TRAIN NEWS TODAY

ಪ್ರಯಾಣಿಕರೇ ಗಮನಿಸಿ ಈ ದಿನ ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

SWR Special Train ಶಿವಮೊಗ್ಗ : ಗುಡ್ ಫ್ರೈಡೇ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ನೈಋತ್ಯ ರೈಲ್ವೆಯು ಯಶವಂತಪುರ, ತಾಳಗುಪ್ಪ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಶಿವಮೊಗ್ಗ: ಜಿಲ್ಲೆಯ ಮೂವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ!

ರೈಲು ಸಂಖ್ಯೆ 06587 ಯಶವಂತಪುರ–ತಾಳಗುಪ್ಪ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 03 (ಶುಕ್ರವಾರ) ರಂದು ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಶನಿವಾರ (ಏ. 04) ಬೆಳಿಗ್ಗೆ 5:05ಕ್ಕೆ ತಾಳಗುಪ್ಪ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್  ಏಪ್ರಿಲ್ 04 (ಶನಿವಾರ) ರಂದು ಬೆಳಿಗ್ಗೆ 9:30ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 5:15ಕ್ಕೆ ಯಶವಂತಪುರ ಸೇರಲಿದೆ. 

ಈ ವಿಶೇಷ ರೈಲು ಎರಡು ಮಾರ್ಗಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ ಹಾಲ್ಟ್, ಹಾರನಹಳ್ಳಿ ಹಾಲ್ಟ್, ಕುಂಸಿ, ಅರಸಾಳು ಹಾಲ್ಟ್, ಕೆಂಚನಾಲ ಹಾಲ್ಟ್, ಆನಂದಪುರಂ, ಅಡ್ಡೇರಿ ಹಾಲ್ಟ್ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರಲಿದ್ದು, ಅದರಲ್ಲಿ 1 ಪ್ರಥಮ ದರ್ಜೆ ಮತ್ತು ಎಸಿ 2-ಟೈರ್, 2 ಎಸಿ ತ್ರೀ-ಟೈರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಎಸ್ಎಲ್ಆರ್/ಡಿ) ಬೋಗಿಗಳು ಇರಲಿವೆ.

SWR Special Train Yashwantpur to Talguppa Timings

SWR Special Train Shimoga Talaguppa Train Cancelled Shivamogga Train Timings Special Train South Western Railway train changes, Baiyyappanahalli yard work, train cancellations September 2025, train diversions SWR, train regulation Bangalore, SWR press release, train status check, SWR ticket booking, train schedule SWR, ಬೆಂಗಳೂರು ರೈಲು, ಬೈಯಪ್ಪನಹಳ್ಳಿ ಯಾರ್ಡ್, ರೈಲು ಮಾರ್ಗ ಬದಲಾವಣೆ, ರೈಲು ವೇಳಾಪಟ್ಟಿ Talaguppa-Yeshvantpur train
SWR Special Train
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.