ಇಲ್ಲಿವರೆಗೂ ಬಂತಾ ಅದು! ಹೌದು ಹುಲಿಯಾದ ಮೂಲ ತಿಳಿಸಿದ ಸಚಿವ ಲಕ್ಷ್ಮಣ ಸವದಿ!

ಹಂಚಿಕೊಳ್ಳಿ
WhatsApp Facebook X Telegram
Laxman Savadi's Hilarious Reaction to 'Howdu Huliya' Slogan Remembering Siddaramaiah's Viral Dialogue
Laxman Savadi's Hilarious Reaction to 'Howdu Huliya' Slogan Remembering Siddaramaiah's Viral Dialogue

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ/ ಶಿವಮೊಗ್ಗ / ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಲಕ್ಷ್ಮಣ ಸವದಿ ಇವತ್ತು ಭಾಷಣ ಮಾಡುತ್ತಿದ್ದ ವೇಳೆ ಸಭಿಕರೊಬ್ಬರು ಕೂಗಿದ ಹೌದು ಹುಲಿಯಾ ಘೋಷಣೆಗೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಭಾಷಣದ ನಡುವೆ ಅಭಿಮಾನಿಯೊಬ್ಬರು ಹುಲಿಯಾ ಎಂದು ಕೂಗಿದಾಗ, ತಕ್ಷಣವೇ ಮಾತು ನಿಲ್ಲಿಸಿದ ಸವದಿ, ಅದು ಅಥಣಿಯಿಂದ ಇಲ್ಲಿವರೆಗೂ ಬಂತಾ? ಎಂದು ನಗುತ್ತಾ ಪ್ರಶ್ನಿಸಿದರು. ಬಳಿಕ ಆ ಘೋಷಣೆಯ ಹಿಂದಿನ ಕಥೆಯನ್ನು ನೆನಪಿಸಿಕೊಂಡ ಅವರು, ಸಿದ್ದರಾಮಯ್ಯನವರು ಅಥಣಿಗೆ ಬಂದಾಗ ಅವರು ಯಾವುದೋ ಒಂದು ವಿಚಾರ ಹೇಳುವ ಹೊತ್ತಿನಲ್ಲಿ ಹೌದೋ ಹುಲಿಯಾ ಎಂದು ಕೂಗಿದ್ದು ನಮ್ಮ ಅಥಣಿಯವನೇ. ಆ ಮಾತು ರಾಜ್ಯಾದ್ಯಂತ ಬಹಳಷ್ಟು ವೈರಲ್ ಆಯಿತು. ಬಹುತೇಕ ನಾನು ಅಥಣಿಯವನು ಎನ್ನುವ ಕಾರಣಕ್ಕೆ ನೀವು ಅದನ್ನು ನನಗೆ ಈಗ ನೆನಪು ಮಾಡಿಕೊಡುತ್ತಿದ್ದೀರಿ ಎಂದು ಚಟಾಕಿ ಹಾರಿಸಿದರು. ಸವದಿ ಅವರ ಈ ಸಮಯಪ್ರಜ್ಞೆ ಮತ್ತು ಹಾಸ್ಯದ ಮಾತಿಗೆ ನೆರೆದಿದ್ದ ಸಭಿಕರು ಚಪ್ಪಾಳೆ ತಟ್ಟಿ ನಕ್ಕರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor