SAGARA

ಸಾಗರದ ವಕೀಲೆ ಶ್ರಾವ್ಯಾ ಸಾಗರ್​ಗೆ ಜೀವವೈವಿಧ್ಯ ಪ್ರಶಸ್ತಿ! ಏನಿದರ ವಿಶೇಷ? ಓದಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಸಾಗರ / ಕರ್ನಾಟಕ ಸರ್ಕಾರದ ಜೀವವೈವಿಧ್ಯ ಮಂಡಳಿಯು ನೀಡುವ 2025-26ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ಜೀವವೈವಿಧ್ಯ ಪ್ರಶಸ್ತಿಗೆ ಇಲ್ಲಿನ ಶ್ರಾವ್ಯಾ ಸಾಗರ್‌ ಅವರು ಭಾಜನರಾಗಿದ್ದಾರೆ. ಅವರು ನಿರ್ಮಿಸಿರುವ ‘ವರದಾನದಿ ಜೀವವೈವಿಧ್ಯ’ ಕುರಿತಾದ ಸಾಕ್ಷ್ಯಚಿತ್ರವನ್ನು ಈ ಸಾಲಿನ ಅತ್ಯುತ್ತಮ ಜೀವವೈವಿಧ್ಯ ಸಾಕ್ಷ್ಯಚಿತ್ರ ಎಂದು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ 22-05-2026ರಂದು ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅರಣ್ಯ, ಜೀವಪರಿಸರ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ ಖಂಡ್ರೆ ಅವರು ಶ್ರಾವ್ಯಾ ಸಾಗರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಶ್ರಾವ್ಯಾ ಸಾಗರ್‌ ಪರಿಚಯ

  • ಮೂಲತಃ ಸಾಗರದವರಾದ ಶ್ರಾವ್ಯಾ ಅವರು ಪ್ರಗತಿಪರ ಕೃಷಿಕರಾದ ನಾಗೇಂದ್ರ ಸಾಗರ್ ಮತ್ತು ವಾಣಿಶ್ರೀ ದಂಪತಿಯ ಪುತ್ರಿಯಾಗಿದ್ದು, ವೃತ್ತಿಯಲ್ಲಿ ವಕೀಲರಾಗಿದ್ದಾರೆ.
  • ಪರಿಸರದ ಮೇಲಿನ ಕಾಳಜಿಯಿಂದ ಅವರು ನಿರ್ಮಿಸಿರುವ ಈ ಸಾಕ್ಷ್ಯಚಿತ್ರಕ್ಕೆ ಕೆ. ವೆಂಕಟೇಶ್ ಕವಲಕೋಡು ಅವರು ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ, ಶೆಡ್ತಿಕೆರೆಯ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರದ ಸಹಕಾರದೊಂದಿಗೆ ಈ ಕೃತಿ ಮೂಡಿಬಂದಿದೆ.
  • ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಶ್ರಾವ್ಯಾ ಸಾಗರ್ ಅವರ ಸಾಧನೆಯನ್ನು ಶ್ಲಾಘಿಸಿ, ವೃಕ್ಷ ಲಕ್ಷ ಆಂದೋಲನ-ಕರ್ನಾಟಕ ಹಾಗೂ ಶೆಡ್ತಿಕೆರೆ ಸಮುದಾಯ ವಿಜ್ಞಾನ ಕೇಂದ್ರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ