HOSANAGARA

ಹೊಸನಗರದಲ್ಲಿ ಹೋಳಿ ಗನ್​ ಹಿಡಿದು ಡಿಶ್ಕ್ಯೂ ಎಂದ ನಟಿ ಸಮಂತಾ! ವಿಡಿಯೋ ನೋಡಿದ್ರಾ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ತೆಲುಗಿನ ಜನಪ್ರಿಯ ನಟಿ ಸಮಂತಾ ರುತ್​ ಪ್ರಭು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೆ ಅವರು ಆ ಭಾಗದಲ್ಲಿ ಹೋಳಿ ಆಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಿವಮೊಗ್ಗ: ನಿಂತಿದ್ದ ಕಾರ್​ನ ಗ್ಲಾಸ್​​ ಪುಡಿಮಾಡಿದ ಕಿಡಿಗೇಡಿಗಳು

ಸಾಮಾನ್ಯವಾಗಿ ಜನರಲ್ಲಿ ಸಮಂತಾ ಹೋಳಿ ಆಡೋಕೆ ಅಲ್ಲಿಂದ ಇಲ್ಲಿವರೆಗೂ ಬಂದ್ರಾ ಎಂಬ ಪ್ರಶ್ನೆ ಮೂಡೋದು ಸಹಜ. ಆದರೆ ವಿಷಯ ಬೇರೇನೆ ಇದೆ ಅದೇನೆಂದರೆ ಸಮಂತಾ ಇದೀಗ ನಟಿ ಮಾ ಇಂಟಿ ಬಂಗಾರಮ್​​ ಚಿತ್ರದಲ್ಲಿ ನಟಿಸುತ್ತಿದ್ದಾರೆ, ವಿಶೇಷ ಎಂದರೆ ಈ ಚಿತ್ರದಲ್ಲಿ ಕನ್ನಡದ ನಟ ದಿಗಂತ್​ ಕೂಡ ಪ್ರಮುಖ ಪಾತ್ರದಲ್ಲಿ  ಕಾಣಿಸಿಕೊಂಡಿದ್ದು, ಚಿತ್ರೀಕರಣಕ್ಕಾಗಿ  ಚಿತ್ರತಂಡ ಶಿವಮೊಗ್ಗದ ನಗರಕ್ಕೆ ಆಗಮಿಸಿದೆ ಎನ್ನಲಾಗಿದೆ.

ಇನ್ನೂ ಚಿತ್ರತಂಡ ರಿಲೀಸ್​ ಮಾಡಿರುವ ವಿಡಿಯೋದಲ್ಲಿರುವಂತೆ ಸಮಂತಾ ಪ್ಲಾಸ್ಟಿಕ್​ ವಾಟರ್​ ಗನ್​ನಲ್ಲಿ ಹೋಳಿ ಬಣ್ಣದ ನೀರನ್ನು ತುಂಬಿಸಿಕೊಂಡು ಸಹ ಕಲಾವಿದರು ಹಾಗೂ ತಂತ್ರಜ್ಙರಿಗೆ ಶೂಟ್​ ಮಾಡೋದನ್ನ ನಾವು ನೊಡ್ಬೋದು. ಹಾಗೆಯೇ  ಅದಕ್ಕೆ ಡಿಸ್ಕ್ಯೂ ಹ್ಯಾಪಿ ಹೋಳಿ ಬೆಂಗಳೂರು ಎಂಬಂತಹ ಕ್ಯಾಪ್ಷನ್​​ನ್ನು ಕೊಟ್ಟಿದ್ದಾರೆ.

ಇನ್ನೂ ಮಾ ಇಂಟಿ ಬಂಗಾರಮ್​ ಚಿತ್ರದ ಬಗ್ಗೆ ನೋಡುವುದಾದರೆ  ಈ ಸಿನಿಮಾದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು  ಕನ್ನಡದ ದಿಗಂತ್​ ಸಮಂತಾರ ಪತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ನಂದಿನಿ ರೆಡ್ಡಿ ನಿರ್ದೇಶಿಸುತ್ತಿದ್ದು, ಚಿತ್ರದ ನಿರ್ಮಾಣವನ್ನು  ಸಮಂತಾ ಅವರದ್ದೇ ಸ್ವಂತ ಬ್ಯಾನರ್  ಆದ ಟ್ರಾ ಲಾಲಾ ಮೂವಿಂಗ್ ಪಿಕ್ಚರ್ಸ್ ನಿರ್ಮಿಸುತ್ತಿದೆ. 

Samantha Ruth Prabhu and Diganth Shooting in Shimoga
Samantha Ruth Prabhu and Diganth Shooting in Shimoga

ಇದು ಕೇವಲ ಕೌಟುಂಬಿಕ ಚಿತ್ರವಲ್ಲ, ಬದಲಿಗೆ ಇದರಲ್ಲಿ ಸಮಂತಾ ಅವರು ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಅವರು ಸೀರೆ ಉಟ್ಟುಕೊಂಡೇ ಆಕ್ಷನ್ ಮಾಡಿರುವುದು ಈ ಚಿತ್ರದ ಹೈಲೈಟ್. ಈಗಾಗಳೇ ಬಿಡುಗಡೆಯಾಗಿರುವ ಟ್ರೈಲರ್​​ನಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುತ್ತಿದ್ದು, ಈ ಚಿತ್ರ ಮೇ 15, 2026 ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.

Samantha Ruth Prabhu Shooting in Shimoga

Samantha Ruth Prabhu Shooting in Shimoga
Samantha Ruth Prabhu Shooting in Shimoga
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ