KARNATAKA NEWS/ ONLINE / Malenadu today/ Jun 27, 2023 SHIVAMOGGA NEWS
ಶಿವಮೊಗ್ಗ ದಿನಾಂಕ: 08-06-2023 ರಂದು ರಾತ್ರಿ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ಗಂದ್ರಳ್ಳಿ ಗ್ರಾಮದ ಗೋವಿಂದ ನಾಯ್ಕ ರವರ ಮನೆಯ ಹಂಚನ್ನು ತಗೆದು ಕಳ್ಳರು ಬಂಗಾರದ ಆಭರಣಗಳು ಹಾಗೂ ನಗದನ್ನು ಕದ್ದೊಯ್ದಿದ್ದರು. ಈ ಸಂಬಂಧ 457, 380 ಐಪಿಸಿ ಅಡಿ ಕೇಸ್ ದಾಖಲಾಗಿತ್ತು. ಇದೀಗ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ಧಾರೆ.
ತನಿಖಾ ತಂಡವು ದಿನಾಂಕ: 24-06-2023 ರಂದು ಪ್ರಕರಣದ ಆರೋಪಿತರಾದ 1) ಸುದರ್ಶನ, ಬಿಳಕಿಗ್ರಾಮ ಹೊಸನಗರ ತಾಲ್ಲೂಕು, 2) ಆದರ್, ಬಿಳಕಿಗ್ರಾಮ ಹೊಸನಗರ ತಾಲ್ಲೂಕು ಮತ್ತು 3) ಮದುಸೂಧನ, ಬಿಳಕಿಗ್ರಾಮ ಹೊಸನಗರ ತಾಲ್ಲೂಕು ಇವರುಗಳನ್ನು ದಸ್ತಗಿರಿ ಮಾಡಿದೆ
3 ಲಕ್ಷ ಮೌಲ್ಯದ ಚಿನ್ನ ಜಪ್ತಿ
ಅಲ್ಲದೆ ಆರೋಪಿತರಿಂದ ಪ್ರಕರಣಕ್ಕೆ ಸಂಭಂದಿಸಿದ ಅಂದಾಜು ಮೌಲ್ಯ 3,00,000/- ರೂಗಳ ಒಟ್ಟು 103 ಗ್ರಾಂ ಬಂಗಾರದ ಆಭರಣಗಳು ಹಾಗೂ ಬೆಳ್ಳಿಯ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.
ತೀರ್ಥಹಳ್ಳಿ ಹನಿಟ್ರ್ಯಾಪ್ ಕೇಸ್! ಪೊಲೀಸ್ ಪ್ರಕಟಣೆಯಲ್ಲಿ ಏನಿದೆ ಗೊತ್ತಾ?
ತೀರ್ಥಹಳ್ಳಿಯಲ್ಲಿ ನಡೆದಿರೋ ಹನಿಟ್ರ್ಯಾಪ್ ಕೇಸ್ನ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಪ್ರಮುಖ ಮಾಹಿತಿಗಳನ್ನ ನೀಡಿದೆ. ಪೊಲೀಸ್ ಇಲಾಖೆಯಿಂದ ಹೊರಬಿದ್ದ ಪ್ರಕಟಣೆಯಲ್ಲಿನ ಮಾಹಿತಿಯನ್ನು ಗಮನಿಸುವುದಾದರೆ, ನಡೆದ ಕ್ರೈಂನಲ್ಲಿ ಓರ್ವ ಯುವತಿ ಹಾಗೂ ಇಬ್ಬರು ಯುವಕರನ್ನ ಬಂಧಿಸಲಾಗಿದೆ.
ಬಂಧಿತರು ಯಾರ್ಯಾರು?
ಸೌರಭ @ ಅನನ್ಯ, 22 ವರ್ಷ, ತೀರ್ಥಹಳ್ಳಿ, ಅಬೂಬಕರ್ ಸಿದ್ದಿಕಿ, 26 ವರ್ಷ, ತೀರ್ಥಹಳ್ಳಿ ಮತ್ತು ಮೋಹಿತ್ ಗೌಡ, 28 ವರ್ಷ, ತೀರ್ಥಹಳ್ಳಿ ತಾಲ್ಲೂಕು ರವರುಗಳನ್ನು ಪೊಲೀಸರು ಬಂಧಿಸಿದ್ಧಾರೆ.
ಪ್ರಕಟಣೆಯಲ್ಲಿ ಇದ್ದಂತೆ
ತೀರ್ಥಹಳ್ಳಿ ತಾಲ್ಲೂಕಿನ ಉಂಟೂರುಕಟ್ಟೆ ಕೈಮರದ ವಾಸಿ ವ್ಯಕ್ತಿಯೊಬ್ಬರಿಗೆ ಯುವತಿಯೊಬ್ಬಳು ಮೊಬೈಲ್ ಮುಖಾಂತರ ಪರಿಚಯವಾಗಿ ಫೊನ್ ನಲ್ಲಿ ಸಲುಗೆಯಿಂದ ಮಾತನಾಡುತ್ತಿದ್ದು, ದಿನಾಂಕಃ 05-04-2023 ರಂದು ಆಕೆಯು ದೂರುದಾರರ ಮನೆಗೆ ಬಂದಿದ್ದಾಳೆ. ಆನಂತರ ಯುವತಿಯ ಕಡೆಯ ವ್ಯಕ್ತಿಗಳು ಏಕಾಏಕಿ ಆತನ ಮನೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ ಯುವತಿಯೊಂದಿಗೆ ಅಶ್ಲೀಲವಾದ ಫೋಟೋ ಮತ್ತು ವೀಡಿಯೋಗಳನ್ನು ಚಿತ್ರೀಕರಿಸಿದ್ದಾರೆ. ಅಲ್ಲದೆ, ನೀನು ಹಣ ಕೊಡದೆ ಇದ್ದರೆ ಇವುಗಳನ್ನು ನಿನ್ನ ಹೆಂಡತಿಗೆ ಕಳುಹಿಸುತ್ತೇವೆ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲಿಸುತ್ತೇವೆಂದು ಹೆದರಿಸಿದ್ದಾರೆ.
ಬಳಿಕ ಹಣವನ್ನು ತೆಗೆದುಕೊಂಡು ಹೋಗಿದ್ದಷ್ಟೆ ಅಲ್ಲದೆ, ಪುನಾಃ ಬೆದರಿಸಿ ಹಣವನ್ನು ಪಡೆದಿದ್ದಾರೆ., ಆನಂತರವೂ ಸಹಾ ನೀನು ಹಣ ಕೊಡದಿದ್ದರೆ ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಸಂಬಂಧ ನೊಂದ ವ್ಯಕ್ತಿಯು ದೂರು ನೀಡಿದ್ದು, ಈ ಸಂಬಂಧ ಐಪಿಸಿ 386, 388 ಸಹಿತ 149 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆದಿದೆ.