STATE NEWS

ಯುವಜನತೆಗೆ ಗುಡ್ ನ್ಯೂಸ್, ಶಿವಮೊಗ್ಗಕ್ಕೆ ಬಂದ ಜೆಸಿ ಕೆಂಗೋ ಸುಜುಕಿ! 100 ದಿನಗಳ ಕಾಬಿಲ್​ ಪ್ರಾಜೆಕ್ಟ್​ ! ಡಿಟೇಲ್ಸ್ ಓದಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನತೆಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಜೆಸಿಐ ಇಂಡಿಯಾ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ ‘ಕಾಬಿಲ್’ ಯೋಜನೆಗೆ ನಗರದಲ್ಲಿ ಚಾಲನೆ ನೀಡಲಾಗಿದೆ.

ಯುವಜನತೆಗೆ ಗುಡ್ ನ್ಯೂಸ್

ಜೆಸಿಐ ಅನಿಕೇತನ, ಒನ್ ಕ್ಲಿಕ್ ಅಕಾಡೆಮಿ ಹಾಗೂ ಸನ್ ರೈಸ್ ಡಿಜಿಟಲ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ 100 ದಿನಗಳ ತರಬೇತಿ ಕಾರ್ಯಕ್ರಮವನ್ನು ಜೆಸಿಐ ಅಂತಾರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿ ಕೆಂಗೋ ಸುಜುಕಿ ಅವರು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜೆಸಿ ಕೆಂಗೋ ಸುಜುಕಿ ಅವರು, ಭವಿಷ್ಯದ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂತಹ ಪರಿಣಾಮಕಾರಿ ಯೋಜನೆಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಜೆಸಿಐ ವಲಯಾಧ್ಯಕ್ಷ ಮಧುಸೂದನ್ ನಾವಡ ಅವರು ಮಾತನಾಡಿ, ಕಾಬಿಲ್ ಯೋಜನೆಯ ಸದುಪಯೋಗವನ್ನು ಎಲ್ಲ ಶಿಬಿರಾರ್ಥಿಗಳು ಪಡೆದುಕೊಳ್ಳಬೇಕು ಎಂದು ಆಶಿಸಿದರು.

ಜೆಸಿಐ ಅನಿಕೇತನದ ಅಧ್ಯಕ್ಷರಾದ ಸಂದೇಶ್ ಎಂ. ಅವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಉದ್ಯೋಗದ ಅವಶ್ಯಕತೆ ಇರುವವರನ್ನು ಗುರುತಿಸಿ, ಅವರಿಗೆ ಸೂಕ್ತ ಕೌಶಲ ತರಬೇತಿ ನೀಡುವ ಮೂಲಕ ಸಶಕ್ತರನ್ನಾಗಿ ಮಾಡುವುದು ಕಾಬಿಲ್ ಯೋಜನೆಯ ಪ್ರಮುಖ ಆಶಯವಾಗಿದೆ.

100 ದಿನದ ತರಬೇತಿಯ ಮುಖ್ಯಾಂಶಗಳು

  • ಮುಂದಿನ 100 ದಿನಗಳ ಕಾಲ ಡಿಜಿಟಲ್ ಲಿಟರಸಿ ಹಾಗೂ ನ್ಯೂಸ್ ಆ್ಯಂಕರಿಂಗ್ ವಿಷಯಗಳಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ.
  • ತರಬೇತಿ ಪೂರ್ಣಗೊಂಡ ಬಳಿಕ ವಿವಿಧ ಕಂಪನಿಗಳನ್ನು ಆಹ್ವಾನಿಸಿ ಉದ್ಯೋಗಕ್ಕಾಗಿ ಸಂದರ್ಶನ ಪ್ರಕ್ರಿಯೆಗಳನ್ನು ಆಯೋಜಿಸಲಾಗುವುದು.
  • ಒಂದು ವೇಳೆ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಛಿಸುವವರಿಗೂ ಎಲ್ಲ ರೀತಿಯ ಅಗತ್ಯ ನೆರವು ಒದಗಿಸಲಾಗುವುದು.
  • ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳು ಕೌಶಲಗಳನ್ನು ಬೆಳೆಸಿಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳುವ ಗುರಿ ಹೊಂದಬಹುದು.

ಇದೇ ವೇಳೆ ಕಾರ್ಯಕ್ರಮ ಉದ್ಘಾಟಿಸಿದ ಜೆಸಿಐ ಅಂತಾರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿ ಕೆಂಗೋ ಸುಜುಕಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಮಲೆನಾಡಿನ ಸಾಂಪ್ರದಾಯಿಕ ಹಾಗೂ ವಿಶಿಷ್ಟವಾದ ಹಸೆ ಚಿತ್ತಾರ ಕಲೆಯಲ್ಲಿ ಬಿಡಿಸಲಾದ ಜೆಸಿಐ ಲಾಂಛನದ ಚಿತ್ರವನ್ನು ಅವರಿಗೆ ಕೊಡುಗೆಯಾಗಿ ನೀಡಲಾಯಿತು.

ಸಮಾರಂಭದಲ್ಲಿ ಜೆಸಿ ಸೆನೆಟರ್ ರೋಹಿತ್ ಕುಮಾರ್ ಲೋಧ ಆರ್, ವಲಯ ಉಪಾಧ್ಯಕ್ಷ ಜೆಸಿ ಸೆನ್ ಗಣೇಶ್ ರಮೇಶ್ ಪೈ, ಜೆಸಿ ನಂದಿನಿ ಸಾಗರ, ಜೆಸಿ ನಿಧಿ ಕೆ.ಜೆ., ಜೆಸಿ ಹೊನ್ನಾಳಿ ಚಂದ್ರಶೇಖರ್, ಜೆಸಿ ಪೂರ್ಣಿಮಾ ಹೆಚ್.ಎಂ., ಜೆಸಿ ಫಹೀಮ್ ಹಾಗೂ ಜೆಸಿ ಕೊಟ್ರೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು..

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY