ಮೇ 11 ರ ದೈನಂದಿನ ಭವಿಷ್ಯ ಮತ್ತು ಪಂಚಾಂಗದ ಸಂಪೂರ್ಣ ವಿವರ

ಹಂಚಿಕೊಳ್ಳಿ
WhatsApp Facebook X Telegram
ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs
Panchanga and Daily Horoscope February 25, 2026 | February 25, 2026 ರ ಇಂದಿನ ಪಂಚಾಂಗ, ರಾಹುಕಾಲ, ಶುಭ ಮುಹೂರ್ತ ಮತ್ತು 12 ರಾಶಿಗಳ ಸಂಪೂರ್ಣ ದಿನ ಭವಿಷ್ಯ Daily Horoscope

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇವತ್ತಿನ ದಿನಭವಿಷ್ಯ / ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು ಹಾಗೂ ವೈಶಾಖ ಮಾಸದ ನವಮಿ ತಿಥಿಯು ಬೆಳಿಗ್ಗೆ 10.16 ರವರೆಗೆ ಇರಲಿದ್ದು, ತದನಂತರ ದಶಮಿ ತಿಥಿ ಆರಂಭವಾಗಲಿದೆ. ಶತಭಿಷ ನಕ್ಷತ್ರ ರಾತ್ರಿ 8.55 ರವರೆಗೆ ಇರಲಿದ್ದು, ಬಳಿಕ ಪೂರ್ವಾಭಾದ್ರ ನಕ್ಷತ್ರ ಪ್ರವೇಶವಾಗಲಿದೆ. ಬೆಳಿಗ್ಗೆ 7.30 ರಿಂದ 9.00 ರವರೆಗೆ ರಾಹುಕಾಲವಿದ್ದರೆ, ಬೆಳಿಗ್ಗೆ 10.30 ರಿಂದ 12.00 ರವರೆಗೆ ಯಮಗಂಡ ಕಾಲವಿರುತ್ತದೆ.

ಇವತ್ತಿನ ದಿನಭವಿಷ್ಯ /ಭವಿಷ್ಯ ಮತ್ತು ಪಂಚಾಂಗ

ಮೇಷ / ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು, ಶುಭ ವಾರ್ತೆ ಕೇಳಿಬರಲಿವೆ. ಹೆಚ್ಚುವರಿ ಆದಾಯದ ಜೊತೆಗೆ ಆಧ್ಯಾತ್ಮಿಕ ಚಿಂತನೆ ಮೂಡಲಿದೆ, ವ್ಯವಹಾರಗಳಲ್ಲಿ ಪ್ರಗತಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ಸಾಹದಿಂದ ಸಾಗಲಿವೆ.

ವೃಷಭ / ಆಕಸ್ಮಿಕ ಧನಲಾಭ, ಬಾಲ್ಯದ ಸ್ನೇಹಿತರ ಭೇಟಿ ಹಾಗೂ ಗಣ್ಯರ ಪರಿಚಯವಾಗಲಿದೆ. ವಾಹನ ಯೋಗ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಪ್ರೋತ್ಸಾಹದಾಯಕವಾಗಿರಲಿದೆ.

ಮಿಥುನ / ಸಾಲ ಆಗಬಹುದು, ಅಧಿಕ ಶ್ರಮ ಹಾಗೂ ಕೆಲಸಗಳಲ್ಲಿ ಆತುರ , ಆಕಸ್ಮಿಕ ಪ್ರಯಾಣ, ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಹಾಗೂ ಅನಾರೋಗ್ಯ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.

ಈ ದಿನದ ಭವಿಷ್ಯ ಮತ್ತು ಪಂಚಾಂಗ

ಕರ್ಕಾಟಕ / ಸ್ನೇಹಿತರೊಂದಿಗೆ ಕಲಹ, ಅನಾರೋಗ್ಯ ಹಾಗೂ ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ಸಮಸ್ಯೆ ಎದುರಾಗಲಿವೆ. ಮನೆಯೊಳಗೆ ಮತ್ತು ಹೊರಗೆ ಕಿರಿಕಿರಿ, ದೇವಾಲಯಗಳಿಗೆ ಭೇಟಿ.

ಸಿಂಹ / ಆಸ್ತಿ ಲಾಭ, ಸ್ನೇಹಿತರು ಹಾಗೂ ಸಂಬಂಧಿಕರ ಭೇಟಿ. ವಸ್ತು ಲಾಭ ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿ , ಉದ್ಯೋಗಿಗಳಿಗೆ ಅನಿರೀಕ್ಷಿತ ಸ್ಥಾನಮಾನ ದೊರೆಯಲಿದೆ.

ಕನ್ಯಾ / ನಿರುದ್ಯೋಗಿಗಳಿಗೆ ಶುಭ ವಾರ್ತೆ , ಕಾರ್ಯ ಜಯ, ಬಾಲ್ಯದ ಸ್ನೇಹಿತರ ಭೇಟಿ ಹಾಗೂ ವಾಹನ ಯೋಗ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ಸಾಹ ನೀಡಲಿವೆ.

ತುಲಾ / ಆರ್ಥಿಕ ತೊಂದರೆ, ಅನಿರೀಕ್ಷಿತ ಪ್ರಯಾಣ, ಒತ್ತಡ ಹಾಗೂ ಅನಾರೋಗ್ಯ , ವ್ಯವಹಾರಗಳಲ್ಲಿ ಅಡೆತಡೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ .

ವೃಶ್ಚಿಕ / ಕೆಲಸ ಮುಂದೂಡಲ್ಪಡಲಿದ್ದು, ಆರ್ಥಿಕ ತೊಂದರೆ ಹಾಗೂ ಸಾಲ ಮಾಡುವ ಪ್ರಯತ್ನ ಮಾಡುವರು, ದೂರ ಪ್ರಯಾಣ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದ್ದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ಸಾಧಾರಣವಾಗಿರಲಿದೆ.

ಭವಿಷ್ಯ ಮತ್ತು ಪಂಚಾಂಗ

ಧನುಸ್ಸು / ಹೊಸ ಉದ್ಯೋಗಾವಕಾಶ, ಗಣ್ಯರ ಪರಿಚಯ, ಶುಭ ವಾರ್ತೆ ಹಾಗೂ ಆರ್ಥಿಕ ಅಭಿವೃದ್ಧಿ . ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದು, ವ್ಯವಹಾರಗಳಲ್ಲಿ ಯಶಸ್ಸು ಹಾಗೂ ವ್ಯಾಪಾರ, ಉದ್ಯೋಗದಲ್ಲಿ ಈ ದಿನ ಆಶಾದಾಯಕವಾಗಿರಲಿದೆ.

ಮಕರ / ಆಕಸ್ಮಿಕ ಪ್ರಯಾಣ, ಸಂಬಂಧಿಕರೊಂದಿಗೆ ವಿವಾದ ಹಾಗೂ ಅನಾರೋಗ್ಯ ಕಾಡಲಿದೆ. ಜವಾಬ್ದಾರಿ ಹೆಚ್ಚಾಗಲಿದ್ದು, ವ್ಯಾಪಾರ, ಉದ್ಯೋಗದಲ್ಲಿ ಈ ದಿನ ಮಂದಗತಿಯಲ್ಲಿ ಸಾಗಲಿದೆ.

ಕುಂಭ / ಸಂತೋಷದಿಂದ ಕಾಲ ಕಳೆಯಲಿದ್ದು, ಸೇವೆಗಳಿಗೆ ಮನ್ನಣೆ ದೊರೆಯಲಿದೆ. ಆಸ್ತಿ ಲಾಭ ಹಾಗೂ ಸ್ನೇಹಿತರ ಭೇಟಿ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ ಕಂಡುಬರಲಿದೆ.

ಮೀನ / ವ್ಯವಹಾರಗಳಲ್ಲಿ ಅಡೆತಡೆ, ಅನಿರೀಕ್ಷಿತ ಪ್ರಯಾಣ ಹಾಗೂ ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ,ದೈವ ದರ್ಶನ ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಗೊಂದಲಮಯವಾಗಿರಲಿವೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor