ನೇಣಿಗೆ ಶರಣಾದ 22 ವರುಷದ ಯುವತಿ | ಪತಿಯ ಮೇಲೆ ತವರಿನ ಅನುಮಾನ | ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
ನೇಣಿಗೆ ಶರಣಾದ 22 ವರುಷದ ಯುವತಿ | ಪತಿಯ ಮೇಲೆ ತವರಿನ ಅನುಮಾನ | ನಡೆದಿದ್ದೇನು?

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌

ಶಿವಮೊಗ್ಗ ವಿನೋಬನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ 22 ವರುಷದ ಯುವತಿ ಸಾವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆಕೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಧನರಾಗಿದ್ದಾಳೆ ಎಂದು ಹೇಳಲಾಗಿದೆ. ಈ ಸಂಬಂದ ಯುವತಿಯ ಪತಿಯೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಯುವತಿಯ ಮನೆಯವರು ಈ ಸಂಬಂಧ ದೂರು ದಾಖಲಿಸಿದ್ದಾರೆ. 

ಗಾಂಧಿಬಜಾರ್‌ ನಿವಾಸಿ ಆಗಿದ್ದ 22 ವರುಷದ ಗಗನಶ್ರೀ ಪರಿಚಯಸ್ತನಾಗಿದ್ದ ಸಂದೀಪ್‌ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರಿಗೂ ಮಗುವೊಂದಿತ್ತು. ಮದುವೆಯಾಗಿ ಮೂರು ವರುಷ ಕಳೆಯುವಷ್ಟರಲ್ಲಿ ಸಂಸಾರದಲ್ಲಿ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಯುವತಿ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನ ನೋಡಿದ ಪತಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ. 

ಇನ್ನೂ ಈ ಬಗ್ಗೆ ಯುವತಿಯ ಕಡೆಯವರು ಪತಿಯೇ ಆಕೆಯ ಸಾವಿಗೆ ಕಾರಣ ಎಂಧು ಅನುಮಾನ ವ್ಯಕ್ತಪಡಿಸಿದ್ದು, ಪೂರಕವಾಗಿ ಮನೆಯಲ್ಲಿ ನಡೆದ ವಿಚಾರಗಳನ್ನು ಪೊಲೀಸರ ಬಳಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor