ಶಿಕಾರಿಪುರ ಬಸ್ ಹತ್ತಿ ಟಿಕೆಟ್ ತೆಗೆದುಕೊಳ್ಳುವಾಗ ಎದುರಾಗಿತ್ತು ಶಾಕ್! ಮಹಿಳೆಯರೇ ಹುಷಾರ್!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS

ಶಿವಮೊಗ್ಗ ನಗರ ಬಸ್​ ನಿಲ್ದಾಣದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ದಾಖಲಾಗಿದೆ.  ಶಿಕಾರಿಪುರಕ್ಕೆ ಹೊರಟಿದ್ದ ಮಹಿಳೆಯೊಬ್ಬರಿಗೆ ಸೇರಿದ್ದ ಒಂದು ಲಕ್ಷಕ್ಕೂ ಅಧಿಕ ಮೌಲ್ಯ ಬಂಗಾರವಿದ್ದ ಬ್ಯಾಗ್​ನ್ನ ಕಳ್ಳರು ಕದ್ದೊಯ್ದಿದ್ದಾರೆ. 

ನಡೆದಿದ್ದೇನು?

ಶಿಕಾರಿಪುರಕ್ಕೆ ಹೋಗಬೇಕಿದ್ದ ಮಹಿಳೆಯೊಬ್ಬರು ಶಿವಮೊಗ್ಗಕ್ಕೆ ಬಂದು ಶಿವಮೊಗ್ಗ ಕೆಎಸ್​ಆರ್​​ಟಿಸಿ  ನಿಲ್ದಾಣದಲ್ಲಿ ಶಿಕಾರಿಪುರದ ಬಸ್ ಹತ್ತಿದ್ದಾರೆ.  ಕೆಎಸ್ ಆರ್ ಟಿ ಸಿ ಬಸ್ ಸ್ವಲ್ಪ ದೂರ ಹೊರಟಾಗ ಸಂಜೆ 04-40 ಗಂಟೆಗೆ ಟಿಕೇಟ್ ತೆಗೆಸಲು ಮಹಿಳೆ ವ್ಯಾನಿಟಿ ಬ್ಯಾಗ್ ಕೈ ಹಾಕಿದ್ಧಾರೆ. ಆಗ ಅವರಿಗೆ ಅಲ್ಲಿ ಆಘಾತವಾಗಿತ್ತು. ಕಾರಣ,  ವ್ಯಾನಿಟಿ ಬ್ಯಾಗ್ ಜಿಪ್ ತೆರೆದಿದ್ದು ವ್ಯಾನಿಟಿ ಬ್ಯಾಗ್ ಒಳಗಿದ್ದ  ಪರ್ಸ್ ಇರಲಿಲ್ಲ. 

ಆ ಪರ್ಸ್​ನಲ್ಲಿ  01) ಸುಮಾರು 30 ಗ್ರಾಂ ತೂಕದ 02 ಎಳೆಯ ಬಂಗಾರದ ಸರ ಅಂದಾಜು ಬೆಲೆ ಸುಮಾರು 85000/- ರೂ 02) ಸುಮಾರು 02 ಗ್ರಾಂ ತೂಕದ ಬಂಗಾರದ ಕಿವಿ ರಿಂಗ್ ಅಂದಾಜು ಬೆಲೆ ಸುಮಾರು 6000/- ರೂ ಬೆಲೆ ಬಾಳುವ 03) 01 ಗ್ರಾಂ ತೂಕ ಬಂಗಾರದ ಕಿವಿ ಗುಂಡು ಅಂದಾಜು ಬೆಲೆ 3000/- ರೂ 4) ಸುಮಾರು 04 ಗ್ರಾಂ ತೂಕ ಬಂಗಾರದ ಕಿವಿ ಓಲೆ ಅಂದಾಜು ಬೆಲೆ 20000/- ರೂ, ಮತ್ತು 05 9000/- ರೂ ನಗದು ಹಣವಿತ್ತು. ಅದನ್ನು  ಯಾರೋ ಕಳ್ಳರು ಕದ್ದೊಯ್ದಿದ್ದರು. 

ಸದ್ಯ ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು, ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ (Doddpet Police Station) ಪ್ರಕರಣ ದಾಖಲಾಗಿದೆ  

 

ರಸ್ತೆ ಬದಿ ನಿಂತಿದ್ದ ಲಾರಿಯನ್ನೆ ಕದ್ದೊಯ್ಯಲು ಯತ್ನಿಸಿದ ಕಳ್ಳರು!

ತಡರಾತ್ರಿಯಲ್ಲಿ ಬಂದು ಲಾರಿಯೊಂದನ್ನ ಕದಿಯಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು (Sagara Taluk) ಆನಂದಪುರದಲ್ಲಿ ನಡೆದಿದೆ. 

ಏನಿದು ಘಟನೆ 

ಆನಂದಪುರದ ಅಶೋಕ ರಸ್ತೆಯಲ್ಲಿ ಸ್ಥಳೀಯ ನಿವಾಸಿಯೊಬ್ಬರು ಲಾರಿಯೊಂದನ್ನ ಪಾರ್ಕ್ ಮಾಡಿದ್ದರು. ಇದನ್ನ ಗಮನಿಸಿದ್ದ ದುಷ್ಕರ್ಮಿಗಳು ತಡರಾತ್ರಿ ಲಾರಿಯ ಬಳಿಗೆ ಬಂದು, ಅದನ್ನ ಸ್ಟಾರ್ಟ್​ ಮಾಡಿ ಕೊಂಡೊಯ್ಯಲು ಯತ್ನಿಸಿದ್ದಾರೆ. ಆದರೆ ಎಷ್ಟೆ ಪ್ರಯತ್ನಿಸಿದರೂ ಲಾರಿ ಸ್ಟಾರ್ಟ್ ಆಗಲಿಲ್ಲ. ಹೀಗಾಗಿ ಲಾರಿ ಕದಿಯುವ ಯತ್ನ ಬಿಟ್ಟು, ಲಾರಿಯಲ್ಲಿದ್ದ ಡೀಸೆಲ್​ ಕದ್ದು ಪರಾರಿಯಾಗಿದ್ದಾರೆ. ಈ ಘಟನೆ  ಸ್ಥಳೀಯ ನಿವಾಸಿಯೊಬ್ಬರು ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.   


ಇನ್ನಷ್ಟು ಸುದ್ದಿಗಳು


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor