ಸೋಶಿಯಲ್ ಮೀಡಿಯಾದಲ್ಲಿ ಹೀಗಾದರೆ ಖಂಡಿತವಾಗಿ ರಿಪೋರ್ಟ್ ಮಾಡಿ!

ಕೊನೆಯ ನವೀಕರಣ: 28 ಜುಲೈ 2026, 8:03 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
ಸೋಶಿಯಲ್ ಮೀಡಿಯಾದಲ್ಲಿ ಹೀಗಾದರೆ ಖಂಡಿತವಾಗಿ ರಿಪೋರ್ಟ್ ಮಾಡಿ!

Shivamogga Police Campaign / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸೋಶಿಯಲ್ ಮೀಡಿಯಾದ ಮಿಸ್ ಯಸ್​ಗಳನ್ನು ತಡೆಯೋಕೆ ಅಂತಾನೇ ಇದೀಗ ಶಿವಮೊಗ್ಗ ಪೊಲೀಸ್ ಅಭಿಯಾನ ಕ್ಯಾಂಪೇನ್ ಆರಂಭಿಸಿದೆ. ಸೋಶಿಯಲ್ ಮೀಡಿಯಾದಲ್ಲಿನ ಫೇಕ್​ ಐಟಮ್​ಗಳನ್ನು ರಿಪೊರ್ಟ್ ಮಾಡಿ ಎಂದು ಪೊಲೀಸ್ ಇಲಾಖೆ ಸಜೀಶನ್ ನೀಡಿದೆ.

ಕೇವಲ ಸಮಯ ಕಳೆಯುವ ಮನೋರಂಜನಾ ಸಾಧನವನ್ನಾಗಿ ಪರಿಗಣಿಸದೆ ಸೋಶಿಯಲ್ ಮೀಡಿಯಾವನ್ನು ಜವಾಬ್ದಾರಿಯುತವಾಗಿ ಬಳಸುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಜಾಲತಾಣಗಳಲ್ಲಿ ಸುಳ್ಳು ಹಾಗೂ ತಪ್ಪಾದ ವಿಚಾರಗಳು ವೈರಲ್ ಆದಾಗ, ಅವುಗಳನ್ನು ನಿರ್ಲಕ್ಷ್ಯ ಮಾಡದೆ ತಕ್ಷಣವೇ ರಿಪೋರ್ಟ್ ಮಾಡಿ ಬ್ಲಾಕ್ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ವಾಸ್ತವದಲ್ಲಿ ತಪ್ಪು ನಡೆದಾಗ ನಾವು ಹೇಗೆ ಎಚ್ಚೆತ್ತುಕೊಂಡು ಜವಾಬ್ದಾರಿಯಿಂದ ವರ್ತಿಸುತ್ತೇವೆಯೋ, ಅದೇ ರೀತಿ ಡಿಜಿಟಲ್ ಪ್ರಪಂಚದಲ್ಲಿಯೂ ಜಾಗರೂಕರಾಗಿರುವುದು ಉತ್ತಮ . ಇಂತಹ ಸಣ್ಣ ನಿರ್ಧಾರಗಳು ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲವು ಎಂದು ಪೊಲೀಸರು ಜಾಗೃತಿ ಅಭಿಯಾನದ ವಿಡಿಯೋ ಸಂದೇಶವನ್ನು ರಿಲೀಸ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾದ ವಿಚಾರ ಅಥವಾ ಸುಳ್ಳು ಸುದ್ದಿ ಕಂಡುಬಂದಾಗ, ಆ ಪೋಸ್ಟ್‌ನ ಮೇಲ್ಭಾಗದಲ್ಲಿರುವ ಮೂರು ಡಾಟ್‌ಗಳ ಮೇಲೆ ಕ್ಲಿಕ್ ಮಾಡಬೇಕು. ತದನಂತರ ರಿಪೋರ್ಟ್ ಆಯ್ಕೆಯನ್ನು ಒತ್ತಿ, ವರದಿ ಮಾಡಲು ಸೂಕ್ತವಾದ ಕಾರಣ ಆಯ್ಕೆ ಮಾಡಿ ಸಬ್ಮಿಟ್ ನೀಡುವ ಮೂಲಕ ಸುಲಭವಾಗಿ ದೂರು ದಾಖಲಿಸಬಹುದಾಗಿದೆ.

ವಂಚನೆ ಮತ್ತು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರು ಧೈರ್ಯವಾಗಿ ಈ ರೀತಿ ವರದಿ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್​ ಇಲಾಖೆ ಸೂಚಿಸಿದೆ. ಅಲ್ಲದೆ ಪಬ್ಲಿಕ್ ಐ 8277982900 ಸಂಖ್ಯೆಯನ್ನು ಬಳಸುವ ಮೂಲಕವೂ ದೂರು ನೀಡಬಹುದಾಗಿದೆ ಎಂದು ತಿಳಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor