ಗೋಕರ್ಣದಲ್ಲಿ ರಾಘವೇಶ್ವರ ಶ್ರೀ 33ನೇ ಚಾತುರ್ಮಾಸ್ಯ! ಅನ್ನಬ್ರಹ್ಮ ದ ಪರಿಕಲ್ಪನೆ! ವಿವರ ಹೀಗಿದೆ

ಹಂಚಿಕೊಳ್ಳಿ
WhatsApp Facebook X Telegram
Sri Raghaveshwara Bharati Swamiji Begins 33rd Chaturmasya in Gokarna
Sri Raghaveshwara Bharati Swamiji Begins 33rd Chaturmasya in Gokarna

Sri Raghaveshwara Bharati Swamiji / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಾಗರ / ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಮ್ಮ 33ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆಯನ್ನು ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ಕೈಗೊಳ್ಳುತ್ತಿದ್ದಾರೆ.

ಜುಲೈ29ರಿಂದ ಸೆಪ್ಟೆಂಬರ್ 26ರವರೆಗೆ ಈ ಚಾತುರ್ಮಾಸ್ಯ ವೃತಾಚರಣೆ ನಡೆಯಲಿದೆ ಎಂದು ಮಠದ ಮಾಧ್ಯಮ ಸಂಯೋಜಕ ಸಂದೇಶ್ ತಲಕಾಲಕೊಪ್ಪ ತಿಳಿಸಿದ್ದಾರೆ.
ಧಾರ್ಮಿಕತೆಯ ಜೊತೆಗೆ ಜನಜಾಗೃತಿ ಎಂಬಂತೆ ಶ್ರೀಗಳು ಪ್ರತಿ ವರ್ಷದ ಚಾತುರ್ಮಾಸ್ಯವನ್ನು ಜನಜಾಗರಣಕ್ಕೆ ವಿಷಯಾಧಾರಿತವಾದ ಬಳಸಿಕೊಳ್ಳುತ್ತಿದ್ದಾರೆ.

ಈ ವರ್ಷ ಆಹಾರದ ಕುರಿತಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಲು ಅನ್ನಬ್ರಹ್ಮ ಚಾತುರ್ಮಾಸ್ಯ ಎಂಬ ಹೆಸರಿನೊಂದಿಗೆ ಚಾತುರ್ಮಾಸ್ಯವನ್ನು ಸಂಕಲ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆಹಾರದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದಷ್ಟೇ ಅಲ್ಲದೆ ಅನ್ನವನ್ನು ಗೌರವಿಸುವ ಸಂಸ್ಕೃತಿಯನ್ನು ಪುನರುಜ್ಜಿವನಗೊಳಿಸುವುದು ಈ ಬಾರಿಯ ಚಾತುರ್ಮಾಸ್ಯದ ಪರಿಕಲ್ಪನೆಯಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor