ಹೈ ಟೆಕ್​ ಬಿಕ್ಷೆ! 100 ರೂಪಾಯಿನೇ ಹಾಕ್ಬೇಕು! ರಾಜಸ್ಥಾನಿ ಲೇಡಿ ಗ್ಯಾಂಗ್ ವಿರುದ್ಧ ಕನ್ನಡಿಗನ ವಿಡಿಯೋ ವೈರಲ್​ ! ನಿಮ್ಮೂರಿಗೂ ಬರಬಹುದು!

Rajasthani lady gang extorts money from Chikkamagaluru

ಹಂಚಿಕೊಳ್ಳಿ
WhatsApp Facebook X Telegram
ಹೈ ಟೆಕ್​ ಬಿಕ್ಷೆ! 100 ರೂಪಾಯಿನೇ ಹಾಕ್ಬೇಕು! ರಾಜಸ್ಥಾನಿ ಲೇಡಿ ಗ್ಯಾಂಗ್ ವಿರುದ್ಧ ಕನ್ನಡಿಗನ ವಿಡಿಯೋ ವೈರಲ್​ ! ನಿಮ್ಮೂರಿಗೂ ಬರಬಹುದು!
ಸುದ್ದಿ ಸಾರಾಂಶ

Rajasthani lady gang extorts money from Chikkamagaluru

KARNATAKA NEWS/ ONLINE / Malenadu today/ May 25, 2023 SHIVAMOGGA NEWS

ಚಿಕ್ಕಮಗಳೂರು/  ಹಣ ಬೇಡುವುದಕ್ಕೆ ನಾನಾ ರೀತಿಗಳನ್ನ ಅಳವಡಿಸಿಕೊಳ್ಳುವುದನ್ನ ನೋಡೆ ಇರ್ತೀರಿ, ಪುಟ್ಟ ಮಗುವನ್ನ ಹೊತ್ತುಕೊಂಡು ಬಿಕ್ಷೆ ಬೇಡುವುದು!  ಅನಾಥರು ಎಂದು ನಂಬಿಸುವುದು! ಅಷ್ಟೆಯೇಕೆ, ಪರ್ಸ್​ ಕಳೆದುಕೊಂಡಿದ್ದೇನೆ, ಊರಿಗೆ ಹೋಗಲೇಬೇಕು ಎಂದು ಸಹಾಯ ಬೇಡುವುದು! ಹೀಗೆ ಹಲವಾರು ರೀತಿಯಲ್ಲಿ ಜನರ ಅನುಕಂಪವನ್ನು ಹಣದ ಮೂಲಕ ಎನ್​ಕ್ಯಾಶ್ ಮಾಡಿಕೊಳ್ಳುವ ಪ್ರವೃತ್ತಿ ಬಗ್ಗೆ ನಿಮಗೆಲ್ಲಾ ಗೊತ್ತಿರುತ್ತೆ.. 

ಇದೀಗ ಅಂತಹುದ್ದೆ ಒಂದು ಟೀಂ ಚಿಕ್ಕಮಗಳೂರಿನಲ್ಲಿದ್ದು, ಇವರು ಹೈಟೆಕ್​ ಲೇಡಿ ಬಿಕ್ಷುಕರು ಇವರಿಗೆ ದುಡ್ಡು ಕೊಡಬೇಡಿ. ಸುಳ್ಳು ಹೇಳುತ್ತಿದ್ದಾರೆ  ಎಂಬಂತಹ ಮೊಬೈಲ್​ ವಿಡಿಯೋವೊಂದು ವೈರಲ್​ ಆಗಿದೆ. 

ರಾಜಸ್ಥಾನಿ ಮೂಲದ ಹುಡುಗಿಯರ ಗುಂಪೊಂದು ನಗರದಲ್ಲಿ ಓಡಾಡುತ್ತಿದ್ದು, ನೋಡಲು ಸುಂದರವಾಗಿರುವ ಹುಡುಗಿಯರು, ತಮಗೆ ಆಪತ್ತು ಸುತ್ತುಕೊಂಡಿದೆ ಎಂದು ಹೇಳುತ್ತಾ ನೂರು ಇನ್ನೂರು ರೂಪಾಯಿ ವಸೂಲಿ ಮಾಡುತ್ತಿದ್ದಾರಂತೆ. 10 -20 ಕೊಟ್ಟರೇ ಪಡೆದುಕೊಳ್ಳುವುದಿಲ್ಲವಂತೆ. ರಾಜಸ್ಥಾನದಲ್ಲಿ ನಮ್ಮ ಮನೆ ಮಠ ಎಲ್ಲಾ ಕೊಚ್ಕೊಂಡು ಹೋಗಿದೆ ಎನ್ನುವ ಇವರು ಗುಂಪು ಗುಂಪಾಗಿ ಬಂದು ಹಣ ಕೇಳುತ್ತಿದ್ದಾರಂತೆ. 

ಇವರನ್ನ ಪ್ರಶ್ನಿಸಿದ ಕರುನಾಡ ವ್ಯಕ್ತಿಯೊಬ್ಬ, ಯಾರು ನೀವೆಲ್ಲಾ ಎಂದು ಒಬ್ಬೊಬ್ಬರನ್ನು ಬಿಡದೇ ವಿಡಿಯೋ ಮಾಡಲು ಆರಂಭಿಸಿದ್ಧಾನೆ. ಏಕೆ ದುಡ್ಡು ಕೇಳುತ್ತಿದ್ದೀರಿ! 10 ರೂಪಾಯಿ ಕೊಟ್ಟರೇ ಯಾಕೆ ತೆಗೆದುಕೊಳ್ಳಲ್ಲ. ಓದೋಕೋ ಹೋಗೋದು ಬಿಟ್ಟು ಬಿಕ್ಷೆ ಯಾಕೆ ಬೇಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಈತನ ಪ್ರಶ್ನೆಗೆ ಉತ್ತರಿಸಲಾಗದೇ ಯುವತಿಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ. 

ಇದು ಕರ್ನಾಟಕ ಇಲ್ಲಿ ಇದೆಲ್ಲಾ ನಡೆಯಲ್ಲ, ಸ್ನೇಹಿತರೇ ಯಾರು ಇವರಿಗೆ ದುಡ್ಡು ಕೊಡಬೇಡಿ, ರಾಜಸ್ಥಾನದಿಂದ ಬಂದು ಇಲ್ಲಿ ಮೋಸ ಮಾಡುತ್ತಿದ್ದಾರೆ ಅಂತಾ ವ್ಯಕ್ತಿ ತನ್ನ ವಿಡಿಯೋದಲ್ಲಿ ಹೇಳಿದ್ದಾನೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. 

ಹೈಫೈ ಜೀನ್ಸ್ ತೊಟ್ಟು ಓಡಾಡುತ್ತಿರುವ ಈ ರಮಾಮಣಿಯರು ಯಾರು ಏನು ಎಂಬುದನ್ನ ಸದ್ಯ ಪೊಲೀಸರು ಅರಸುತ್ತಿದ್ದಾರೆ.  ಯುವತಿಯರು ತಮ್ಮ ದುಬಾರಿ ಬಿಕ್ಷಾಟನೆಗೆ ಮಕ್ಕಳನ್ನ ಸಹ ಬಳಸಿಕೊಳ್ಳುತ್ತಿದ್ಧಾರೆ. ಸದ್ಯ ಚಿಕ್ಕಮಗಳೂರಲ್ಲಿ ವಿಡಿಯೋ ಹರಿದಾಡ್ತಿರುವುದರಿಂದ , ಮತ್ತೊಂದು ಕಡೆಗೆ ಇವರ ಠಿಕಾಣಿ ಶಿಫ್ಟ್ ಆಗ್ತಿದೆ ಎಂದು ಹೇಳಲಾಗ್ತಿದೆ. 

ಬೈಕ್​ ಆಕ್ಸಿಡೆಂಟ್​ ನಲ್ಲಿ ಎನ್​ಎಸ್​ಜಿ ಕಮಾಂಡೋ ದುರಂತ ಅಂತ್ಯ! ಪತ್ನಿಯನ್ನು ನೋಡಲು ಹೋಗುತ್ತಿದ್ದ ವೇಳೆ ದುರ್ಘಟನೆ

ಚಿಕ್ಕಮಗಳೂರು/ ಜಿಲ್ಲೆಯ ಎನ್​ಎಸ್​ಜಿ ಕಮಾಂಡೋ ಒಬ್ಬರು ಬೈಕ್​ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ್ಧಾರೆ. ನಿನ್ನೆ ಸಂಜೆ ಕುಣಿಗಲ್​ ತಾಲ್ಲೂಕಿನ ಎನ್​ಹೆಚ್​ ರಸ್ತೆಯಲ್ಲಿ  ಈ ಘಟನೆ ಸಂಭವಿಸಿದೆ.  

ನಡೆದಿದ್ದೇನು?

ತರೀಕೆರೆ ತಾಲೂಕಿನ ತಣಿಗೇಬೈಲು ನಿವಾಸಿ ದೀಪಕ್ (31) ಮೃತ  ಯೋಧ. ಇವರು ಮಹಾರಾಷ್ಟ್ರದ ಮುಂಬೈನಲ್ಲಿ ಐಟಿಬಿಪಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇತ್ತೀಚೆಗೆ ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋವಾಗಿ ನೇಮಕವಾಗಿದ್ದರು. 

ಇವರ ಸುಳಿವು ಸಿಕ್ಕರೇ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ!

ತಿಂಗಳ ರಜೆ ಮೇಲೆ ಊರಿಗೆ ಬಂದಿದ್ದ ದೀಪಕ್​  ಬೆಂಗಳೂರಿನಲ್ಲಿ ಇರುವ ತನ್ನ ಪತ್ನಿಯನ್ನು ನೊಡಲೆಂದು ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಕುಣಿಗಲ್ ಹೇಮಾವತಿ ಸರ್ಕಲ್​ ಬಳಿ ಆಕ್ಸಿಡೆಂಟ್ ಆಗಿದೆ.   

ತೀರ್ಥಹಳ್ಳಿಯಲ್ಲಿ ಭೀಕರ ದುರಂತ! ತುಂಗಾನದಿಯಲ್ಲಿ ಮುಳುಗಿದ ಬಾಲಕ! ಫೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ!

ತೀರ್ಥಹಳ್ಳಿ/ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 16 ವರ್ಷದ ಅಶ್ವಥ್​  ಮೃತ ಬಾಲಕ

ನಡೆದ ಘಟನೆ

ತೀರ್ಥಹಳ್ಳಿಯ ಛತ್ರಕೇರಿಯ ಬಳಿ ಇರುವ ಜಯಲಕ್ಷ್ಮೀ ಸಾಮಿಲ್ ಬಳಿಯಲ್ಲಿ ಅಶ್ವಥ್​ ನಿನ್ನೆ ಸಂಜೆ ನೀರಿಗೆ ಇಳಿದಿದ್ದ. ತನ್ನ ಸ್ನೇಹಿತನ ಜೊತೆಗೆ ನೀರಿಗೆ ಇಳಿದಿದ್ದ ಅಶ್ವಥ್​, ನಿಯಂತ್ರಿಸಲಾಗದೇ ನೀರಿನಲ್ಲಿ ಮುಳುಗಿದ್ದಾನೆ. ಘಟನೆ ಬೆನ್ನಲ್ಲೆ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಸ್ಥಳೀಯ ಈಜುಗಾರ ಪ್ರಮೋದ್​ ಪೂಜಾರಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಅಶ್ವಥ್​ನ ಮೃತದೇಹವನ್ನು ನೀರಿನಿಂದ ಹೊರಕ್ಕೆ ತೆಗೆದಿದ್ದಾರೆ.  

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor