ಶಿವಮೊಗ್ಗ: ಜಿಲ್ಲೆಯ ಮೂವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ!

ಹಂಚಿಕೊಳ್ಳಿ
WhatsApp Facebook X Telegram
CM Medal 2025 Honour for Three Shivamogga Cops
CM Medal 2025 Honour for Three Shivamogga Cops

ಶಿವಮೊಗ್ಗ: ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ 2025ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆಶಿವಮೊಗ್ಗ ಜಿಲ್ಲೆಯ ಮೂವರು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಜನರಾಗಿದ್ದಾರೆ. 

ಶಿವಮೊಗ್ಗ: ರೈಲ್ವೆ ಸ್ಟೇಷನ್ ಬಳಿ ನಿಂತಿದ್ದ ಗೂಡ್ಸ್ ಲಾರಿ ಬೆಂಕಿಗೆ ಭಸ್ಮ; ತಪ್ಪಿದ ಭೀಕರ ದುರಂತ!

ಪದಕಕ್ಕೆ ಭಾಜನರಾದ ಸಾಧಕರು:

ಈ ಬಾರಿಯ ಸಿಎಂ ಪದಕಕ್ಕೆ ಆಯ್ಕೆಯಾದ ಶಿವಮೊಗ್ಗ ಜಿಲ್ಲೆಯ ಗಣ್ಯರ ವಿವರಗಳು ಹೀಗಿವೆ:

ಎಸ್. ರಮೇಶ್ ಕುಮಾರ್: ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 

ಅಣ್ಣಪ್ಪ ಎನ್ (HC 71): ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್. 

ರಾಘವೇಂದ್ರ ಜಿ (HC 336): ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್. 

ಎಸ್ಪಿ ನಿಖಿಲ್ ಬಿ. ಅವರಿಂದ ಅಭಿನಂದನೆ

ಜಿಲ್ಲೆಯ ಈ ಮೂವರು ಸಾಧಕರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ನಿಖಿಲ್ ಬಿ. ಅವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ಇಲಾಖೆಯ ಘನತೆಯನ್ನು ಹೆಚ್ಚಿಸಿದ ಇವರ ಸಾಧನೆಯು ಉಳಿದ ಸಿಬ್ಬಂದಿಗಳಿಗೂ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.

CM Medal 2025 Honour for Three Shivamogga Cops

CM Medal 2025 Honour for Three Shivamogga Cops
CM Medal 2025 Honour for Three Shivamogga Cops
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor