ಅನುಪಿನಕಟ್ಟೆಯಲ್ಲಿ ತಮ್ಮನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ | ಬೊಮ್ಮನಕಟ್ಟೆ ನಿವಾಸಿ ಅಣ್ಣ ಅರೆಸ್ಟ್‌

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 12, 2025 ‌‌  

ಶಿವಮೊಗ್ಗ ನಗರದ ಅನುಪಿನ ಕಟ್ಟೆ ಬಳಿ ಭೀಕರ ಕೊಲೆ ನಡೆದಿದೆ. ಅಣ್ಣನೇ ತನ್ನ ತಮ್ಮನನ್ನ ಕೊಲೆ ಮಾಡಿದ್ದಾನೆ.  ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾ.ಪಂ ವ್ಯಾಪ್ತಿಯ ಅನುಪಿನಕಟ್ಟೆ ಲಂಬಾಣಿ ತಾಂಡದಲ್ಲಿ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಘಟನೆ ಇದಾಗಿದೆ

ಕೊಲೆಯಾದವ ಗಿರೀಶ್ (30) ಎಂಬಾತ. ಈತನ ಅಣ್ಣ ಲೋಕೇಶ್‌. ಇವತ್ತು  ಬೆಳಿಗ್ಗೆ ಬೊಮ್ಮನಕಟ್ಟೆಯ ಲೋಕೇಶ್ ತಮ್ಮನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಲೋಕೇಶ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಕಾರಣ ಕೌಟುಂಬಿಕ ವಿಚಾರ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ

 

SUMMARY | One murder case reported in anupinakatte , deceased is Girish naik  

KEY WORDS |‌One murder case, anupinakatte , lambani tanda, bommanakatte, tunga nagara police station

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor