ಲುಲು ಮಾಲ್ ಬಳಿ ಶಿವಮೊಗ್ಗ ಬಸ್​ನಲ್ಲಿ ಬೆಂಕಿ! ಜನ & ಚಾಲಕನಿಂದ ಪ್ರಯಾಣಿಕರು ಬಚಾವ್​

ಕೊನೆಯ ನವೀಕರಣ: 27 ಮಾರ್ಚ್ 2026, 11:09 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
Bengaluru Shivamogga KSRTC Bus Catches Fir Near Lulu Mall in Bengaluru Passengers Escape Unhurt
Bengaluru Shivamogga KSRTC Bus Catches Fir Near Lulu Mall in Bengaluru Passengers Escape Unhurt

ಬೆಂಗಳೂರು / ಶಿವಮೊಗ್ಗಕ್ಕೆ ಹೊರಟಿದ್ದ ಸರ್ಕಾರಿ ಬಸ್​ವೊಂದು ಬೆಂಗಳೂರು ಲುಲು ಮಾಲ್ ಬಳಿ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಅಪಾಯವಾಗಿಲ್ಲ. ಶಿವಮೊಗ್ಗಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್​ ರಾಜಾಜಿನಗರದ ಲುಲು ಮಾಲ್ ಸಮೀಪ ಬೆಂಕಿಗೆ ಆಹುತಿಯಾಗಿದೆ. 

Bengaluru Shivamogga KSRTC Bus Catches Fir Near Lulu Mall in Bengaluru Passengers Escape Unhurt
Bengaluru Shivamogga KSRTC Bus Catches Fir Near Lulu Mall in Bengaluru Passengers Escape Unhurt

ಶಿವಮೊಗ್ಗ : ಅಸಲಿಗೆ ಅಡಿಕೆ ರೇಟು ಕರೆಕ್ಟ್​ ಆಗಿ ಎಷ್ಟಿದೆ!? ಏನಾಗ್ತಿದೆ?

ಬೆಂಗಳೂರು ಶಿವಮೊಗ್ಗ ಕೆಎಸ್​ಆರ್​ಟಿಸಿ ಬಸ್​

ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ರಾತ್ರಿ 10:15ರ ಸುಮಾರಿಗೆ ಶಿವಮೊಗ್ಗದತ್ತ ಈ ಬಸ್ಸು ಪ್ರಯಾಣ ಬೆಳೆಸಿತ್ತು. ಪ್ರಯಾಣ ಆರಂಭಿಸಿದ ಕೇವಲ 5 ನಿಮಿಷಗಳಲ್ಲಿ, ಅಂದರೆ 10:20ರ ವೇಳೆಗೆ ಲುಲು ಮಾಲ್ ಮುಂಭಾಗದ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಮೊದಲು ಬಸ್​ನ ಕೆಳಭಾಗದಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಯಲ್ಲಿದ್ದ ಸಾರ್ವಜನಿಕರು ಹೊಗೆ ಮತ್ತು ಜ್ವಾಲೆಯನ್ನು ಗಮನಿಸಿ ತಕ್ಷಣವೇ ಬಸ್ ಚಾಲಕನಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತ ಚಾಲಕ, ಬಸ್​ ಸೈಡ್​ಗೆ ಹಾಕಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಬಸ್​ ಧಗಧಗ ಹೊತ್ತಿ ಉರಿದಿದೆ. ತದನಂತರ ಸಣ್ಣ ಸ್ಫೋಟದಂತಹ ಶಬ್ಧ ಕೂಢ ಕೇಳಿ ಬಂದಿದೆ. 

Bengaluru Shivamogga KSRTC Bus Catches Fir Near Lulu Mall in Bengaluru Passengers Escape Unhurt
Bengaluru Shivamogga KSRTC Bus Catches Fir Near Lulu Mall in Bengaluru Passengers Escape Unhurt

ಸಾಗರ : ಇಮ್ರಾನ್​ ಮತ್ತು ಇಮ್ತಿಯಾಜ್​ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್​ ತೀರ್ಪು

Bengaluru Shivamogga KSRTC Bus Catches Fir Near Lulu Mall in Bengaluru Passengers Escape Unhurt

ಇನ್ನೂ  ಅಗ್ನಿ ದುರಂತದಿಂದಾಗಿ ಮೆಜೆಸ್ಟಿಕ್ ಮತ್ತು ಲುಲು ಮಾಲ್ ನಡುವಿನ ಟ್ರಾಫಿಕ್ ಜಾಮ್ ಉಂಟಾಗಿತ್ತಷ್ಟೆ ಅಲ್ಲದೆ ಜನಜಂಗುಳಿ ಉಂಟಾಗಿತ್ತು.  ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದವು. ಇನ್ನೊಂದೆಡೆ ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಬಸ್ಸಿನಲ್ಲಿ ಡೀಸೆಲ್ ಸೋರಿಕೆಯಾಗಿರುವುದೇ ಈ ಅಗ್ನಿ ಅವಘಡಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ. ಆದಾಗ್ಯು ಘಟನೆಯ ಕಾರಣ ಅಧಿಕೃತವಾಗಿ ಇನ್ನಷ್ಟೆ ಹೊರಬರಬೇಕಿದೆ. 

ಶಿವಮೊಗ್ಗ : ಚಿನ್ನ ಖರೀದಿಸುವ ಮುನ್ನ ಈ ಗೋಲ್ಡ್​ ರೇಟಿನ ದರಪಟ್ಟಿ ಒಮ್ಮೆ ಗಮನಿಸಿ!

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Bengaluru Shivamogga KSRTC Bus Catches Fir Near Lulu Mall in Bengaluru Passengers Escape Unhurt
Bengaluru Shivamogga KSRTC Bus Catches Fir Near Lulu Mall in Bengaluru Passengers Escape Unhurt
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor