ಹಾಗೆಲ್ಲಾ ಮಾತನಾಡಬಾರದು, ತಪ್ಪಾಗುತ್ತೆ”: ಡಿಸಿ ಸಮ್ಮುಖದಲ್ಲಿಯೇ ಗ್ರಾಮಸ್ಥನಿಗೆ ಕ್ಲಾಸ್

ಕೊನೆಯ ನವೀಕರಣ: 28 ಏಪ್ರಿಲ್ 2026, 7:33 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
ಹಾಗೆಲ್ಲಾ ಮಾತನಾಡಬಾರದು, ತಪ್ಪಾಗುತ್ತೆ”: ಡಿಸಿ ಸಮ್ಮುಖದಲ್ಲಿಯೇ ಗ್ರಾಮಸ್ಥನಿಗೆ ಕ್ಲಾಸ್

ಮಲೆನಾಡು ಟುಡೆ ಸುದ್ದಿ / ಇವತ್ತು ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳ ಸಮೇತ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರರವರು ವ್ಯಾಪಕ ಹಾನಿಯಾದ ಪ್ರದೇಶದಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು. ಈ ಹೀಗೆ ಮಾತನಾಡುತ್ತಿರುವಾಗ, ರೈತರೊಬ್ಬರು ಆಡಿದ ಮಾತಿಗೆ ಹಾಗೆಲ್ಲಾ ಮಾತನಾಡಬಾರದು ತಪ್ಪಾಗುತ್ತೆ ಎಂದು ಸಂಸದರು ಅವರ ಅಭಿಪ್ರಾಯವನ್ನು ಸರಿಪಡಿಸಿದರು.

ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವಿನ ಸಭೆಯಲ್ಲಿ, ಜಿಲ್ಲಾಧಿಕಾರಿಗಳ (ಡಿಸಿ) ಸಮ್ಮುಖದಲ್ಲಿಯೇ ರೈತರು ಆಡಿದ ಮಾತನ್ನ ತಪ್ಪೆಂದ ಸಂಸದರು, ಅಧಿಕಾರಿಗಳು ಸಮಸ್ಯೆ ಆಲಿಸಲು ಬಂದಾಗ, ಅವರ ಕಾರ್ಯವೈಖರಿಯ ಬಗ್ಗೆ ತಪ್ಪು ಸಂದೇಶ ರವಾನಿಸುವಂತೆ ಮಾತನಾಡಬಾರದು ಎಂದು ಸಾರ್ವಜನಿಕವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಭೆಯಲ್ಲಿ ಸೇರಿದ್ದ ಜನರ ಮಧ್ಯೆ ಒಬ್ಬರು, ಪರಿಹಾರ ಅಥವಾ ಸೌಲಭ್ಯದ ಕುರಿತು ‘ಅವರು ದುಡ್ಡು ಕೊಡಲ್ಲ’ ಎಂಬರ್ಥದಲ್ಲಿ ಮಾತನಾಡಿದ್ರು. ಈ ವೇಳೆ ತಕ್ಷಣವೇ ಮಧ್ಯಪ್ರವೇಶಿಸಿದ ಸಂಸದರು, “ಹಾಗೆಲ್ಲಾ ಮಾತನಾಡಬಾರದು, ಅದು ತಪ್ಪಾಗುತ್ತೆ. ಡಿಸಿ ಸಾಹೇಬರು ಬಂದು ನಿಂತಾಗ, ಅವರು ಕೊಡಲ್ಲ ಅಂತ ಅಂದುಬಿಟ್ರೆ ತಪ್ಪಾಗುತ್ತೆ” ಎಂದು ಬುದ್ಧಿವಾದ ಹೇಳಿದ್ದಾರೆ. ತಾವು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ, ಅಲ್ಲಿಯವರೆಗೆ ತಾಳ್ಮೆಯಿಂದ ಇರುವಂತೆ ಅವರು ಮನವಿಮಾಡಿದ್ರು.

#MalenaduToday, #ViralVideo, #LeaderWarning, #KarnatakaNews, #PublicMeeting, #ShivamoggaNews, #KannadaNews, #TrendingKarnataka, #NewsUpdate ,#TrendingNow, #KarnatakaPolitics, #ViralReels, #LocalNews, #DailyUpdates, #VoiceOfPeople, #KarnatakaViral

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor