ಗೆಳತಿ ಮನೆ ನೋಡ್ಕೊತ್ತಾಳೆ ಎಂದು ಬಿಟ್ಟು ಹೋಗಿದ್ದೇ ತಪ್ಪಾಯ್ತು! ವಾಪಸ್ ಬರುವಷ್ಟರಲ್ಲಿ ಕಾದಿತ್ತು ಶಾಕ್

KARNATAKA NEWS/ ONLINE / Malenadu today/ Nov 2, 2023 SHIVAMOGGA NEWS

SHIVAMOGGA|  ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ವಿವೇಕಾನಂದ ಬಡಾವಣೆಯಲ್ಲಿ ಕಳ್ಳತನ ಪ್ರಕರಣವೊಂದು ನಡೆದಿದೆ. 

30 ನೇ ತಾರೀಖು ಈ ಘಟನೆ ನಡೆದಿದ್ದು ಹುಟ್ಟಿದಾಗಿನಿಂದ ಪರಿಚಯವಿದ್ದ ಸ್ನೇಹಿತೆಯೇ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಉಂಬ್ಳೆಬೈಲ್ ನಿವಾಸಿಯೊಬ್ಬರು ಆಗಾಗ ತುಂಗಾನಗರ ವ್ಯಾಪ್ತಿಯಲ್ಲಿರುವ ಸಂತ್ರಸ್ತರ ಮನೆಗೆ ಆಗಾಗ ಬಂದು ಹೋಗುತ್ತಿದ್ದರಂತೆ. ಮೊದಲಿನಿಂದಲೂ ಹೀಗೆ ಬಂದು ಹೋಗುತ್ತಿದ್ದ ಮಹಿಳೆಯ ಮೇಲೆ ಮನೆಯವರಿಗೂ ಯಾವುದೇ ಅನುಮಾನ ಇರಲಿಲ್ಲ. 

READ  : ಮಲೆನಾಡಿಗರೇ ಎಚ್ಚರ! ಸೀನಿಯರ್ ಸಿಟಿಜನ್ ಮನೆ ಮೇಲೆ ಅರಣ್ಯ ಇಲಾಖೆ ರೇಡ್ | ಅರೆಸ್ಟ್ ತಪ್ಪಿಸಿದ ಶಾಸಕ

ಈ ನಡುವೆ ಕಳೆದ 30 ರಂದು ಮನೆಯ ನಿವಾಸಿ ದೂರುದಾರರು ದುರ್ಗಿಗುಡಿ ಶಾಲೆಗೆ ಹೋಗಿ ವಾಪಸ್​ ಬರುವಷ್ಟರಲ್ಲಿ ಮನೆಯಲ್ಲಿದ್ದ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನ ಕದ್ದು ಪರಾರಿಯಾಗಿದ್ದರು. ಇದನ್ನ ಕಂಡು ತುಂಗಾನಗರ ಪೊಲೀಸ್ ಸ್ಟೇಷನ್​ಗೆ ಸಂತ್ರಸ್ತರು ದೂರು ನೀಡಿದ್ದಾರೆ.  


Leave a Comment