ಅಬ್ಬಬ್ಬಾ! ಮಲೆನಾಡಿನಲ್ಲಿ ಯಾವತ್ತೂ ಈ ಥರ ಮಳೆ ಗಾಳಿ ನೋಡಿಲ್ಲ!

ಕೊನೆಯ ನವೀಕರಣ: 28 ಏಪ್ರಿಲ್ 2026, 7:33 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
ಅಬ್ಬಬ್ಬಾ! ಮಲೆನಾಡಿನಲ್ಲಿ ಯಾವತ್ತೂ ಈ ಥರ ಮಳೆ ಗಾಳಿ ನೋಡಿಲ್ಲ!

ಅಬ್ಬಬ್ಬಾ! ಮಲೆನಾಡಿನಲ್ಲಿ ಯಾವತ್ತೂ ಈ ಥರ ಮಳೆ ಗಾಳಿ ನೋಡಿಲ್ಲ!

ಮಲೆನಾಡು ಟುಡೆ ಸುದ್ದಿ / ಮಲೆನಾಡಲ್ಲಿ ಮಳೆ ಜಾಸ್ತಿನೇ ಆದರೆ ನಿನ್ನೆ ದಿನ ಶಿವಮೊಗ್ಗ ಗ್ರಾಮಾಂತರದಲ್ಲಿ ವರುಣನ ಆರ್ಭಟ ಜೋರಾಗಿತ್ತು. ಭಾರಿ ಮಳೆ ಮತ್ತು ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರು ಕಂಗಾಲಾಗಿದ್ದರು. ಅಡಿಕೆ ತೋಟಗಳಲ್ಲಿ ಬಹುತೇಕ ಅಡಿಕೆ ಮರಗಳು ನೆಲಕ್ಕೆ ಉರುಳಿದ್ದವು.

ವಿಡಿಯೋದಲ್ಲಿ ಕಾಣುವಂತೆ, ಬಿರುಗಾಳಿಯ ರಭಸಕ್ಕೆ ಅಡಿಕೆ ಮರಗಳು ನೆಲಕ್ಕುರುಳುವಂತೆ ಬಾಗುತ್ತಿದ್ದವು. ಸಂಸದರು ತಿಳಿಸಿದಂತೆ ನಿನ್ನೆ ಈ ಭಾಗದಲ್ಲಿ ಬಿದ್ದ ಮಳೆಯು ಕೇವಲ ಮಳೆಯಾಗಿರಲಿಲ್ಲ. ಇದೊಂದು ರೀತಿಯಲ್ಲಿ ಕ್ಲೌಡ್ ಬಸ್ಟ್​ನಂತಿತ್ತು. ಬಿರುಗಾಳಿಯಂತೆ ಬೀಸಿದ ಗಾಳಿಗೆ ಮನೆಯ ಶೀಟ್​, ಹೆಂಚು, ಪೆಂಡಲ್​ಗಳು ಸಹ ಹಾರಿ ಹೋಗಿವೆ. ಇನ್ನೂ ಬಿರುಗಾಳಿ ಅಬ್ಬರ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದು, “ಯಾವತ್ತೂ ಈ ಥರ ಮಳೆ ಗಾಳಿ ನೋಡಿಲ್ಲ” ಎಂದು ಹಲವರು ಹೇಳುತ್ತಿದ್ದಾರೆ.

ಭಾರಿ ಬಿರುಗಾಳಿಯಿಂದಾಗಿ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು ಹಲವೆಡೆ ಇದುವರೆಗೂ ಕರೆಂಟ್ ಇಲ್ಲದಂತಾಗಿದೆ. ಅಲ್ಲದೆ, ಮನೆಗಳ ಛಾವಣಿ ಹಾರಿಹೋಗಿದ್ದು ಸನ್ನಿವೇಶಗಳು ಎನಾಗುತ್ತಿದೆ ದೇವರೆ ಎಂಬ ಉದ್ಘಾರ ಮೂಡಿಸುತ್ತಿದೆ.

#ಮಲೆನಾಡುಮಳೆ, #ಬಿರುಗಾಳಿ, #ಅಡಿಕೆತೋಟ, #ಮಲೆನಾಡುಟುಡೆ, #ಕರ್ನಾಟಕಹವಾಮಾನ, #ಮಳೆಗಾಲ, #ಶಿವಮೊಗ್ಗಸುದ್ದಿ#MalnadRain, #HeavyStorm, #KarnatakaWeather, #MonsoonUpdate, #MalenaduToday, #NatureForce, #ArecanutFarm

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor