Shivamogga Airport Visibility Issues ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಾಡಿದ ವಿಸಿಬಿಲಿಟಿ ಸಮಸ್ಯೆ

Shivamogga Airport Visibility Issues ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಾಡಿದ ‘ವಿಸಿಬಿಲಿಟಿ’ ಸಮಸ್ಯೆ

ಶಿವಮೊಗ್ಗ, ಜುಲೈ 19: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಈ ಮಳೆಗಾಲದಲ್ಲಿ ವಿಮಾನಗಳ ಲ್ಯಾಂಡಿಂಗ್‌ಗೆ ದೊಡ್ಡ ಸಮಸ್ಯೆ ಎದುರಾಗಿದ್ದು, ಮುಖ್ಯವಾಗಿ ವಿಸಿಬಿಲಿಟಿ (ದೃಶ್ಯಮಾನತೆ) ಕೊರತೆಯಿಂದಾಗಿ ವಿಮಾನಗಳು ಸಮರ್ಪಕವಾಗಿ ಲ್ಯಾಂಡ್ ಆಗುತ್ತಿಲ್ಲ. ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಅಗತ್ಯವಿರುವ ಉಪಕರಣಗಳು ಬಂದಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಅದರ ಅಳವಡಿಕೆ ವಿಳಂಬವಾಗುತ್ತಿದೆ.

ಇತ್ತೀಚೆಗೆ ಸಿಗಂದೂರು ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿದ್ದ ವಿಶೇಷ ವಿಮಾನಕ್ಕೂ ಇದೇ ವಿಸಿಬಿಲಿಟಿ ಸಮಸ್ಯೆ ಎದುರಾಗಿತ್ತು. ವಿಮಾನ ನಿಲ್ದಾಣದಲ್ಲಿ ಸಮರ್ಪಕವಾಗಿ ಲ್ಯಾಂಡ್ ಮಾಡಲು ಸಾಧ್ಯವಾಗದೆ, ವಿಶೇಷ ವಿಮಾನ ಕೆಲಹೊತ್ತು ಶಿವಮೊಗ್ಗ ಆಕಾಶದಲ್ಲಿ ಸುತ್ತಾಡಿತ್ತು. ಈ ಬಗ್ಗೆ ಸ್ವತಃ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದರು. “ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ವಿಶೇಷ ವಿಮಾನಕ್ಕೂ ಲ್ಯಾಂಡಿಂಗ್ ವೇಳೆ ಸಮಸ್ಯೆ ಎದುರಾಯಿತು. ವಿಸಿಬಿಲಿಟಿ ಸಮಸ್ಯೆಯಿಂದಾಗಿ ವಿಮಾನ ಸುಮಾರು ಮೂರು ಸುತ್ತು ಹಾಕಿದ ಬಳಿಕವಷ್ಟೇ ಲ್ಯಾಂಡ್ ಆಗಲು ಸಾಧ್ಯವಾಯಿತು,” ಎಂದು ಘಟನೆಯನ್ನು ವಿವರಿಸಿದ್ದರು.

Shivamogga Airport Visibility Issues  ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಭೇಟಿಯ ಹಿನ್ನೆಲೆಯಲ್ಲಿ ತಾನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (KSIIDC) ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿದ್ದೆ. ಆಗ ಅವರು ಶೀಘ್ರವೇ ಉಪಕರಣ ಅಳವಡಿಸುವ ಭರವಸೆ ನೀಡಿದ್ದರು ಎಂದು ಸಂಸದರು ತಿಳಿಸಿದ್ದಾರೆ. ಸಂಸದರ ಹೇಳಿಕೆಯ ಪ್ರಕಾರ, ಏರ್‌ಪೋರ್ಟ್‌ನಲ್ಲಿ ವಿಸಿಬಿಲಿಟಿ ಸಮಸ್ಯೆ ನಿವಾರಣೆಗೆ ಬೇಕಾದ ಉಪಕರಣವು ಹಲವು ದಿನಗಳ ಹಿಂದೆಯೇ ಬಂದಿದೆ. ಆದರೆ, KSIIDC ಅದನ್ನು ಅಳವಡಿಸುವಲ್ಲಿ ವಿಳಂಬ ಮಾಡುತ್ತಿದೆ ಎಂಬುದು ಅವರ ಪ್ರಮುಖ ಆಕ್ಷೇಪವಾಗಿದೆ.

Shivamogga Airport Visibility Issues  ಆದರೆ, ಈ ವಿಳಂಬಕ್ಕೆ KSIIDC “ತಾಂತ್ರಿಕ ಕಾರಣಗಳು” ಎಂದು ಹೇಳುತ್ತಿದ್ದು, ಇದು ರಾಜಕೀಯ ತಿರುವು ಪಡೆಯುತ್ತಿದೆಯೇ ಎಂಬ ಚರ್ಚೆ ಸ್ಥಳೀಯವಾಗಿ ನಡೆಯುತ್ತಿದೆ. ವಿಮಾನ ನಿಲ್ದಾಣದಲ್ಲಿನ ವಿಸಿಬಿಲಿಟಿ ಸಮಸ್ಯೆಯನ್ನು ನಿವಾರಿಸಲು ಅಗತ್ಯ ಉಪಕರಣವನ್ನು ಜೂನ್ ಕೊನೆಯ ವಾರದಲ್ಲೇ ತರಿಸಲಾಗಿದೆ. ಆದರೆ, ಇದರ ಅಳವಡಿಕೆಗಾಗಿ ಬೇಕಾದ ಫೌಂಡೇಷನ್ ಮತ್ತು ಆಂಟೆನಾ ನಿರ್ಮಿಸಲು ಸುಮಾರು ₹1 ಕೋಟಿ ಹಣ ಬೇಕಾಗಿದೆ. ಈ ಹಣ ಇನ್ನೂ ಬಿಡುಗಡೆಯಾಗಿಲ್ಲ ಎನ್ನುವುದು ಸದ್ಯದ ಆರೋಪ.

Shivamogga Airport Visibility Issues
Shivamogga Airport Visibility Issues

1 thought on “Shivamogga Airport Visibility Issues ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಾಡಿದ ವಿಸಿಬಿಲಿಟಿ ಸಮಸ್ಯೆ”

Leave a Comment