SHIVAMOGGA NEWS TODAY

ಶಿವಮೊಗ್ಗಕ್ಕೆ ಬಂದ ‘ನಮ್ಮನೆ ಯುವರಾಣಿ’ ಯ ಲುಕ್​ಗೆ ಮಲೆನಾಡು ಫಿದಾ #shivamogga

[email protected] ನವೀಕರಣ: 30 ಏಪ್ರಿಲ್ 2026, 7:03 ಫೂರ್ವಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗಕ್ಕೆ ಬಂದ ‘ನಮ್ಮನೆ ಯುವರಾಣಿ’ ಯ ಲುಕ್​ಗೆ ಮಲೆನಾಡು ಫಿದಾ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರಕ್ಕೆ ಜನಪ್ರಿಯ ನಟಿ ಅಂಕಿತಾ ಅಮರ್ ಭೇಟಿ ನೀಡಿದ್ದಾರೆ. ನಗರದಲ್ಲಿ ನೂತನವಾಗಿ ಆರಂಭಗೊಂಡಿರುವ ಪ್ರತಿಷ್ಠಿತ ಆಭರಣ ಮಳಿಗೆಯೊಂದರ (Jewellery Store) ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗಮನ ಸೆಳೆದರು. ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಅಂಕಿತಾ, ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿ, ನಗುಮುಖದಿಂದಲೇ ಎಲ್ಲರ ಮನಗೆದ್ದರು.

ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ನಟಿ ಅಂಕಿತಾ ಅಮರ್, ಕರುನಾಡಿನ ಮನೆಮಾತಾದ ಅಪ್ಪಟ ಪ್ರತಿಭೆ. ಸಾಂಸ್ಕೃತಿಕ ನಗರಿ ಮೈಸೂರು ಮೂಲದ ಕಲಾ ಹಿನ್ನೆಲೆಯ ಕುಟುಂಬದಿಂದ ಬಂದ ಇವರು, ಕೇವಲ ನಟನೆಯಲ್ಲದೆ, ಓರ್ವ ಅದ್ಭುತ ಗಾಯಕಿ ಹಾಗೂ ಶಾಸ್ತ್ರೀಯವಾಗಿ ತರಬೇತಿ ಪಡೆದ ಪ್ರತಿಭಾವಂತ ಭರತನಾಟ್ಯ ನೃತ್ಯಗಾರ್ತಿಯೂ ಹೌದು. ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಇವರು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಮ್ಮನೆ ಯುವರಾಣಿ’ ಧಾರಾವಾಹಿಯ ‘ಮೀರಾ’ ಪಾತ್ರದ ಮೂಲಕ ನಾಡಿನಾದ್ಯಂತ ಅಸಂಖ್ಯಾತ ವೀಕ್ಷಕರ ಹೃದಯ ಕದ್ದವರು.

ಕಿರುತೆರೆಯಲ್ಲಿ ಸತತ ಯಶಸ್ಸು ಹಾಗೂ ಪ್ರೇಕ್ಷಕರ ಪ್ರೀತಿ ಗಳಿಸಿದ ಬಳಿಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ಅಂಕಿತಾ, ಸಿನಿಮಾರಂಗದಲ್ಲೂ ತಮ್ಮ ಮೋಡಿ ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ, ಕನ್ನಡಿಗರ ಮನಗೆದ್ದ ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ನಾಯಕಿಯಾಗಿ ಅತ್ಯುತ್ತಮ ಅಭಿನಯ ನೀಡಿ, ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಭಾರಿ ಮೆಚ್ಚುಗೆ ಗಳಿಸಿದ್ದಾರೆ. ವಿಭಿನ್ನ ಕಥಾಹಂದರವುಳ್ಳ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಿರುತೆರೆಯ ಮೀರಾ, ಬಹುಮುಖ ಪ್ರತಿಭಾ ಅಂಕಿತಾರನ್ನು ಹತ್ತಿರದಿಂದ ಕಂಡು ಶಿವಮೊಗ್ಗದ ಅಭಿಮಾನಿಗಳು ಸಂಭ್ರಮಿಸಿದರು.

#AnkitaAmar #Shivamogga #JewelleryStoreInauguration #Sandalwood #NammaneYuvarani #IbbaniTabbidaIleyali #MalenaduToday #ShimogaNews #KarnatakaNews #ShivamoggaUpdates #KannadaActress

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು: