ಮರಕ್ಕೆ ಗುದ್ದಿ ಮೋರಿಗೆ ಬಿದ್ದ ಬೈಕ್‌ , ಸವಾರನ ಸಾವು ಅನುಮಾನ! | ವಿನೋಬನಗರದಲ್ಲಿ ಗೃಹಿಣಿ ಆತ್ಮಹತ್ಯೆ | ಚಟ್‌ಪಟ್‌ ಸುದ್ದಿ

ಹಂಚಿಕೊಳ್ಳಿ
WhatsApp Facebook X Telegram
ಮರಕ್ಕೆ ಗುದ್ದಿ ಮೋರಿಗೆ ಬಿದ್ದ ಬೈಕ್‌ , ಸವಾರನ ಸಾವು ಅನುಮಾನ! | ವಿನೋಬನಗರದಲ್ಲಿ ಗೃಹಿಣಿ ಆತ್ಮಹತ್ಯೆ | ಚಟ್‌ಪಟ್‌ ಸುದ್ದಿ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌

ಸುದ್ದಿ 1 : ಮರಕ್ಕೆ ಬೈಕ್ ಡಿಕ್ಕಿ, ಯುವಕ ಸಾವು : ಶಿವಮೊಗ್ಗ ನಗರ ವಾಜಪೇಯಿ ಬಡಾವಣೆಯಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸಾವಿನ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದರಿಂದ ಪ್ರಕರಣವನ್ನು ಅನುಮಾಸ್ಪದ ಪ್ರಕರಣವನ್ನಾಗಿ ದಾಖಲಿಸಲಾಗಿದೆ. ಸಿದ್ದರಳ್ಳಿ ಮೂಲದ ಆಯನೂರು ನಿವಾಸಿ ರಾಜು ಎಂಬಾತ ವಾಜಪೇಯಿ ಬಡಾವಣೆಯಿಂದ ಶಿವಮೊಗ್ಗ ಕಡೆ ಬರುವಾಗ ಘಟನೆ ಸಂಭವಿಸಿದೆ. ಬೈಕ್ ಚಾಲನೆ ವೇಳೆ ಹೆಲ್ಲೆಟ್ ಧರಿಸಿರಲಿಲ್ಲ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಾವು ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ 2 : ಮನೆಯಲ್ಲಿ ಗೃಹಿಣಿ ಆತ್ಮಹತ್ಯೆ | ಶಿವಮೊಗ್ಗ ನಗರದ ಮೇದಾರಕೇರಿಯ ತನ್ನ ಮನೆಯಲ್ಲಿ ಗೃಹಿಣಿಯೊಬ್ಬರು ಶನಿವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೇದಾರಕೆರಿ ನಿವಾಸಿ ಗಗನಶ್ರೀ(22) ಮೃತರು.  ಕಿರುಕುಳದ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಸುದ್ದಿ 3 : ಅಪಘಾತ ವ್ಯಕ್ತಿ ಸಾವು | ಶಿವಮೊಗ್ಗ ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜು ಸಮೀಪ ಗೂಡ್ಸ್‌ ವಾಹನ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುರುವೇಕೆರೆ ಮೂಲದ ಗೂಡ್ಸ್ ವಾಹನ ಚಾಲಕ ರಮೇಶ್ (48) ಮೃತರು. ಶಿವಮೊಗ್ಗ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ಮತ್ತು ವಿರುದ್ದ ದಿಕ್ಕಿನಲ್ಲಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor