JP STORY

ಯೂಟ್ಯೂಬ್​ ನೋಡಿ, ಹಳೆಯ ಎಕ್ಸಲ್​ನ್ನು ಇವಿಗೆ ಬದಲಾಯಿಸಿದ ವಿದ್ಯಾರ್ಥಿ! ಹೇಗಾಯ್ತು ಈ ಸಾಧನೆ ಇಲ್ಲಿದೆ ಸ್ಟೋರಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಸಾಮಾನ್ಯವಾಗಿ ಟ್ಯಾಲೆಂಟ್​ ಯಾರಲ್ಲಿ ಇರುತ್ತೆ ? ಹೇಗೆ ಇರುತ್ತೆ? ಯಾವ ರೀತಿ ಹೊರಬರುತ್ತೆ ಎಂದು ಹೇಳಲು ಆಗಲ್ಲ, ಊಹಿಸಲು ಆಗಲ್ಲ . ಇದಕ್ಕೆ ಉದಾಹರಣೆ ಎಂಬಂತೆ ಚಿಕ್ಕಮಗಳೂರಿನ ಒಂದು ವಿಚಾರ, ಇದೀಗ ಮೀಡಿಯಾ ಸುದ್ದಿಯಾಗುತ್ತಿದೆ. ಇಲ್ಲೊಬ್ಬರು ತಮ್ಮ ಹಳೆಯ ಟಿವಿಎಸ್​ ಎಕ್ಸಲ್​​ನ್ನೇ ಈ ವೆಹಿಕಲ್ ಆಗಿ ಕನ್​ವರ್ಟ್​ ಮಾಡಿದ್ದಾರೆ. ಸದ್ಯ ಈ ವಿಷಯವೇ ಮಲೆನಾಡ ಮಡ್ ರೋಡಗಳಲ್ಲಿ ಚರ್ಚೆಗೆ ಬಂದಿದೆ.

ಚಿಕ್ಕಮಗಳೂರು ಸ್ಟೋರಿ, ಮನಸ್ಸಿದ್ದರೇ ಮಾರ್ಗ ಕಣ್ರಿ

ಹೌದು, ಟಿವಿಎಸ್ ಎಕ್ಸೆಲ್ ಮೊಪೆಡ್ ಬೈಕನ್ನು ಬ್ಯಾಟರಿ ಚಾಲಿತ ಇ- ಬೈಕ್ ಆಗಿ ಪರಿವರ್ತಿಸುವ ಮೂಲಕ ಚಿಕ್ಕಮಗಳೂರಿನ ಯುವಕರೊಬ್ಬರು ಗಮನ ಸೆಳೆಯುತ್ತಿದ್ದಾರೆ. ತಾಲೂಕಿನ ಕುರುವಂಗಿ ಗ್ರಾಮದ ಸುನಿಲ್​ ತಮ್ಮ ಬಳಿ ಇದ್ದ ಹಳೇಯ ಗಾಡಿಯನ್ನೇ ಇ-ಬೈಕ್ ಆಗಿ ಬದಲಾಯಿಸಿದ್ದಾರೆ. ಇದಕ್ಕಾಗಿ ಸುಮಾರು 45 ಸಾವಿರ ರೂಪಾಯಿ ಖರ್ಚು ಮಾಡಿ ತಮ್ಮ ಪ್ರಯತ್ನದಲ್ಲಿ ಯಶಸ್ಸು ಸಹ ಗಳಿಸಿದ್ದಾರೆ.

ತಮಿಳುನಾಡಿನ ಪ್ರೇರಣೆ, ಯೂಟ್ಯೂಬ್​ನಿಂದ ಮಾಹಿತಿ

ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಸುನಿಲ್​. ಏನಾದರೂ ಹೊಸದಾಗಿ ಮಾಡಬೇಕು ಅಂದುಕೊಂಡಿದ್ದ ಇವರಿಗೆ ಯೂಟ್ಯೂಬ್ ನಲ್ಲಿ ತಮಿಳುನಾಡಿನ ಯುವಕ ನೊಬ್ಬ ಬೈಕ್ ರೆಡಿ ಮಾಡಿದ ವಿಡಿಯೋ ಪ್ರೇರಣೆ ಕೊಟ್ಟಿದೆ. ಹೇಗಿದ್ದರೂ ತಮ್ಮದೊಂದು ಓಲ್ಡ್​ ಗಾಡಿಯಿದೆ. ಅದನ್ನೆ ಏಕೆ ಇವಿ ವೆಹಿಕಲ್ ಮಾಡಬಾರದು ಎಂದುಕೊಂಡವರೆ ಕಾರ್ಯಪ್ರವೃತ್ತ ರಾಗಿದ್ದಾರೆ. ಆ ಕೆಲಸ ಇದೀಗ ಸಕ್ಸಸ್ ತಂದುಕೊಟ್ಟಿದೆ.

ಇನ್ನೂ ಈ ಬೈಕ್​ಗೆ 750 ವೋಲ್ಟ್ ಮೋಟಾರ್, 48 ವೋಲ್ಟ್ 30 AH ಬ್ಯಾಟರಿ ಹಾಗೂ 1000 ವ್ಯಾಟ್ ಕಂಟ್ರೋಲ‌ರ್ ಬಳಸಲಾಗಿದೆ. ಕೇವಲ 4 ಗಂಟೆ ಚಾರ್ಜ್ ಮಾಡಿದರೆ ಬರೋಬ್ಬರಿ 45 ಕಿಲೋಮೀಟರ್ ಮೈಲೇಜ್ ನೀಡುತ್ತಿದೆ. ಈ ನಿಟ್ಟಿನಲ್ಲಿ ಕಂಡುಕೊಂಡ ಯಶಸ್ಸು, ಸುನಿಲ್​ಗೆ ಒಂದಿಷ್ಟು ಹೆಸರು ತಂದುಕೊಡುತ್ತಿದೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ