ದನ ಮೇಯಿಸುವ ವಿಚಾರಕ್ಕೆ ಕಿರಿಕ್!ಕೊಂದು ಬಾವಿಸರ ಹಳ್ಳದ ಹತ್ತಿರ ಹೂತು ಹಾಕಿದ ಐವರು!

ಹಂಚಿಕೊಳ್ಳಿ
WhatsApp Facebook X Telegram
shimoga chikkamagaluru malnad crime news Annanagar Wife Conspires to Murder Husband in Shivamogga
shimoga chikkamagaluru Wife chikkamagaluru Conspires to Murder Husband in Shivamogga

Kadur Murder Case / ಮಲೆನಾಡು ಟುಡೆ ಸುದ್ದಿ / ಕಡೂರು/ ಗೋಮಾಳದಲ್ಲಿ ಹಸು ಮೇಯಿಸುವ ವಿಷಯದಲ್ಲಿ ಇದ್ದ ವೈಯಕ್ತಿಕ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಕೊಂದು ಹೂತು ಹಾಕಿದ ಘಟನೆ ತಾಲೂಕಿನ ಯಗಟಿ ಹೋಬಳಿಯ ದೊಣ್ಣೆಕೋರನಹಳ್ಳಿಯಲ್ಲಿ ನಡೆದಿದೆ. ದೊಣ್ಣೆಕೋರನಹಳ್ಳಿಯ ಕರಿಯಪ್ಪ(47) ಮೃತಪಟ್ಟವರು.

ಕರಿಯಪ್ಪ ತಮ್ಮ ಸಹೋದರ ನರಸಿಂಹಯ್ಯ ಅವರ ಕುಟುಂಬದೊಡನೆ ಗ್ರಾಮದಲ್ಲಿ ದನ-ಕರು ಮೇಯಿಸಿಕೊಂಡಿದ್ದವರು. ಇವರಿಗೂ ಮತ್ತು ಇದೇ ಗ್ರಾಮದ ಮಾಡಾಳು ಕೆಂಚಪ್ಪ ಎಂಬುವವರಿಗೂ ತಗಾದೆಯಿತ್ತಂಥೆ. ದನ ಮೇಯಿಸುವ ವಿಚಾರಕ್ಕೆ ಆಗಾಗ್ಗೆ ಜಗಳ ಆಗುತಿತ್ತು ಎಂದು ಹೇಳಲಾಗುತ್ತಿದೆ.

ಕಳೆದ ಶನಿವಾರ ಬೆಳಗ್ಗೆ ಕೂಡ ಈ ವಿಚಾರವಾಗಿ ಕಿರಿಕ್ ಆಗಿದೆ, ಮನೆಯಲ್ಲಿ ಈ ವಿಷಯ ತಿಳಿಸಿದಾಗ ಕರಿಯಪ್ಪನ ಅತ್ತಿಗೆ ಸಮಾಧಾನ ಪಡಿಸಿದ್ದರು. ಆನಂಥೆ ಗ್ರಾಮದ ಬಾಲಾಜಿ ಕ್ಲಬ್ ಕಟ್ಟಡದಲ್ಲಿ ಕರಿಯಪ್ಪ ಮಲಗಲು ತೆರಳಿದವರು ಭಾನುವಾರ ಬೆಳಗ್ಗೆ 8 ಗಂಟೆಯಾದರೂ ಮನೆಗೆ ವಾಪಸಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಸುತ್ತಮುತ್ತ ವಿಚಾರಿಸಿದ್ದಾರೆ. ಅಲ್ಲದೆ ಕೆಂಚಪ್ಪನ ಬಳಿಯು ಕೇಳಿದ್ದಾರೆ. ಆದರೆ ಆತ ಕರಿಯಪ್ಪನ ಬಗ್ಗೆ ಗೊತ್ತಿಲ್ಲವೆಂದು ಹೇಳಿದ್ದ.

ಅಂತಿಮವಾಗಿ ಗ್ರಾಮಸ್ಥರು ಹಾಗೂ ಜಯಮ್ಮ ಬಾಲಾಜಿ ಕಬ್ಬಿನ ಹತ್ತಿರದ ಸಿಸಿ ಕ್ಯಾಮೆರಾ ಗಮನಿಸಿದಾಗ, ಕರಿಯಪ್ಪ ಅವರು ಕೆಂಚಪ್ಪ ಅವರ ಮನೆಯ ಕಡೆಗೆ ಹೋಗುವುದು ಕಂಡು ಬಂದಿತ್ತು. ನಂತರ ಗ್ರಾಮಸ್ಥರಲ್ಲಿ ವಿಚಾರಿಸಿದಾಗ ಕೆಂಚಪ್ಪನ ತಮ್ಮ ಚಂದ್ರಪ್ಪ ಕರಿಯಪ್ಪನ ಅವರ ಮನೆಗೆ ಬಾ ಎಂದು ಕರೆದ ವಿಚಾರ ಗೊತ್ತಾಗಿದೆ.

ಅಂತಿಮವಾಗಿ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಚಂದ್ರಪ್ಪ ಹಾಗೂ ಆತನ ಅಣ್ಣ ಕೆಂಚಪ್ಪ , ರಾಕೇಶ, ಯದುವೀರ, ಹೇಮಾ ,ಕರಿಯಪ್ಪನನ್ನ ಕೊಲೆ ಮಾಡಿ ಬಾವಿಸರ ಹಳ್ಳದ ಹತ್ತಿರ ಹೂತು ಹಾಕಿರುವ ವಿಚಾರ ಗೊತ್ತಾಗಿದೆ.

ಇನ್ನೂ ದೂರಿನನ್ವಯ ನಿನ್ನೆ ದಿನ ಸೋಮವಾರ ಮಧ್ಯಾಹ್ನ ಯಗಟಿ ಪೊಲೀಸರು ಕಡೂರು ತಹಶೀಲ್ದಾರರ ಸಮ್ಮುಖದಲ್ಲಿ ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರ ಪುತ್ರ ಅಭಿಷೇಕ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಚಂದ್ರಪ್ಪ ಕೆಂಚಪ್ಪನ ಮಕ್ಕಳಾದ ಯದುವೀರ, ರಾಕೇಶ, ಕೆಂಚಪ್ಪನ ಹೆಂಡತಿ ಹೇಮಾರನ್ನು ವಶಕ್ಕೆ ಪಡೆದಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor