ವಿನೋಬನಗರ ಪೊಲೀಸ್ ಸ್ಟೇಷನ್​ | ಬೈಕ್​ನಲ್ಲಿ ಪತಿ ಜೊತೆ ಹೋಗುತ್ತಿದ್ದ ಶಿಕ್ಷಕಿಗೆ ಶಾಕ್ | ನಡೀತು ಹೊಸಥರ ಘಟನೆ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 14, 2023 SHIVAMOGGA NEWS

ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ (Vinobanagar Police Station) ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣವೊಂದು ನಡೆದಿದೆ. ಈ ಪ್ರಕರಣ ಇದುವರೆಗಿನ ಪ್ರಕರಣಗಳಿಗಿಂತಲೂ ವಿಭಿನ್ನವಾಗಿ ಕಾಣುತ್ತಿದೆ. ಸದ್ಯ ನಡೆದ ಘಟನೆ ಬಗ್ಗೆ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ IPC 1860 (U/s-392) ಅಡಿಯಲ್ಲಿ ಕೇಸ್ ದಾಖಲಾಗಿದೆ. 

ಶಿವಮೊಗ್ಗದ ಪ್ರತಿಷ್ಟಿತ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮೇಡಂ ಒಬ್ಬರು ಶಾಲೆ ಮುಗಿದ ಬಳಿಕ ತಮ್ಮ ಪತಿಯ ಜೊತೆಗೆ  ಗಾಂಧಿ ಬಜಾರ್ ಹೋಗಿ ಅಲ್ಲಿಂದ ಅಮೀರ್ ಅಹಮ್ಮದ್ ಸರ್ಕಲ್, ಗೋಪಿ ಸರ್ಕಲ್, ಜೈಲ್ ಸರ್ಕಲ್ ಮುಖಾಂತರವಾಗಿ ಲಕ್ಷ್ಮಿ ಟಾಕೀಸ್ ಸರ್ಕಲ್ ಹತ್ತಿರ ಬಂದು 100 ಅಡಿ ರಸ್ತೆ ಮುಖಾಂತರ ಮನೆಗೆ ಹೋಗುತ್ತಿದ್ರು. ಈ ವೇಳೆ  ಆಯಪ್ಪಸ್ವಾಮಿ ದೇವಸ್ಥಾನದ ಎದುರು ರಸ್ತೆಯಲಿ ಟೀಚರ್ ಇದ್ದ  ಬೈಕ್​ಗೆ ಹಿಂದಿನಿಂದ ಇನ್ನೊಂದು ಬೈಕ್​ ಡಿಕ್ಕಿ ಹೊಡೆದಿದೆ. ಪರಿಣಾಮ ಟೀಚರ್ ಹಾಗೂ ಅವರ ಪತಿ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಟೀಚರ್​ರವರ ಕುತ್ತಿಗೆಯಲ್ಲಿದ್ದ  70 ಗ್ರಾಂ ತೂಕದ ಅಂದಾಜು 2,40,000/- ರೂ ಬೆಲೆಯ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು, ಆರೋಪಿಗಳು ಪರಾರಿಯಾಗಿದ್ದಾರೆ. 

ಈ ವೇಳೆ ಕೂಗಿಕೊಂಡರೂ, ಅಲ್ಲಿದ್ದವರು ಆರೋಪಿಗಳನ್ನು ಹಿಡಿಯಲಾಗಲಿಲ್ಲ. ಇನ್ನೂ ಟೀಚರ್​ರವರ ಪತಿ ತಮ್ಮ ಸ್ಕೂಟರ್ ಮೇಲಕ್ಕೆತ್ತಿ ಆರೋಪಿಗಳನ್ನ ಹಿಂಬಾಲಿಸಿದರು ಪ್ರಯೋಜನವಾಗಲಿಲ್ಲ. ಪೊಲೀಸ್ ಚೌಕಿಯವರೆಗೂ ಹೋಗಿ ಬಂದ ಅವರು ಬಳಿಕ ವಾಪಸ್ ಬಂದು ವಿನೋಬನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.  


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor