ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಸರ್ಕಾರಿ ಬಸ್ ಅಡ್ಡಗಟ್ಟಿ ಪುಂಡಾಟ; ಸೆಲ್ಫಿ ಕ್ಲಿಕ್ಕಿಸಿ ಚಾಲಕ-ನಿರ್ವಾಹಕನಿಗೆ ಬೆದರಿಕೆ

ಹಂಚಿಕೊಳ್ಳಿ
WhatsApp Facebook X Telegram
Youths Block KSRTC Bus in Chikkamagaluru for Selfies
Youths Block KSRTC Bus in Chikkamagaluru for Selfies

ಚಿಕ್ಕಮಗಳೂರು | ಕುಡಿದ ಮತ್ತಿನಲ್ಲಿ ಇಬ್ಬರು ಪುಂಡರು ಸರ್ಕಾರಿ ಬಸ್​​ನ್ನು ಅಡ್ಡಗಟ್ಟಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಗಲಾಟೆ ಮಾಡಿರುವ ಘಟನೆ ಚಿಕ್ಕಮಗಳೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ ಐಸಿಸ್ ಮಾಡ್ಯುಲ್​ ಸ್ಕೆಚ್​ : ಅರಾಫತ್​ ಅಲಿಗೆ ಎಲ್ಲಾ ಸೆಕ್ಷನ್​ಗಳಲ್ಲಿ ಸರಣಿ ಶಿಕ್ಷೆ! NIA ಕೋರ್ಟ್​ ತೀರ್ಪು ಗಮನಿಸಿ

ಘಟನೆ

ಇನ್ನೂ ಘಟನೆ ವಿವರ ನೊಡುವುದಾದರೆ ಕಡೂರಿನಿಂದ ಚಿಕ್ಕಮಗಳೂರು ಮಾರ್ಗವಾಗಿ ಬರುತ್ತಿದ್ದ ಸರ್ಕಾರಿ ಬಸ್ಸನ್ನು ಅಡ್ಡಗಟ್ಟಿದ ಈ ಕಿಡಿಗೇಡಿಗಳು, ತಮ್ಮ ಆಟೋವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದಾರೆ. ಬಳಿಕ ಬಸ್ಸಿನ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮಾರ್ಗಮಧ್ಯೆ ಈ ರೀತಿಯ ವರ್ತನೆಯಿಂದ ಆತಂಕಗೊಂಡ ಬಸ್ ಚಾಲಕ ಮತ್ತು ನಿರ್ವಾಹಕರು ಗಾಡಿ ತೆಗೆಯುವಂತೆ ಮನವಿ ಮಾಡಿದರೂ ಪುಂಡರು ಕಿಂಚಿತ್ತೂ ಕ್ಯಾರೆ ಅಂದಿಲ್ಲ. 

ಅಷ್ಟೇ ಅಲ್ಲದೆ, ಚಾಲಕ ಹಾಗೂ ನಿರ್ವಾಹಕರಿಗೆ ಬೆದರಿಕೆ ಹಾಕಿದ ಯುವಕರು, ನಮ್ಮದು ಸಿರ್ಸಿ ಎಲ್ಲಾಪುರ ಡಿಪೋ ಗೊತ್ತಾ ನಿಮಗೆ ಎಂದು ಅವಾಜ್ ಹಾಕಿದ್ದಾರೆ. ಇಡೀ ಘಟನೆಯನ್ನು ಬಸ್ ನಿರ್ವಾಹಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ.

Youths Block KSRTC Bus in Chikkamagaluru for Selfies

Youths Block KSRTC Bus in Chikkamagaluru  for Selfies
Youths Block KSRTC Bus in Chikkamagaluru for Selfies
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor