ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಅಪರೂಪದ ಕಪ್ಪು (Black Panther) ಕಾಣಿಸಿಕೊಂಡಿದೆ. ಸುಮಾರು ಇಪ್ಪತ್ತು ವರ್ಷಗಳ ನಂತರ ಭದ್ರಾ ಅಭಯಾರಣ್ಯದಲ್ಲಿ 25 ಪ್ಯಾಂಥರ್ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಬ್ಯಾಕ್ ಪ್ಯಾಂಥರ್‌ಮತ್ತು ಚಿರತೆ ಸೆರೆಯಾಗಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಪ್ಪು ಚಿರತೆಯನ್ನು ನೋಡಿ ಪ್ರವಾಸಿಗರು ಫಿದಾ ಆಗಿದ್ದು, ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂತಸ ಪಟ್ಟಿದ್ದಾರೆ. ಅರಣ್ಯಾಧಿಕಾರಿಗಳು, ವಾಚರ್‌ಗಳು ಮತ್ತು ಗಾರ್ಡ್ಗಳ ಕಣ್ಣಿಗೆ ಬೀಳದ ಈ ಕಪ್ಪು ಚಿರತೆ, ಕಳೆದೊಂದು ವಾರದಲ್ಲಿ ಹಲವು ಬಾರಿ ಪ್ರತ್ಯಕ್ಷವಾಗಿದೆ. ಈ ಬಗ್ಗೆ ಅರಣ್ಯ ಹಾಗೂ ಪ್ರಾಣಿ ತಜ್ಞರು ವಿಶೇಷ ಗಮನ ನೀಡುತ್ತಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ಭದ್ರಾ ಅಭಯಾರಣ್ಯದಲ್ಲಿ ಕಪ್ಪು ಚಿರತೆ ದರ್ಶನ: 20 ವರ್ಷಗಳ ನಂತರ ಬ್ಲಾಕ್ ಪ್ಯಾಂಥರ್ ಪತ್ತೆ , Rare Black Panther Spotted in Bhadra Wildlife Sanctuary Chikmagalur After 20 Years
