಾರೆ. ಪ್ರಧಾನಿ ಮೋದಿಯವರ ದಿಟ್ಟ ನಿಲುವನ್ನು ಅನೇಕ ದೇಶಗಳು ಒಪ್ಪಿಕೊಂಡಿದೆ ಎಂದರು. 

ಇದೇ ವೇಳೆ ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಕೊಡುವುದಾಗಿ ಘೋಷಿಸಿದೆ. ಆದರೆ ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor