ಕೆರೆಗಿಳಿಯುವರೆಗೂ ಎಲ್ಲವೂ ಚೆನ್ನಾಗಿತ್ತು! ಮುತ್ತಿನಕೆರೆಯಲ್ಲಿ ನಡೆದು ಹೋಯ್ತು ದುರಂತ!

ಹಂಚಿಕೊಳ್ಳಿ
WhatsApp Facebook X Telegram
Youth Drowns While Fishing at Muttinakere in Huncha Village
Youth Drowns While Fishing at Muttinakere in Huncha Village

Muttinakere in Huncha Village / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಿಪ್ಪನ್‌ಪೇಟೆ / ಇಲ್ಲಿನ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಬಗ್ಗೆ ನಿನ್ನೆ ದಿನ ಮಂಗಳವಾರ ವರದಿಯಾಗಿದೆ.

ಸ್ಥಳೀಯ ವರದಿಗಾರ, ರಫಿ ರಿಪ್ಪನ್​ಪೇಟೆಯವರು ಮಲೆನಾಡು ಟುಡೆಗೆ ನೀಡಿರುವ ವರದಿ ಪ್ರಕಾರ, ಯುವಕ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಮಂಜುನಾಥ ನಗರದ ನಿವಾಸಿ ಮಹೇಂದ್ರ(31) ಸಾವನ್ನಪ್ಪಿದಾತ.

ಕೆರೆಯಲ್ಲಿ ಬಲೆಹಾಕಿ ಮೀನು ಹಿಡಿಯುವ ಸಂದರ್ಭ ಕಾಲುಜಾರಿ ಬಿದ್ದ ಮಹೇಂದ್ರ, ಬಳಿಕ ನೀರಿನಿಂದ ಮೇಲಕ್ಕೆ ಬರಲಾಗದೇ ಮುಳುಗಿದ್ದಾನೆ. ಈ ಬಗ್ಗೆ ಸ್ಥಳೀಯರು ಆತನನ್ನು ಹುಡುಕುವ ಪ್ರಯತ್ನಮಾಡಿದಾದರೂ ಸಾಧ್ಯವಾಗಲಿಲ್ಲ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಮತ್ತು ಪೊಲೀಸರು ಕೆರೆಯಲ್ಲಿ ಹುಡುಕಾಟ ನಡೆಸಿ ಯುವಕನ ಶವ ಹೊರತೆಗೆದಿದ್ದಾರೆ. ಈ ಸಂಬಂಧ ಪತ್ನಿ ನೀಡಿದ ದೂರಿನನ್ವಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಹೊಸನಗರ ಅಗ್ನಿಶಾಮಕ ಠಾಣಾಧಿಕಾರಿ ಆನಂದಪ್ಪ ಎನ್. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜೇಶ್ ಕೆ.ಎಚ್., ಮಂಜುನಾಥ್ ಬಿ., ಆಂಜನೇಯ ಬಿ.ಸಿ., ಸುರೇಶ್ ಗೌಡ ಸಿ. ಪಾಟೀಲ್, ಪ್ರವೀಣ್ ಕುಮಾರ್ ಬಿ.ಬಿ. ಮತ್ತು ಅಶ್ಪಕ್ ಬಿ ಪಾಲ್ಗೊಂಡಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor