ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ / ರಸ್ತೆಯಲ್ಲೆ ಕಾರು ನಿಲ್ಲಿಸಿದ್ದಲ್ಲದೇ ಕೇಳಿದ್ದಕ್ಕೆ ಸರ್ಕಾರಿ ವಾಹನ ಅಂತಾ ದರ್ಪ ತೋರಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ತಕ್ಕುದಾದ ಉತ್ತರ ಕೊಟ್ಟಿದ್ದಾರೆ.

ಶಿವಮೊಗ್ಗದ ಆಯನೂರು ಗೇಟ್ ಬಳಿ ಸರ್ಕಲ್ ಸಮೀಪವೇ ಕಾರು ನಿಲ್ಲಿಸಿ ತೊಂದರೆ ಉಂಟುಮಾಡುತ್ತಿದ್ದ ಅಬಕಾರಿ ಇಲಾಖೆಯ ವಾಹನವೊಂದರ ವಿರುದ್ಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.
ನಡೆದ ಘಟನೆಯನ್ನು ಗಮನಿಸುವುದಾದರೆ, ಸಾಗರ ರಸ್ತೆಯಲ್ಲಿರುವ ಆಯನೂರು ಗೇಟ್ ಸರ್ಕಲ್ ಬಳಿ ಅಬಕಾರಿ ಇಲಾಖೆಗೆ ಸೇರಿದ ವೆಹಿಕಲ್ನ್ನ ಅದರ ಚಾಲಕ ರಸ್ತೆಯಲ್ಲಿಯೇ ನಿಲ್ಲಿಸಿದ್ದ. ಸರ್ಕಲ್ ಬಳಿ ನಿಲ್ಲಿಸಿದ್ದರಿಂದ ಆ ಮಾರ್ಗದಲ್ಲಿ ಹೋಗುವ ವಾಹನಗಳಿಗೆ ಸಮಸ್ಯೆಯಾಗಿತ್ತು.
ಈ ಬಗ್ಗೆ ಚಾಲಕನನ್ನು ಸ್ಥಳೀಯರು ಹಾಗೂ ಇತರೇ ವಾಹನ ಸವಾರರು ಕಾರಿನ ಚಾಲಕನನ್ನು ಪ್ರಶ್ನೆ ಮಾಡಿ ತಗಾದೆ ತೆಗೆದಿದ್ದಾರೆ. ಪ್ರತ್ಯುತ್ತರವಾಗಿ ಕಾರು ತೆಗೆಯಬೇಕಿದ್ದ ಚಾಲಕ ಇದು ಗೌರ್ಮೆಂಟ್ ವೆಹಿಕಲ್ ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ. ಅವರು ಬರುವರೆಗೂ ಕಾರು ತೆಗೆಯೋದಿಲ್ಲ ಎಂದಿದ್ದಾನೆ.

ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದ ಶಿವಮೊಗ್ಗ ಹೊಸಮನೆ ನಿವಾಸಿ! 5 ಕೇಸ್ನಲ್ಲಿ ಎನ್ಕ್ವೈರಿ!
ಇದೇ ಸಂದರ್ಭದಲ್ಲಿ ಅಲ್ಲಿದ್ದವರು ನಿಮ್ಮ ಕೆಲಸಕ್ಕಾಗಿ ಜನರಿಗೆ ತೊಂದರೆ ಕೊಡಬೇಡಿ ಎಂದರು ಚಾಲಕ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೀಗಾಗಿ ಸ್ಥಳೀಯರು ಶಿವಮೊಗ್ಗ ಟ್ರಾಫಿಕ್ ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸಂಚಾರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ದೇವರಾಜ್ ಸ್ಥಳಕ್ಕೆ ಬಂದು ಕಾರು ಸ್ಥಳದಿಂದ ತೆಗೆಯುವಂತೆ ಸೂಚಿಸಿದ್ದಾರೆ. ಅಲ್ಲದೆ ನಿಯಮ ಉಲ್ಲಂಘಿಸಿದಕ್ಕೆ ಸ್ಥಳದಲ್ಲಿಯೇ ದಂಡ ವಿಧಿಸಿದ್ದಾರೆ.
ಇದೆನ್ನೆಲ್ಲಾ ಗಮನಿಸಿದ ಸ್ಥಳೀಯರು ಯಾರಾದರೂ ಆಗಲಿ ರೂಲ್ಸ್ ಅಂದಮೇಲೆ ಒಂದೇನೆ. ರೋಡಲ್ಲಿ ವೆಹಿಕಲ್ ನಿಲ್ಲಿಸೋದು ತಪ್ಪಲ್ವಾ. ನೀವು ಸರಿಯಾಗಿ ಮಾಡಿದ್ರಿ ಅಂತಾ ಇನ್ಸ್ಟೆಕ್ಟರ್ನ್ನ ಹೊಗಳಿ ಅಲ್ಲಿಂದ ತೆರಳಿದ್ರು
ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Why did Traffic Inspector Devaraj fine the driver of an Excise Department vehicle at Ayanur Gate Circle in Shivamogga, and how did the public react?
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.