BREAKING NEWS / ಎರಡು ದಿನಗಳಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಮೂವರು ಬಾಲಕರ ರಕ್ಷಣೆ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS

ಶಿವಮೊಗ್ಗ ರೈಲ್ವೆ ಪೊಲೀಸರು ಎರಡು ದಿನದಲ್ಲಿ ಮೂವರು ಅಪ್ರಾಪ್ತರನ್ನು ರಕ್ಷಿಸಿದ್ದಾರೆ.  ಕಳೆದ ಆಗಸ್ಟ್ 30 ರಂದು ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ಹಾಕಿಕೊಂಡಿದ್ದ ಬಾಲಕನನ್ನ ರಕ್ಷಿಸಿದ ಪೊಲೀಸರು ಆನಂತರ ಆ ಬಾಲಕನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಿದ್ದರು. ಸದ್ಯ ಆ ಬಾಲಕನ ಗುರುತು ಪರಿಚಯ ವಿಚಾರಿಸಿ, ಅವರ ಪೋಷಕರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. 

ಬ್ಯಾಗ್ ಹಾಕ್ಕೊಂಡು ರೈಲ್ವೆ ನಿಲ್ದಾಣದಲ್ಲಿದ್ದ ಬಾಲಕನನ್ನ ರಕ್ಷಿಸಿದ ಶಿವಮೊಗ್ಗ ರೈಲ್ವೆ ಪೊಲೀಸ್

ಇದರ ಬೆನ್ನಲ್ಲೆ ಆಗಸ್ಟ್ 31 ರಂದು ಅಂದರೆ ನಿನ್ನೆ OperationNanheFariste ಅಡಿಯಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸರು  RPF/ Shivamogga ಇಬ್ಬರು ಅಪ್ರಾಪ್ತರನ್ನು ರಕ್ಷಣೆ ಮಾಡಿದ್ದಾರೆ. ಸರಿಸುಮಾರು 16 ವರ್ಷದ ಇಬ್ಬರು ಬಾಲಕರನ್ನ ರಕ್ಷಿಸಿರುವ ಪೊಲೀಸರು, ಅವರನ್ನ ಮಕ್ಕಳ ಕಲ್ಯಾಣ ಸಮಿತಿ ಸುಪರ್ಧಿಗೆ  ಒಪ್ಪಿಸಿದ್ದಾರೆ. ಈ ಬಗ್ಗೆ ರೈಲ್ವೆ ಪೊಲೀಸ್ ಇಲಾಖೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ,. 


ಇನ್ನಷ್ಟು ಸುದ್ದಿಗಳು 


 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor