ವೈದ್ಯರ ಕೊಲೆಗೈದು ಪರಾರಿಯಾಗಿದ್ದ ತೀರ್ಥಹಳ್ಳಿ ಮೂಲದ ಆರೋಪಿ ಸೆರೆ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ : ಶಿರಸಿಯಲ್ಲಿ ನಡೆದ ಕೊಲೆ ಪ್ರಕರಣವೊಂದು ತೀರ್ಥಹಳ್ಳಿ ವ್ಯಕ್ತಿಗೆ ಲಿಂಕ್ ಆಗಿದೆ. ಶಿರಸಿ ಪೇಟೆಯಲ್ಲಿರುವ ಆಯುರ್ವೇದ ವೈದ್ಯರೊಬ್ಬರನ್ನು ಕೊಲೆ ಮಾಡಿ ನಗದು, ಆಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಅಲ್ಲಿನ ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿರಸಿ ಪೇಟೆಯಲ್ಲಿ ನಡೆದ ಘಟನೆ, ತೀರ್ಥಹಳ್ಳಿ ಆರೋಪಿ ಬಂಧನ

ತೀರ್ಥಳ್ಳಿ ತಾಲ್ಲೂಕಿನ ಮಳಲೂರಿನ ಮಂಜುನಾಥ ಪಾಂಡುರಂಗ ನಾಯ್ಕ (68) ಎಂಬಾತ ಶಿರಸಿ ನಗರದ ಕೆಎಚ್‌ ಬಿ ಕಾಲೋನಿ ಹೊಸ ಬಡಾವಣೆ ನಿವಾಸಿ ಡಾ ರಮೇಶ ಕಲಘಟಕರ್ (51) ಎಂಬವರನ್ನ ಹತ್ಯೆ ಮಾಡಿದ್ದ . ಮೃತರದ್ದು ಎರಡನೇ ವಿವಾಹ ನಿಗದಿಯಾಗಿತ್ತು. ಇದಕ್ಕಾಗಿ ಮನೆಯಲ್ಲಿ ಸುಮಾರು 7 ಲಕ್ಷದ ಚಿನ್ನ ಇಟ್ಟಿದ್ರು. ಇವುಗಳ ಮೇಲೆ ಕಣ್ಣಿಟ್ಟಿದ್ದ ಪರಿಚಿತ ಮಂಜುನಾಥನಾಯ್ಕ ಕಳೆದ ಭಾನುವಾರ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ವೈದ್ಯರನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಏನೂ ಆಗಿಲ್ಲವೆಂಬಂತಿದ್ದ.

ಈ ಮಧ್ಯೆ ಕೊಲೆ ಮಾಡಿದ್ದ ಆರೋಪಿ ಮನೆ ಬಾಗಿಲಿಗೆ ಭೀಗ ಸಹ ಹಾಕಿ ಹೋಗಿದ್ದ. ಕುಟುಂಬಸ್ಥರು ಅನುಮಾನಗೊಂಡು ಮನೆಯ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಅಂತಿಮವಾಗಿ
ಡಿಎಸ್ಪಿ ಗೀತಾ ಪಾಟೀಲ ಹಾಗೂ ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಪಿಎಸ್‌ಐ ಬಸವರಾಜ ಕನಶೆಟ್ಟಿ ಮತ್ತು ತಂಡ ಕಾರ್ಯಾಚರಣೆ ನಡೆಸಿ ಶಿವಮೊಗ್ಗದಲ್ಲಿ ಆರೋಪಿಯನ್ನು ಬಂಧಿಸಿದೆ.

ಶಿರಸಿಯಲ್ಲಿ ವೈದ್ಯರ ಕೊಲೆಗೈದು ಪರಾರಿಯಾಗಿದ್ದ ತೀರ್ಥಹಳ್ಳಿ ಮೂಲದ ಆರೋಪಿ ಸೆರೆ
Shivamogga: Accused From Thirthahalli Arrested for Murdering Ayurveda Doctor in Sirsi
ಶಿರಸಿಯಲ್ಲಿ ವೈದ್ಯರ ಕೊಲೆಗೈದು ಪರಾರಿಯಾಗಿದ್ದ ತೀರ್ಥಹಳ್ಳಿ ಮೂಲದ ಆರೋಪಿ ಸೆರೆ
Shivamogga: Accused From Thirthahalli Arrested for Murdering Ayurveda Doctor in Sirsi

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor