ಆಗುಂಬೆ / ಆಗುಂಬೆ ಘಾಟಿ ರಸ್ತೆ ಮರ ಬಿದ್ದ ಕಾರಣಕ್ಕೆ ಇವತ್ತು ಕೆಲಕಾಲ ಬಂದ್ ಆಗಿತ್ತು. ಅಲ್ಲದೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಘಾಟಿಯ ಮಧ್ಯಭಾಗದಲ್ಲಿ ದೊಡ್ಡ ಮರವೊಂದು ಉರುಳಿಬಿದ್ದ ಪರಿಣಾಮ, ತೀರ್ಥಹಳ್ಳಿ ಹಾಗೂ ಉಡುಪಿ ನಡುವಿನ ಸಂಪರ್ಕ ಸ್ಥಗಿತಗೊಂಡಿತ್ತು.

ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಈ ಘಟನೆ ವರದಿಯಾಗಿದೆ. ರಸ್ತೆಗೆ ಅಡ್ಡಲಾಗಿಯೇ ಮರ ಬಿದ್ದಿದ್ದರಿಂದ ಯಾವುದೇ ವಾಹನಗಳು ಮುಂದಕ್ಕೆ ಹೋಗಲಾಗದೇ ನಿಂತಲ್ಲಿಯೇ ನಿಂತಿದ್ದವು. ಬಳಿಕ ವಾಹನ ಚಾಲಕರು , ಲಾರಿ ಚಾಲಕರು ಹಾಗೂ ಸ್ಥಳೀಯ ನಿವಾಸಿ ಖುದ್ದಾಗಿ ಮುಂದೆ ಬಂದು ಮರವನ್ನು ತೆರವುಗೊಳಿಸುವ ಕೆಲಸಕ್ಕೆ ಇಳಿದರು. ಭಾರಿ ದೊಡ್ಡ ಮರವಾಗಿದ್ದರಿಂದ ತೆರವು ಕಾರ್ಯಾಚರಣೆಗೆ ಒಂದು ಗಂಟೆ ಹಿಡಿಯಿತು. ಅಷ್ಟರಲ್ಲಿ ಎರಡು ಕಡೆ ಚೆಕ್ ಪೋಸ್ಟ್ಗಳಲ್ಲಿ ವಾಹನಗಳನ್ನ ತಡೆದು ಟ್ರಾಫಿಕ್ ಕಂಟ್ರೋಲ್ ಮಾಡಲಾಗಿತ್ತು. ಮರ ತೆರವಾದ ಬಳಿಕ ವಾಹನಗಳು ಸುಗಮವಾಗಿ ಸಂಚರಿಸಿದವು.
ಆಗುಂಬೆಯಲ್ಲಿ ಬಿದ್ದ ಮರದ ಫೋಟೋ ದೃಶ್ಯಾವಳಿಗಳು ಇಲ್ಲಿ ನೋಡಬಹುದು/ Huge Tree Falls on Agumbe Ghat Traffic Jam on Thirthahalli-Udupi Road
[su_image_carousel source=”media: 33500,33501,33502,33503,33504,33505″ controls_style=”light” crop=”16:9″ target=”self”]
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook, whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epapermalenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Huge Tree Falls on Agumbe Ghat Traffic Jam on Thirthahalli-Udupi Road vehicular movement completely halted for 30 minutes on the Thirthahalli-Udupi road at the 4th curve of the Agumbe Ghat in Shivamogga district
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.