ಸ್ವಂತ ಉದ್ಯಮ ಮಾಡಬೇಕು ಅನ್ನಿಸುತ್ತಿದೆಯಾ!? ಹಾಗಿದ್ದರೇ ಈ ಸುದ್ದಿ ಓದಿ ಮಾಹಿತಿ ತಿಳಿದುಕೊಳ್ಳಿ !

ಹಂಚಿಕೊಳ್ಳಿ
WhatsApp Facebook X Telegram
ಸ್ವಂತ ಉದ್ಯಮ ಮಾಡಬೇಕು ಅನ್ನಿಸುತ್ತಿದೆಯಾ!? ಹಾಗಿದ್ದರೇ ಈ ಸುದ್ದಿ  ಓದಿ ಮಾಹಿತಿ ತಿಳಿದುಕೊಳ್ಳಿ !

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್(ಕರ್ನಾಟಕ ಉದ್ಯಮಶೀಲತಾಬಿವೃದ್ದಿ ಕೇಂದ್ರ, ಧಾರವಾಡ) ಸಂಸ್ಥೆಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗುತ್ತಿದೆ. 

ಇಚ್ಚಿಸುವ ಅಭ್ಯರ್ಥಿಗಳಿಗೆ ಒಂದು ದಿನದ ‘ಉದ್ಯಮಶೀಲತಾ ತಿಳುವಳಿಕೆ ತರಬೇತಿ ಶಿಬಿರ’ ವನ್ನು ದಿ: 21-09-2023 ರಂದು ಜನಶಿಕ್ಷಣ ಸಂಸ್ಥಾನ ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ.

ಶಿಬಿರದಲ್ಲಿ ಸ್ವಂತ ಉದ್ಯ ಸ್ಥಾಪನೆಗೆ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು/ಪ್ರೋತ್ಸಾ, ಇತ್ಯಾದಿ ವಿಷಯ ಕುರಿತು ಮಾಹಿತಿ ನಿಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಕನಿಷ್ಟ 18 ವರ್ಷ ವಯಸ್ಸಿನ, ಓದಲು. ಬರೆಯಲು ಬರುವ ಅಭ್ಯರ್ಥಿಗಳು ಈ ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದು. ಪ.ಜಾತಿ, ಪ.ಪಂ ಮತ್ತು ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು. ತರಬೇತಿ ಶಿಬಿರದಲ್ಲಿ ಭಾವಹಿಸುವವರು 2 ಪಾಸ್‍ಪೋರ್ಟ್ ಅಳತೆ ಫೋಟೊ ಮತ್ತು ಆಧಾರ್ ಕಾರ್ಡ್ ಪ್ರತಿ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್, ನೆಹರು ರಸ್ತೆ, ಶಿವಮೊಗ್ಗ ಹಾಗೂ ಸಿಡಾಕ್ ತರಬೇತುದಾರ ಅವಿನಾಶ್ ದೂ.ಸಂ: 9164811887 ಇವರನ್ನು ಸಂಪರ್ಕಿಸಬಹುದು.


ಇನ್ನಷ್ಟು ಸುದ್ದಿಗಳು 

 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor