bakery Course Shimoga ಶಿವಮೊಗ್ಗ : ನಿಮ್ಮಲ್ಲಿ ಅಡುಗೆ ಕಲೆ ಅಥವಾ ಬೇಕರಿ ಉದ್ಯಮದ ಬಗ್ಗೆ ಆಸಕ್ತಿ ಇದೆಯೇ? ಹಾಗಿದ್ದಲ್ಲಿ ಶಿವಮೊಗ್ಗದ ನವಿಲೆ ಕೃಷಿ ಮಹಾವಿದ್ಯಾಲಯವು ನಿಮಗಾಗಿ ವಿಶೇಷ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ. ಏಪ್ರಿಲ್ 8ರಿಂದ ಮೇ 7ರವರೆಗೆ ಒಂದು ತಿಂಗಳ ಕಾಲ ವಿವಿಧ ಬೇಕರಿ ಖಾದ್ಯಗಳ ತಯಾರಿಕೆಯ ಬಗ್ಗೆ ತಜ್ಞರಿಂದ ಮಾರ್ಗದರ್ಶನ ನೀಡಲಾಗುವುದು.
ಈ ತರಬೇತಿಯಲ್ಲಿ ಬೆಣ್ಣೆ ಬಿಸ್ಕತ್ತು, ಕೋಕೊನಟ್ ಕುಕಿಸ್, ಮಸಾಲ ಬಿಸ್ಕತ್ತು ಸೇರಿದಂತೆ ವಿವಿಧ ಬಗೆಯ ಬಿಸ್ಕತ್ತುಗಳು ಹಾಗೂ ಬನಾನಾ ಕೇಕ್, ಪೇಸ್ಟ್ರೀ ಕೇಕ್, ಜೆಲ್ ಕೇಕ್ ಮುಂತಾದ ಕೇಕ್ ವೆರೈಟಿಗಳ ತಯಾರಿಕೆಯನ್ನು ಕಲಿಸಲಾಗುತ್ತದೆ. ಅಲ್ಲದೆ, ಬ್ರೆಡ್, ಪಿಜ್ಜಾ, ಪಪ್ ಪೇಸ್ಟ್ರೀ, ದಿಲ್ ಪಸಂದ್ ಹಾಗೂ ರಸ್ಕ್‌ನಂತಹ ವಾಣಿಜ್ಯ ಉತ್ಪನ್ನಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು.
ತರಬೇತಿಗೆ ಸೇರಬಯಸುವ ಆಸಕ್ತರು 4,500 ರೂಪಾಯಿಗಳ ಶುಲ್ಕವನ್ನು ಪಾವತಿಸಿ ಏಪ್ರಿಲ್ 7ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೆನಪಿಡಿ, ಶಿಬಿರದ ಅವಧಿಯಲ್ಲಿ ಊಟ ಮತ್ತು ವಸತಿ ಸೌಲಭ್ಯವನ್ನು ಅಭ್ಯರ್ಥಿಗಳೇ ಸ್ವಂತವಾಗಿ ಮಾಡಿಕೊಳ್ಳಬೇಕಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಾವಣೆಗಾಗಿ ನವಿಲೆ ಕೃಷಿ ಮಹಾವಿದ್ಯಾಲಯದ ಡಾ. ಜಯಶ್ರೀ ಎಸ್. (ಮೊ: 94491 87763) ಅಥವಾ ಜಯಶಂಕರ (ಮೊ: 96865 55897) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. ಸ್ವಂತ ಉದ್ಯೋಗ ಪ್ರಾರಂಭಿಸುವ ಗುರಿ ಹೊಂದಿರುವವರಿಗೆ ಇದು ಉತ್ತಮ ವೇದಿಕೆಯಾಗಿದೆ.
bakery Course Shimoga Learn Cake & Biscuit Making

