THIRTHAHALLI

ಮನೆಯ ಹಂಚು ತೆಗೆದಿದೆ ಎಂದು ಪಕ್ಕದ ಮನೆಯಿಂದ ಬಂತು ಪೋನ್​ ಕಾಲ್​​, ಮನೆಗೆ ಬಂದು ನೋಡಿದಾಗ ಕಾದಿತ್ತು ಶಾಕ್​​

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ತೀರ್ಥಹಳ್ಳಿ: ತಾಲೂಕಿನ ಕುಳ್ಳುಂಡೆ ಗ್ರಾಮದಲ್ಲಿ ಮನೆಯೊಂದರ ಹಂಚು ತೆಗೆದು ಒಳ ನುಗ್ಗಿದ ಕಳ್ಳರು, ಸಾವಿರಾರು ರೂಪಾಯಿ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ  ನಡೆದಿದೆ. 

ಜೂ.05 ಕ್ಕೆ ಶಿವಮೊಗ್ಗದ ಮೇಲೆ ವಾಯು ದಾಳಿ ಅಣಕು ಪ್ರದರ್ಶನ

ಘಟನೆಯ ವಿವರ

ಕುಳ್ಳುಂಡೆ ಗ್ರಾಮದ ಮಹಿಳೆಯೊಬ್ಬರು ಅನಾರೋಗ್ಯದ ಕಾರಣ ವಿಶ್ರಾಂತಿ ಪಡೆಯಲು ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಅವರ ಮನೆಗೆ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಕನ್ನ ಹಾಕಿದ್ದಾರೆ.ಮನೆಯ ಹಂಚುಗಳು ತೆರೆದಿರುವುದನ್ನು ಗಮನಿಸಿದ ಪಕ್ಕದ ಮನೆಯವರು, ತಕ್ಷಣವೇ ಮಹಿಳೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ನಿಮ್ಮ ಮನೆಯ ಹಂಚನ್ನು ಯಾರೋ ತೆಗೆದಂತೆ ಕಾಣಿಸುತ್ತಿದೆ, ತಕ್ಷಣ ಮನೆಗೆ ಬನ್ನಿ ಎಂದು ನೆರೆಹೊರೆಯವರು ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಆತಂಕದಿಂದಲೇ ಮನೆಗೆ ಓಡಿ ಬಂದ ಮಹಿಳೆಗೆ ಶಾಕ್​​ ಕಾದಿತ್ತು.  ಅದೇನೆಂದರೆ ಕಳ್ಳರು ಮನೆಯ ಹಂಚು ತೆಗೆದು ಒಳ ನುಗ್ಗಿ, ಬೀರುವಿನಲ್ಲಿದ್ದ ಚಿನ್ನದ ಉಂಗುರ ಹಾಗೂಗೋಲ್ಡ್ ಪೆಂಡೆಂಟ್ ಸೇರಿದಂತೆ ಒಟ್ಟು 59 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.ಈ ಕುರಿತು ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Thirthahalli Burglary Gold Ornaments Stolen

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.