ಮದ್ಯಪಾನ ಮಾಡ್ತಿದ್ರು, ಡ್ರೋನ್​ ನೋಡ್ತಿದ್ದಂತೆ ಕಲ್ಲೆತ್ತಿದ್ರು, ಆಮೇಲೆ ಆಗಿದ್ದೇ ಬೇರೆ

ಶಿವಮೊಗ್ಗ: ಜಿಲ್ಲೆಯಾದ್ಯಂತ ಅನೈತಿಕ ಚಟುವಟಿಕೆಗಳನ್ನು ತಡೆಯುವ ದೃಷ್ಟಿಯಿಂದ ಪೊಲೀಸರು ಡ್ರೋನ್ ಕ್ಯಾಮರಾಗಳ ಮೊರೆ ಹೋಗಿದ್ದಾರೆ. ಈ ಹಿಂದೆ ಭದ್ರಾವತಿಯ ಕೂಡ್ಲಿಗೆರೆ ಅರಣ್ಯ ಭಾಗದಲ್ಲಿ ಡ್ರೋನ್ ಹಾರಿಸುವ ಮೂಲಕ ಜೂಜುಕೋರರನ್ನು ಪತ್ತೆ ಹಚ್ಚಿದ್ದ ಪೊಲೀಸರು, ಇದೀಗ ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಸೇವಿಸುತ್ತಿದ್ದವರನ್ನು ಡ್ರೋನ್ ಮೂಲಕ ಪತ್ತೆ ಹಚ್ಚಿ ಕೇಸ್ ದಾಖಲಿಸಿದ್ದಾರೆ .

ಘಟನೆ ವಿವರ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು ಗ್ರಾಮದ ಹೊರವಲಯದಲ್ಲಿ ಡ್ರೋಣ್ ಹಾರಿಸಿದಾಗ, ಸಾರ್ವಜನಿಕ ಸ್ಥಳದಲ್ಲಿ ಕೆಲವರು ಮದ್ಯಪಾನ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ ಈ ವೇಳೆ ಕಿಡಿಗೇಡಿಗಳು ಕ್ಯಾಮರವನ್ನು ಕಂಡೊಡನೆ ಹೆದರದೆ ಅದರ ಮೇಲೆ ಕಲ್ಲೆಸೆಯುವ ಸಾಹಸವನ್ನು ಸಹ ಮಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಹಿನ್ನೆಲೆ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಮದ್ಯಪಾನ ಮಾಡುತ್ತಿದ್ದ ಸಂದೀಪ್, ಶಿವನೇಶ ಕುಮಾರ ಮತ್ತು ಮೇಘರಾಜ್ ಎಂಬುವವರನ್ನು ಗುರುತಿಸಿದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ.

#Shimoga #Shivamogga #ShimogaPolice #DroneSurveillance #CrimeNews #KarnatakaPolice #MalnadToday #PublicDrinking #HighTechPolicing #PoliceUpdate #ShimogaNews #KoteGangur #ಶಿವಮೊಗ್ಗ #ಪೊಲೀಸ್ #ಮಲೆನಾಡು