ಶಿವಮೊಗ್ಗದಲ್ಲಿ ಮೂರು ಪ್ರತ್ಯೇಕ ಘಟನೆ / ಇಬ್ಬರು ಯುವಕ, ಓರ್ವ ಅಪ್ರಾಪ್ತೆ ಸಾವು/ ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದಲ್ಲಿ ಮೂರು ಪ್ರತ್ಯೇಕ ಘಟನೆ / ಇಬ್ಬರು ಯುವಕ, ಓರ್ವ ಅಪ್ರಾಪ್ತೆ ಸಾವು/ ನಡೆದಿದ್ದೇನು?
ಶಿವಮೊಗ್ಗದಲ್ಲಿ ಮೂರು ಪ್ರತ್ಯೇಕ ಘಟನೆ / ಇಬ್ಬರು ಯುವಕ, ಓರ್ವ ಅಪ್ರಾಪ್ತೆ ಸಾವು/ ನಡೆದಿದ್ದೇನು?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳಲ್ಲಿ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ನಡೆದ ಘಟನೆ ಹಾಗೂ ಮೃತರ ಬಗೆಗಿನ ವಿವರ ಇಲ್ಲಿದೆ.

ಶಿವಮೊಗ್ಗದಲ್ಲಿ ನೇಣಿಗೆ ಶರಣಾದ ಅಪ್ರಾಪ್ತೆ

ಶಿಕಾರಿಪುರ ತಾಲೂಕು, ಗ್ರಾಮವೊಂದರ ಅಪ್ತಾಪ್ತೆಯೊಬ್ಬರು ಶಿವಮೊಗ್ಗದ ಪುನರ್ವಸತಿ ಕೇಂದ್ರವೊಂದರಲ್ಲಿ ನೇಣಿಗೆ ಶರಣಾಗಿರುವ ಬಗ್ಗ ವರದಿಯಾಗಿದೆ. ಅಪ್ರಾಪ್ತ ವಿದ್ಯಾರ್ಥಿನಿಯು ಅನಾರೋಗ್ಯದ ಸಮಸ್ಯೆಯಿಂದಾಗಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿರಲಿಲ್ಲ. ಆನಂತರ ಈಕೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಈಕೆಗೆ ಚಿಕಿತ್ಸೆ ಕೊಡಿಸಿ, ಔಷಧೋಪಚಾರದ ಬಳಿಕ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಅಲ್ಲಿ ಈ ಘಟನೆ ನಡೆದಿದ್ದು ಕಂಪ್ಲೆಂಟ್ ಕೂಡ ದಾಖಲಾಗಿದೆ.

ಶಿವಮೊಗ್ಗದಲ್ಲಿ ಕರೆಂಟ್ ಹೊಡೆದು ಯುವಕ ಸಾವು

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದ ಕುಂಬಾರ ಬೀದಿಯಲ್ಲಿ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕರೆಂಟ್ ಶಾಕ್ ಹೊಡೆದಿದೆ. ಪರಿಣಾಮ 28 ವರ್ಷದ ಚೇತನ್ ಎಂಬ ಯುವಕ ಮೃತಪಟ್ಟಿದ್ದಾನೆ. ಗಾರೆ ಕೆಲಸಕ್ಕೆ ನೀರು ಒದಗಿಸಲು, ಸಾಕೆಟ್‌ಗೆ ವೈರ್ ಸಿಕ್ಕಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಘಟನೆ ನಡೆದ ಬೆನ್ನಲ್ಲೆ ಈತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಮಾರ್ಗ ಮಧ್ಯೆ ಯುವಕ ಸಾವನ್ನಪ್ಪಿದ್ದ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗದಲ್ಲಿ ರೈಲ್ವೆ ಹಳಿಗೆ ಸಿಲುಕಿ ಯುವಕ ಸಾವು

ನಗರದ ರೈಲ್ವೆ ನಿಲ್ದಾಣದ ಯಾರ್ಡ್ ಪ್ರದೇಶದಲ್ಲಿ ಯುವಕನೋರ್ವ ಶವ ಪತ್ತೆಯಾಗಿದೆ. ರೈಲಿಗೆ ತಲೆಕೊಟ್ಟು ಈತ ಜೀವ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಗೆ ಅಂದಾಜು 20 ರಿಂದ 25 ವರ್ಷ ವಯಸ್ಸಾಗಿದ್ದು, ಸುಮಾರು 5.2 ಅಡಿ ಎತ್ತರವಿದ್ದಾನೆ. ಗೋಧಿ ಬಣ್ಣದ ತ್ವಚೆ, ಸಾಧಾರಣ ಮೈಕಟ್ಟು ಹಾಗೂ ಕಪ್ಪು ಬಣ್ಣದ ಕೂದಲನ್ನು ಹೊಂದಿರುವ ಈತನು ಕೆಂಪು ಬಣ್ಣದ ಅರ್ಧ ತೋಳಿನ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಬಲಗೈಗೆ ಕೆಂಪು ದಾರ ಕಟ್ಟಿಕೊಂಡಿದ್ದು, ಎಡಗೈಯಲ್ಲಿ ಕಡಗವನ್ನು ಧರಿಸಿದ್ದಾನೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯನ್ನು ಖುದ್ದಾಗಿ ಅಥವಾ 08182-222974 ಮತ್ತು 948082124 ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸುವಂತೆ ಇಲಾಖೆಯು ಪ್ರಕಟಣೆಯಲ್ಲಿ ಕೋರಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor