KARNATAKA NEWS/ ONLINE / Malenadu today/ Sep 23, 2023 SHIVAMOGGA NEWS’
ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಮಾರಾಮಾರಿ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಿರಣ್ ಹಾಗೂ ಪವನ್ ಎಂಬ ಬಾಲ್ಯಸ್ನೇಹಿತರ ನಡುವಿನ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಎಂಟು ಮಂದಿಯನ್ನ ಅರೆಸ್ಟ್ ಮಾಡಲಾಗಿದೆ.
ಇನ್ನೂ ಪ್ರಕರಣದ ಬಗ್ಗೆ ಇವತ್ತು ಎಸ್ಪಿ ಮಿಥುನ್ ಕುಮಾರ್ (SP Mithun Kumar) ಮಾತನಾಡಿದ್ದು, ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಎಂಟು ಆರೋಪಿಗಳನ್ನ ಅರೆಸ್ಟ್ ಮಾಡಿ ಜೆಸಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
BREAKING NEWS / ಶಿವಮೊಗ್ಗದ ಆಲ್ಕೋಳ ಸಮೀಪ ಎರಡು ಗುಂಪುಗಳ ಮಾರಾಮಾರಿ! ಐವರಿಗೆ ಇರಿತ! ಮೆಗ್ಗಾನ್ಗೆ ದಾಖಲು
ಇಷ್ಟಕ್ಕೂ ನಡೆದಿದ್ದೇನು?
ಕಿರಣ್ ಮತ್ತು ಪವನ್ ಇಬ್ಬರು ಬಾಲ್ಯಸ್ನೇಹಿತರು, ಅವರ ನಡುವೆ ಕೆಲವೊಂದು ವಿಷಯಗಳಿಗೆ ಬಿನ್ನಾಭಿಪ್ರಾಯವಿತ್ತು. ಅಂದು ಮಧ್ಯರಾತ್ರಿಯವರೆಗೂ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ. ಈ ವೇಳೇ ಮೈಮೇಲೆ ಏಕೆ ಬೀಳ್ತಿಯಾ ಎಂಬ ವಿಷಯದ ಹಿಡಿದು ಕೆಲವು ಮಾತುಕತೆಗಳು ಇಬ್ಬರ ನಡುವೆ ನಡೆದಿದೆ.
ಈ ವೇಳೆ ಅಲ್ಲಿಯು ಕಿತ್ತಾಟ ನಡೆದಿದೆ. ಆನಂತರ ಕಿರಣ್ ಪವನ್ಗೆ ಫೋನ್ ಕಾಲ್ ಮಾಡಿ ಎಲ್ಲಿದ್ಯೋ ನೀನು ಬಾರೋ ನೋಡ್ಕೊಳ್ತೀನಿ ಎಂದು ಹೇಳಿದ್ದಾನೆ. ಇದರಿಂದ ಪ್ರಚೋದನೆಗೆ ಒಳಗಾದ ಪವನ್ ಹುಡುಗರ ಜೊತೆ ಮಾರಕಾಸ್ತ್ರಗಳ ಜೊತೆಗೆ ಕಿರಣ್ ಆ್ಯಂಡ್ ಗ್ಯಾಂಗ್ ಮೇಲೆ ಅಟ್ಯಾಕ್ ಮಾಡಿದ್ದಾನೆ. ಘಟನೆಯಲ್ಲಿ ಒರ್ವನಿಗೆ ಗಂಭೀರ ಗಾಯವಾಗಿದ್ದು, ಉಳಿದವರಿಗೆ ಮೈನರ್ ಇಂಜುರಿಯಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?