SHIVAMOGGA NEWS TODAY

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಿವಮೊಗ್ಗದ ಪ್ರಮುಖ ಆರೋಪಿಯ ತಪ್ಪೊಪ್ಪಿಗೆ ಅರ್ಜಿಗೆ ನ್ಯಾಯಾಲಯದ ಅಸ್ತು!

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Mangaluru Cooker Blast Case ಶಿವಮೊಗ್ಗ : ಶಿವಮೊಗ್ಗದಲ್ಲಿ ಅಂದಿನ  ಎಸ್​ಪಿ ಲಕ್ಷ್ಮೀ ಪ್ರಸಾದ್ ನೇತೃತ್ವದ ತಂಡ ಭೇದಿಸಿದ್ದ ತುಂಗಾ ತೀರದ ಟ್ರಯಲ್​ ಬ್ಲಾಸ್ಟ್​ ಕೇಸ್​ ನಂತರ ಶಿವಮೊಗ್ಗ ಐಸಿಸಿ ಮಾಡ್ಯುಲ್​ ಎಂಬ ವ್ಯವಸ್ಥಿತ ಉಗ್ರ ಸಂಚಿನ ಬಗ್ಗೆಎನ್​ಐಎ ತಂಡ ವಿಸ್ತೃತ ಚಾರ್ಜ್​ ಶೀಟ್​ ಸಲ್ಲಿಸಿತ್ತು. ತುಂಗಾ ತೀರದಲ್ಲಿ ಶಂಕಿತ ಉಗ್ರರು ಟ್ರಯಲ್​ ಬ್ಲಾಸ್ಟ್​ ನಡೆಸಿದ್ದ ಆರೋಪಿಗಳು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕಾರಣವಾಗಿದ್ದರಷ್ಟೆ ಅಲ್ಲದೆ ತದನಂತರ ರಾಮೇಶ್ವರಂ ಕಫೆಯಲ್ಲಿನ ಬ್ಲಾಸ್ಟ್​ಗೂ ಕಾರಣವಾಗಿದ್ದರು. ಸದ್ಯ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವಮೊಗ್ಗದ ಶಾರೀಖ್​ ತಪ್ಪೊಪ್ಪಿಕೊಂಡಿದ್ದಾನೆ.

ಶಿವಮೊಗ್ಗದಲ್ಲಿ 2 ದಿನ ವಿದ್ಯುತ್​ ವ್ಯತ್ಯಯ, ಯಾವಾಗ, ಎಲ್ಲೆಲ್ಲಿ ಕರೆಂಟ್​ ಇರಲ್ಲ

 ಈತ ಸಲ್ಲಿಸಿರುವ ತಪ್ಪೊಪ್ಪಿಗೆ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಅಂದಹಾಗೆ ಈತ ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್​ನಲ್ಲಿ ಮಾತ್ರ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದು, ತುಂಗಾ ತೀರದ ಟ್ರಯಲ್ ಬ್ಲಾಸ್ಟ್​ನಲ್ಲಿ ತಪ್ಪೊಪ್ಪಿಗೆ ಸಲ್ಲಿಸಿಲ್ಲ. ಬೆಂಗಳೂರಿನಲ್ಲಿರುವ ಎನ್​ಐಎ ವಿಶೇಷ ನ್ಯಾಯಾಲಯದಲ್ಲಿ ಕಳೆದ ಡಿಸೆಂಬರ್​ನಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದು ಇದೀಗ ಕೋರ್ಟ್ ಈತನ ಅರ್ಜಿಯನ್ನ ಮಾನ್ಯ ಮಾಡಿತ್ತು.

2024 ರ ಏಪ್ರಿಲ್​ನಲ್ಲಿ ಈ ಸಂಬಂಧ ಆರೋಪಿ ಮೇಲೆ ಚಾರ್ಜ್​ ಮಾಡಲಾಗಿತ್ತಾದರೂ, ಆ ಸಂದರ್ಭದಲ್ಲಿ ಶಾರೀಖ್​ ತಪ್ಪೊಪ್ಪಿಕೊಂಡಿರಲಿಲ್ಲ. ಇದೀಗ ಈತನೇ ಖುದ್ಧಾಗಿ ಅರ್ಜಿ ಸಲ್ಲಿಸಿರುವುದರಿಂದ ಕೋರ್ಟ್ ಅರ್ಜಿ ಮಾನ್ಯ ಮಾಡಿದ್ದು , ಈ ಹಿಂದೆ ಮಾಡಲಾದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಕೋರ್ಟ್ ಮತ್ತೊಮ್ಮೆ ಶಾರೀಖ್​ನಿಂದ ಹೇಳಿಕೆಯನ್ನು ಪಡೆಯಲಿದೆ. 

Mangaluru Cooker Blast Case ಶಿವಮೊಗ್ಗದವನಾದ ಶಾರೀಖ್​ ಮಂಗಳೂರಿನಲ್ಲಿ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಯಾಗಿದ್ದ. ಆ ಪ್ರಕರಣದಲ್ಲಿ 8 ತಿಂಗಳ ಕಾಲ ಜೈಲಿನಲ್ಲಿದ್ದ. ತದನಂತರ ಶಾರೀಖ್ ಆಂಡ್ ಟೀಂ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯವಸ್ಥಿತ ಸಂಚಿನ ತರಭೇತಿ ನಡೆಸಿತ್ತು. 2022 ರ ಸೆಪ್ಟೆಂಬರ್​ನಲ್ಲಿ ತುಂಗಾ ತೀರದಲ್ಲಿ ಐಇಡಿ ಬ್ಲಾಸ್ಟ್ ಮಾಡಿದ್ದ ಪ್ರಕರಣ ಹೊರಬಿದ್ದಿತ್ತು. ಅದಕ್ಕೂ ಮೊದಲು ನಡೆದಿದ್ದ ಕೊಲೆಯತ್ನ ಪ್ರಕರಣವೊಂದನ್ನ ಭೇದಿಸಿದ್ದ ಶಿವಮೊಗ್ಗ ಪೊಲೀಸರು ಉಗ್ರ ಸಂಚಿನ ದೊಡ್ಡ ಜಾಲವನ್ನೇ ಬಯಲಿಗೆಳೆದಿದ್ದರು. ಇದರ ಬೆನ್ನಲ್ಲೆ ನವೆಂಬರ್​ನಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್​ ಸ್ಫೋಟ ಸಂಭವಿಸಿತ್ತು. ಕುಕ್ಕರ್ ಬಾಂಬ್​ ಇಟ್ಟುಕೊಂಡು ಆಟೋದಲ್ಲಿ ತೆರಳುತ್ತಿದ್ದ ಶಾರೀಖ್​, ಆಕಸ್ಮಿಕವಾಗಿ ರಸ್ತೆಯಲ್ಲಿಯೇ ಕುಕ್ಕರ್ ಸ್ಫೋಟಗೊಂಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ. 

ಬಳಿಕ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಶಾರೀಖ್​ನ ಟಾರ್ಗೆಟ್​ಗಳ ಬಗ್ಗೆ ವಿಚಾರ ಗೊತ್ತಾಗಿತ್ತು.ತದನಂತರ ಶಾರೀಖ್​ನ ಸಹಚರರು ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ಸ್ಫೋಟಕ್ಕೆ ಕಾರಣವಾಗಿದ್ದರು. ಸಂಪೂರ್ಣ ಪ್ರಕರಣಗಳನ್ನು ತನ್ನ ತಕ್ಕೆಗೆ ತೆಗೆದುಕೊಂಡಿದ್ದ ಎನ್​ಐಎ ಶಿವಮೊಗ್ಗ ಐಸಿಸಿ ಮ್ಯಾಡ್ಯುಲ್​ ಎಂದು ಪ್ರತ್ಯೇಕಿಸಿ ಎಲ್ಲಾ ಪ್ರಕರಣಗಳಲ್ಲಿಯು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್​ ಶೀಟ್​ ಸಲ್ಲಿಸಿತ್ತು. ಅಲ್ಲದೆ ಆರೋಪಿಗಳ ಕುಕೃತ್ಯದ ಬಗ್ಗೆ ವಿಸ್ತೃತವಾಗಿ ವಿವರಿಸಿತ್ತು. 

ಈ ಮಧ್ಯೆ ಶಾರೀಖ್​ನ ತಪ್ಪೊಪ್ಪಿಗೆ ಪ್ರಕರಣವನ್ನು ಆತ ಜೈಲಿನಿಂದ ಬೇಗ ಬಿಡುಗಡೆಯಾಗಲು ಮಾಡುತ್ತಿರುವ ನಾಟಕದ ಭಾಗ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಇನ್ನೂ ಇದೇ ರೀತಿಯಲ್ಲಿ ಶಿವಮೊಗ್ಗ ಟ್ರಯಲ್​ ಬ್ಲಾಸ್ಟ್ ಕೇಸ್​ನಲ್ಲಿ ಒಟ್ಟು 12 ಆರೋಪಿಗಳ ಪೈಕಿ ಮೂವರು ತಪ್ಪೊಪ್ಪಿಗೆ ಸಲ್ಲಿಸಿದ್ದಾರೆ, ಕಳೆದ ವರ್ಷ ಇಬ್ಬರ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.

Dandavati River  Kannada  Horoscope car decor new
Shivamogga Property Tax

Mangaluru Cooker Blast Case Main Accused Pleads Guilty


Mangaluru Cooker Blast Case Main Accused Pleads Guilty

Mangaluru Cooker Blast Case Main Accused Pleads

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.