SHIVAMOGGA | Jan 4, 2024 | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಎಂಎಸ್ಐಎಲ್ ಮದ್ಯದ ಮಳಿಗೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಸಾಗರ ಟೌನ್ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದೆ
ಸಾಗರ ಟೌನ್ ಪೊಲೀಸ್ ಸ್ಟೇಷನ್ / Sagar Town Police Station
ಇಲ್ಲಿನ ಜಂಬಗಾರುವಲ್ಲಿ ಎಂಎಸ್ಐಎಲ್ ಮದ್ಯದ ಮಳಿಗೆಯೊಂದಿದೆ. ಅಲ್ಲಿ ಹೊಸವರ್ಷದ ಹಿಂದಿನ ದಿನ ಮದ್ಯ ಮಾರಾಟ ಮುಗಿಸಿ ರಾತ್ರಿ ಅಂಗಡಿ ಕ್ಲೋಸ್ ಮಾಡಿ ಮಳಿಗೆಯ ವೆಂಡರ್ ಮನೆಗೆ ತೆರಳಿದ್ದಾರೆ. ಮರುದಿನ ಹೊಸವರ್ಷ, ಎಂದಿನಂತೆ ಮಳಿಗೆಯ ವೆಂಡರ್ ಬಂದು ಅಂಗಡಿ ಓಪನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿ ಶಾಕ್ ಕಾದಿತ್ತು.
ಎಲ್ಲರೂ ಹೊಸವರ್ಷದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಕಳ್ಳರು ಎಂಎಸ್ಐಎಲ್ ಮಳಿಗೆಗೆ ಕನ್ನ ಹಾಕಿದ್ರು. ಅಂಗಡಿಯಲ್ಲಿದ್ದ ಕ್ಯಾಶ್ ಲಾಕರ್ ಮೋಲ್ಡ್ ತೆಗೆದು ದುಷ್ಕರ್ಮಿಗಳು 295473/- ರೂಪಾಯಿ ಕ್ಯಾಶ್ ಕದ್ದು ಪರಾರಿಯಾಗಿದ್ರು. ಈ ಸಂಬಂದ ಅಂಗಡಿಯ ವೆಂಡರ್ ದೂರು ನೀಡಿದ್ದಾರೆ. ಸಾಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.