ಮಾರಾಮಾರಿ ಕೇಸ್/ 5 ಗಂಟೆಯಲ್ಲಿ 9 ಆರೋಪಿಗಳು ಅರೆಸ್ಟ್! ಅರೆಸ್ಟ್ ಆದವರು ಯಾರು ಗೊತ್ತಾ? ಘಟನೆಗೆ ಕಾರಣವೇನು?

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’

ಶಿವಮೊಗ್ಗ ನಗರದ ಆಲ್ಕೋಳ ಬಳಿಯಲ್ಲಿ ನಡೆದಿದ್ದ ಮಾರಾಮಾರಿ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ಒಂಬತ್ತು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿವರ ಪ್ರಕಟವಾಗಿದ್ದು, ಪವನ್ , ಮಂಜುನಾಥ್,  ಚಂದನ್, ರಂಗನಾಥ್, ಮನೋಜ್, ಶ್ರೀನಿವಾಸ, ರಾಜಶೇಖರ್, ವಿಶ್ವನಂದನ್, ಶ್ಯಾಮ್ ರಾಬಿನ್ ಬಂಧಿತರಾಗಿದ್ದಾರೆ. 

ಇವರ ವಿರುದ್ಧ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ತುಂಗಾ ನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 362/2023 ಕಲಂ 143, 144, 147, 148, 324, 307 ಸಹಿತ 149 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. 

ಶಿವಮೊಗ್ಗ ನೇತಾಜಿ ಸರ್ಕಲ್‌ನಲ್ಲಿ ಗಣಪತಿ ಕೂರಿಸಲಾಗಿದೆ. ಈ ವೇಳೆ ನಡೆದ ಕಾರ್ಯಕ್ರಮದಲ್ಲಿ ಪವನ್ ಹಾಗೂ ಕಿರಣ್​ ಸ್ನೇಹಿತರು ಸ್ಟೆಪ್ ಹಾಕಿ ಕುಣಿದಿದ್ದಾರೆ. ಇಬ್ಬರು ಕೂಡ ಬಾಲ್ಯ ಸ್ನೇಹಿತರು. ಆದರೆ ಹಳೆ ಕಿರಿಕ್​ ನಿಂದ ಇಬ್ಬರ ನಡುವೆ ಸ್ಪಾರ್ಕ್​ ಆಗುತ್ತಿತ್ತು. ಘಟನೆ ನಡೆದ ರಾತ್ರಿಯು ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕಿರಿಕ್​ ಆಗಿದೆ. 

ಮೈಮೇಲೆ ಬಿದ್ದು ಎಕೆ ಡ್ಯಾನ್ಸ್ ಮಾಡ್ತಿದ್ದಿಯಾ ಎಂಬ ವಿಚಾರವಾಗಿ ಪರಸ್ಪರ ಪವನ್ ಹಾಗೂ ಕಿರಣ್ ಹುಡುಗರ ನಡುವೆ ಕಿತ್ತಾಟ ಆಗಿದೆ. ಆನಂತರ ಅಲ್ಲಿಂದ ಕಿರಣ್ ಗ್ಯಾಂಗ್ ತೆರಳಿದೆ. ಅಲ್ಲದೆ ತಡರಾತ್ರಿ ಕರೆ ಮಾಡಿ ಬರ್ರೋ ನೋಡ್ಕೋತೀನಿ ಎಂದಿದೆ. 

ಕಿರಣ್ ಪಂಥಾಹ್ವಾನವನ್ನು ಸ್ವೀಕರಿಸದ ಪವನ್ ಗ್ಯಾಂಗ್ ಮಾರಕಾಸ್ತ್ರಗಳ ಜೊತೆಗೆ ಬಂದು ಕಿರಣ್ ಮತ್ತಾತನ ಹುಡುಗರಿಗೆ ಹಲ್ಲೆ ಮಾಡಿದೆ. 

ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಅವರೆಲ್ಲ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ   ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದು ಕೆಲವೇ ಹೊತ್ತಿನಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 


ಇನ್ನಷ್ಟು ಸುದ್ದಿಗಳು 

 


 

Leave a Comment