Panchangam on the occasion of Sri Rama Navami / ದಿನಭವಿಷ್ಯ : ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು ಹಾಗೂ ಚೈತ್ರ ಮಾಸ ಶುಕ್ಲ ಪಕ್ಷದ ನವಮಿ ತಿಥಿಯು ಮಧ್ಯಾಹ್ನ 12.31 ರವರೆಗೆ ಇರಲಿದ್ದು, ತದನಂತರ ದಶಮಿ ತಿಥಿ ಆರಂಭವಾಗಲಿದೆ. ಪುನರ್ವಸು ನಕ್ಷತ್ರ ಸಂಜೆ 5.40 ರವರೆಗೆ ಇರಲಿದ್ದು, ಬಳಿಕ ಪುಷ್ಯ ನಕ್ಷತ್ರ ಪ್ರವೇಶವಾಗಲಿದೆ. ಮಧ್ಯಾಹ್ನ 3.24 ರಿಂದ 4.54 ರವರೆಗೆ ಅಮೃತ ಗಳಿಗೆ ಇರಲಿದೆ. ಇಂದು ಶ್ರೀರಾಮನವಮಿ ಬೆಳಿಗ್ಗೆ 10.30 ರಿಂದ 12.00 ರವರೆಗೆ ರಾಹುಕಾಲ ಹಾಗೂ ಮಧ್ಯಾಹ್ನ 3.00 ರಿಂದ 4.30 ರವರೆಗೆ ಯಮಗಂಡ ಕಾಲ ಇರಲಿದೆ.

ಶಿವಮೊಗ್ಗ : ಚಿನ್ನ ಖರೀದಿಸುವ ಮುನ್ನ ಈ ಗೋಲ್ಡ್ ರೇಟಿನ ದರಪಟ್ಟಿ ಒಮ್ಮೆ ಗಮನಿಸಿ!
ದಿನಭವಿಷ್ಯ
ಮೇಷ / ಅನಿರೀಕ್ಷಿತವಾಗಿ ಲಾಭವಾಗುವ ಲಕ್ಷಣಗಳಿವೆ. ಉದ್ಯೋಗಕ್ಕಾಗಿ ನಡೆಸುತ್ತಿರುವ ಪ್ರಯತ್ನ ಯಶಸ್ಸಿನತ್ತ ಸಾಗಲಿವೆ. ಬಹುಕಾಲದ ಗೆಳೆಯರನ್ನು ಭೇಟಿಯಾಗುವ ಯೋಗವಿದೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಕಂಡುಬರಲಿದೆ.
ವೃಷಭ / ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ದಿಢೀರ್ ಪ್ರಯಾಣ ಎದುರಾಗಬಹುದು. ವಿದ್ಯಾರ್ಥಿಗಳಲ್ಲಿ ಕೊಂಚ ಮಟ್ಟಿನ ನಿರುತ್ಸಾಹ. ಆಧ್ಯಾತ್ಮಿಕ ವಿಚಾರಗಳತ್ತ ಒಲವು. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ನಿರಾಸೆ. ಆರೋಗ್ಯದಲ್ಲಿ ಏರುಪೇರಾಗಬಹುದು.
ಮಿಥುನ/ ಶುಭ ಕಾರ್ಯ. ಬಹುದಿನಗಳಿಂದ ಬಾಕಿ ಉಳಿದಿದ್ದ ಸಾಲ ಮರುಪಾವತಿ ಸಾಧ್ಯತೆ. ಹಣಕಾಸು ಹಾಗೂ ವಸ್ತು ಲಾಭ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯತ್ತ ಹೆಜ್ಜೆ ಹಾಕುವಿರಿ. ಹೊಸ ವ್ಯಕ್ತಿಗಳ ಸಂಪರ್ಕ ಬೆಳೆಯಲಿದೆ.
ಕರ್ಕಾಟಕ / ಆರ್ಥಿಕ ಸ್ಥಿತಿಗತಿ ಕೈಹಿಡಿಯುವುದಿಲ್ಲ. ಸಂಬಂಧಿಕರೊಂದಿಗೆ ಆಸ್ತಿಗೆ ಸಂಬಂಧಿಸಿದಂತೆ ವಿವಾದ ತಲೆದೋರುವ ಲಕ್ಷಣಗಳಿವೆ. ಕುಟುಂಬದಲ್ಲಿ ಮಾನಸಿಕ ಒತ್ತಡ. ಅನಾರೋಗ್ಯದ ಸಮಸ್ಯೆ. ಹೆಚ್ಚಿನ ಶ್ರಮ ಪಡಬೇಕಾಗಬಹುದು. ಉದ್ಯೋಗ ಹಾಗೂ ವ್ಯಾಪಾರದಲ್ಲಿ ನಿರಾಸಕ್ತಿ ಮೂಡಲಿದೆ.

ಸಿಂಹ / ನೂತನ ವಿಚಾರ ಅರಿತುಕೊಳ್ಳುವ ಕುತೂಹಲ ಹೆಚ್ಚಾಗಲಿದೆ. ಆಸ್ತಿ ಪಾಸ್ತಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸುವಿರಿ. ಶುಭ ಸಮಾಚಾರ ಕಿವಿಗೆ ಬೀಳಲಿವೆ. ಹೊಸ ಶೈಕ್ಷಣಿಕ ಅವಕಾಶ ಒದಗಿಬರಲಿವೆ. ಜಮೀನು ಹಾಗೂ ವಾಹನ ಖರೀದಿಸುವ ಯೋಗವಿದೆ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಪೂರಕ ಹಾಗೂ ಪ್ರೋತ್ಸಾಹದಾಯಕ ವಾತಾವರಣ ಇರಲಿದೆ.
ಶಿವಮೊಗ್ಗದಲ್ಲಿ ಮಳೆ! ಶಿಕಾರಿಪುರದಲ್ಲಿಯೇ ಅತಿಹೆಚ್ಚು ವರ್ಷಧಾರೆ! ವರುಣ ಲೆಕ್ಕಾಚಾರ
ಕನ್ಯಾ / ಉಪಯುಕ್ತ ಮಾಹಿತಿ ಲಭ್ಯವಾಗಲಿದೆ. ಆರ್ಥಿಕ ಪರಿಸ್ಥಿತಿಯು ಅತ್ಯಂತ ಉತ್ತಮವಾಗಿರಲಿದೆ. ಹೊಸ ಉದ್ಯೋಗಾವಕಾಶ. ವ್ಯಾಪಾರ ಹಾಗೂ ಕೆಲಸದ ಸ್ಥಳದಲ್ಲಿ ಗುರಿಗಳನ್ನು ತಲುಪುವಲ್ಲಿ ಯಶಸ್ವಿಯಾಗುವಿರಿ.
ತುಲಾ / ಒತ್ತಡ ಹಾಗೂ ಶ್ರಮ ಹೆಚ್ಚಾಗಿರಲಿದೆ. ಕೆಲವು ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ದೂರದ ಊರುಗಳಿಗೆ ಪ್ರಯಾಣ. ಬಂಧು ಬಳಗದವರೊಂದಿಗೆ ವೈಮನಸ್ಯ. ದೇವಾಲಯಗಳಿಗೆ ಭೇಟಿ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸಾಮಾನ್ಯ ದಿನ.
ವೃಶ್ಚಿಕ / ಅನಿರೀಕ್ಷಿತ ಪ್ರಯಾಣ. ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ. ಊಹಿಸದ ರೀತಿಯಲ್ಲಿ ಹಣ ಖರ್ಚಾಗಲಿದೆ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮನೆ ಅಥವಾ ವಾಹನ ಖರೀದಿಸುವ ಪ್ರಕ್ರಿಯೆ ವಿಘ್ನ ಎದುರಾಗಬಹುದು. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಕೊಂಚ ಗೊಂದಲ ಕಾಡಲಿವೆ.
ಧನುಸ್ಸು / ಒಳ್ಳೆಯ ಸುದ್ದಿ ನಿಮ್ಮನ್ನು ತಲುಪಲಿವೆ. ಉತ್ತಮ ಪ್ರಗತಿ ಹೊಂದುವಿರಿ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹೊಸ ವಾಹನ ಖರೀದಿ, ಶುಭ ಸಂದೇಶ ಬರಲಿವೆ.ಉದ್ಯೋಗ ಹಾಗೂ ವ್ಯಾಪಾರ ಅಡೆತಡೆಗಳಿಲ್ಲದೆ ಸುಗಮವಾಗಿ ಸಾಗಲಿವೆ.
ಮಕರ / ಹೊಸ ಕೆಲಸ ಕಾರ್ಯಗಳಿಗೆ ಚಾಲನೆ ನೀಡುವಿರಿ. ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶ ಸಿಗಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಏಳಿಗೆ ಕಾಣುವಿರಿ.
ಕುಂಭ / ಕೆಲವು ಕೆಲಸ ಕಾರ್ಯಗಳಲ್ಲಿ ವಿಘ್ನ ಎದುರಾಗಲಿವೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ದೂರ ಪ್ರಯಾಣ. ಮನೆಯಲ್ಲಿ ಹಾಗೂ ಹೊರಗಡೆ ಮಾನಸಿಕ ಒತ್ತಡ ಕಾಡಲಿವೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಏರಿಳಿತ

ಸಾಗರ : ಇಮ್ರಾನ್ ಮತ್ತು ಇಮ್ತಿಯಾಜ್ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್ ತೀರ್ಪು
ಮೀನ / ಆರ್ಥಿಕ ಸ್ಥಿತಿ ಗೊಂದಲಮಯವಾಗಿರಲಿದೆ. ಕಠಿಣ ಶ್ರಮ ಅನಿವಾರ್ಯವಾಗಲಿದೆ. ಕೈಗೊಂಡ ಕೆಲಸಗಳಲ್ಲಿ ಕೊಂಚ ವಿಳಂಬ ಉಂಟಾಗಲಿದೆ. ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ ಎದುರಾಗುವ ಲಕ್ಷಣಗಳಿವೆ.ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಒತ್ತಡಗಳು ಇನ್ನಷ್ಟು ಹೆಚ್ಚಾಗಲಿವೆ.
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
