ಪ್ರಖ್ಯಾತ ಜಾಹಿರಾತು ಉದ್ಯಮಿ, ಶಿವಮೊಗ್ಗದ ಆನಂದ್ ಸುಬ್ಬರಾವ್ ಇನ್ನಿಲ್ಲ! ಗುರುಗ್ರಾಮದಲ್ಲಿ 13ನೇ ಮಹಡಿಯಿಂದ ಜಿಗಿದು ಸಾವು!

Anand Subbarao from Shivamogga / ಮಲೆನಾಡು ಟುಡೆ ಸುದ್ದಿ / ಗುರುಗ್ರಾಮ / ಮೂಲತಃ ಶಿವಮೊಗ್ಗದ ಖ್ಯಾತ ಜಾಹೀರಾತು ಉದ್ಯಮಿ 54 ವರ್ಷದ ಆನಂದ್ ಸುಬ್ಬರಾವ್ ಗುರುಗ್ರಾಮದ ಹೋಟೆಲ್ ಒಂದರ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಬುಧವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಟೈಮ್ಸ್ ಆಫ್​ ಇಂಡಿಯಾ ರಿಪೋರ್ಟ್​ ಮಾಡಿದೆ. ರಾಷ್ಟ್ರೀಯ ಮಾದ್ಯಮದ ವರದಿಯ ಪ್ರಕಾರ, ಗುರುಗ್ರಾಮದ ಸೆಕ್ಟರ್ 49ರ ಸೊಹ್ನಾ ರಸ್ತೆಯಲ್ಲಿ ವಾಸವಿದ್ದರು. ಒಬ್ಬಂಟಿಯಾಗಿದ್ದ  ಆನಂದ್ ಸುಬ್ಬರಾವ್ And And Brand Partners ಎಂಬ ಖಾಸಗಿ ಜಾಹೀರಾತು ಮತ್ತು ಬ್ರಾಂಡ್ ಕಂಪನಿಯಲ್ಲಿ ಪಾಲುದಾರರಾಗಿದ್ದರು.

Why did 54-year-old ad professional and 'Half Pants Full Pants' author Anand Subbarao from Shivamogga jump from the 13th floor of a Gurgaon hotel, and what details were found in his suicide note
Why did 54-year-old ad professional and ‘Half Pants Full Pants’ author Anand Subbarao from Shivamogga jump from the 13th floor of a Gurgaon hotel, and what details were found in his suicide note?

ಮಂಗಳವಾರ ಗುರುಗ್ರಾಮದ ಸೆಕ್ಟರ್ 63ರಲ್ಲಿರುವ ಹೋಟೆಲ್‌ಗೆ ಆಗಮಿಸಿ ಕೊಠಡಿ ಪಡೆದುಕೊಂಡಿದ್ದ ಆನಂದ್ ಸುಬ್ಬರಾವ್ ಬುಧವಾರ ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಅವರು ಹೋಟೆಲ್ ಮಹಡಿಯಿಂದ ಜಿಗಿದಿದ್ದಾರೆ. ವಿಷಯ ತಿಳಿದು ಸ್ಥಳಕ್​ಕೆ ಬಂದ ಪೊಲೀಸ್ ಸಿಬ್ಬಂದಿಗೆ ಪರಿಶೀಲನೆ ವೇಳೆ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ಆನಂದ್ ಸುಬ್ಬರಾವ್​ ತಮ್ಮ ಸಾವಿಗೆ ಮಾನಸಿಕ ಖಿನ್ನತೆ ಮತ್ತು ವೈಯಕ್ತಿಕ ಕಾರಣಗಳೇ ಹೊರತು ಬೇರಾರೂ ಕಾರಣರಲ್ಲ ಎಂದು ಉಲ್ಲೇಖಿಸಿದ್ದಾರೆ 

ಶಿವಮೊಗ್ಗ : ಚಿನ್ನ ಖರೀದಿಸುವ ಮುನ್ನ ಈ ಗೋಲ್ಡ್​ ರೇಟಿನ ದರಪಟ್ಟಿ ಒಮ್ಮೆ ಗಮನಿಸಿ!

ಹೋಟೆಲ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದ್ದು, ಘಟನೆಯಲ್ಲಿ ಯಾವುದೇ ಅನುಮಾನಾಸ್ಪದ ಸನ್ನಿವೇಶಗಳು ಕಂಡುಬಂದಿಲ್ಲ. ಆನಂದ್ ಸುಬ್ಬರಾವ್​ರನ್ನ ಯಾರೂ ತಳ್ಳಿಲ್ಲ ಮತ್ತು ಅವರು ತಾವಾಗಿಯೇ ಜಿಗಿದಿರುವುದು ದೃಢಪಟ್ಟಿದೆ. ಗುರುವಾರ ಮಧ್ಯಾಹ್ನ ಗುರುಗ್ರಾಮದಲ್ಲಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಆನಂದ್ ಸುಬ್ಬರಾವ್ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಶಿವಮೊಗ್ಗ ರೈಲ್ವೆ ಕಾಲೋನಿಯಲ್ಲಿ ವಾಸವಿದ್ದ ಆನಂದ್ ಸುಬ್ಬರಾವ್

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರ ಮಗನಾಗಿದ್ದ ಆನಂದ್ ಸುಬ್ಬರಾವ್ ಶಿವಮೊಗ್ಗ ರೈಲ್ವೆ ಕಾಲೋನಿಯಲ್ಲೇ ಬೆಳೆದಿದ್ದರು. ಶಿವಮೊಗ್ಗದಲ್ಲಿ ಪಿಯು (PU) ಶಿಕ್ಷಣ ಪೂರೈಸಿದ ಅವರು, ನಂತರ ಮೈಸೂರಿನಲ್ಲಿ ಬಿಬಿಎಂ (BBM) ಹಾಗೂ ಮಣಿಪಾಲದಲ್ಲಿ ಎಂ.ಬಿ.ಎ. (MBA) ವ್ಯಾಸಂಗ ಮಾಡಿದ್ದರು. ಇಂಗ್ಲಿಷ್ ಭಾಷೆಯ ಮೇಲೆ ಅತ್ಯುತ್ತಮ ಹಿಡಿತ ಹೊಂದಿದ್ದ ಇವರು, ಬೆಂಗಳೂರು ಮತ್ತು ದೆಹಲಿಯ ಪ್ರಮುಖ ಜಾಹೀರಾತು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ತದನಂತರ And And ಸಂಸ್ಥೆಯ ಪಾಲುದಾರರಾಗಿ ಗುರುಗ್ರಾಮದಲ್ಲಿ ವಾಸವಿದ್ದರು.

Why did 54-year-old ad professional and 'Half Pants Full Pants' author Anand Subbarao from Shivamogga jump from the 13th floor of a Gurgaon hotel, and what details were found in his suicide note
Why did 54-year-old ad professional and ‘Half Pants Full Pants’ author Anand Subbarao from Shivamogga jump from the 13th floor of a Gurgaon hotel, and what details were found in his suicide note?

Half Pants Full Pants ಪುಸ್ತಕ ಬರೆದಿದ್ದ ಆನಂದ್ ಸುಬ್ಬರಾವ್

ಆನಂದ್ ಸುಬ್ಬರಾವ್ ಅವರು 2017ರಲ್ಲಿ ರೈಲ್ವೆ ಕಾಲೋನಿಯ ತಮ್ಮ ಬಾಲ್ಯದ ದಿನಗಳನ್ನೇ ಆಧಾರವಾಗಿಟ್ಟುಕೊಂಡು Half Pants Full Pants – ಎಂಬ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕದಲ್ಲಿ ಆನಂದ್ ಶಿವಮೊಗ್ಗ ಹಾಗೂ ಶಿವಮೊಗ್ಗದಲ್ಲಿನ ತಮ್ಮ ಗೆಳಯರ ಸಾಹಸದ ಕಥೆಗಳನ್ನು ಉಲ್ಲೇಖಿಸಿದ್ದಾರೆ. 2022ರಲ್ಲಿ ಇದೇ ಹೆಸರಿನ ವೆಬ್ ಸೀರೀಸ್ ಆಗಿ ಪ್ರಸಾರಗೊಂಡಿತ್ತು. 

ಶಿವಮೊಗ್ಗ :  ಕ್ರೆಡಿಟ್​ ಕಾರ್ಡ್​​ನಲ್ಲಿ ಹಣ ಕಟ್ಟಾಗಲ್ಲ ಅಂತ ಆ್ಯಪ್​ ಡೌನ್ಲೋಡ್​​​ ಮಾಡಿಸಿಕೊಂಡ್ರು, ಆಮೇಲೆ ಏನಾಯ್ತು ಗೊತ್ತಾ ?

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Why did 54-year-old ad professional and 'Half Pants Full Pants' author Anand Subbarao from Shivamogga jump from the 13th floor of a Gurgaon hotel, and what details were found in his suicide note
Anand Subbarao from Shivamogga
Why did 54-year-old ad professional and ‘Half Pants Full Pants’ author Anand Subbarao from Shivamogga jump from the 13th floor of a Gurgaon hotel, and what details were found in his suicide note?