SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 4, 2025

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಿವಮೊಗ್ಗದ ನೂತನ 5 ಬ್ರಾಂಚ್ ಗಳು ಶೀಘ್ರದಲ್ಲೇ ಉದ್ಘಾಟನೆ ಗೊಳ್ಳಲಿದೆ ಎಂದು ಡಿ ಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ತಿಳಿಸಿದರು.
ಇಂದು ಶಿವಮೊಗ್ಗದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ 6 ತಿಂಗಳ ಹಿಂದೆ ನಮ್ಮ ಬ್ಯಾಂಕ್ ನ 3 ಹೊಸ ಶಾಖೆಗಳನ್ನು ಆರಂಭಿಸಲಾಗಿತ್ತು. ಇದೀಗ ಮತ್ತೆ ಹೊಸದಾಗಿ ಶಿವಮೊಗ್ಗ ತಾಲ್ಲೂಕಿನ ಗಾಜನೂರು ಗ್ರಾಮ, ಭದ್ರಾವತಿ ತಾಲ್ಲೂಕಿನ ಬಾರಂದೂರು ಗ್ರಾಮ. ತೀರ್ಥಹಳ್ಳಿ ಎಪಿಎಂಸಿ ಯಾರ್ಡ್. ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮ ಹಾಗೂ ಹೊಸನಗರ ತಾಲ್ಲೂಕಿನ ನಗರ ಗ್ರಾಮದಲ್ಲಿ ಶಾಖೆಗಳನ್ನು ಆರಂಭಿಸುತ್ತಿದ್ದೇವೆ. ಆರ್ ಬಿ ಐ ಇಷ್ಟು ಬೇಗ ಈ 5 ಬ್ಯಾಂಕ್ ಗೆ ಅನುಮತಿ ನೀಡುತ್ತದೆ ಎಂದುಕೊಂಡಿರಲಿಲ್ಲ. 15 ದಿನದ ಒಳಗಾಗಿ 5 ಬ್ಯಾಂಕ್ ಗಳು ಉದ್ಘಾಟನೆ ಗೊಳ್ಳುತ್ತದೆ. ಇನ್ನುಳಿದ 14 ಬ್ರಾಂಚ್ ಗಳಿಗೆ ಆದಷ್ಟು ಬೇಗ ಅನುಮತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಇನ್ನೂ ಹೆಚ್ಚು ಬ್ರಾಂಚ್ ತೆರೆಬೇಕೆಂಬ ಬೇಡಿಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಎಂದರು.

ನಮ್ಮ ಬ್ಯಾಂಕ್ ಕಳೆದ 73 ವರ್ಷದ ಇತಿಹಾಸದಲ್ಲಿ ಈ ಬಾರಿ ಅತಿ ಹೆಚ್ಚು 46 ಕೋಟಿ ಲಾಭವನ್ನು ಪಡೆದಿದೆ.ಇದು ಹೆಮ್ಮೆಯ ವಿಚಾರ. ನಮ್ಮ ಬ್ಯಾಂಕ್ ನಲ್ಲಿ ಎನ್ ಪಿ ಎ 0.87 ರಷ್ಟಿದೆ. ಇಷ್ಟು ಕಡಿಮೆ ಎನ್ ಪಿ ಎ ಹೊಂದಿರುವ ಬ್ಯಾಂಕ್ ರಾಜ್ಯದಲ್ಲಿ ಇನ್ನೊಂದಿಲ್ಲ. ಒಟ್ಟಾರೆಯಾಗಿ ಆರ್ ಬಿಐ ನ ಹಾಗೂ ನಬಾರ್ಡ್ ನ ಉತ್ತಮ ಬ್ಯಾಂಕ್ ಆಗುವುದರಲ್ಲಿ ನಮ್ಮ ಬ್ಯಾಂಕ್ ಪ್ರಮುಖ ಪಾತ್ರ ವಹಿಸಿತ್ತಿದೆ ಎಂದರು.
SUMMARY | Shimoga District Co-operative Central Bank will inaugurate five new branches soon, said DCC Bank Chairman R.M. Manjunath Gowda.
KEYWORDS | dcc bank, new branches, shiuvamogga, R.M. Manjunath Gowda,