ಯಡೂರು : ದೇವಸ್ಥಾನಕ್ಕೆ ತೆರಳುತ್ತಿದ್ದ ಅರ್ಚಕರ ಸ್ಕೂಟಿ ಪಲ್ಟಿ; ಮೇಲುಸುಂಕ ದೇವಸ್ದಾನದ ಶೇಷಾಚಲ ಭಟ್ಟ ಸಾವು

ಹಂಚಿಕೊಳ್ಳಿ
WhatsApp Facebook X Telegram
Priest Dies After Scooter Overturns Near Karigallu in Hosanagara
Priest Dies After Scooter Overturns Near Karigallu in Hosanagara

ಮಲೆನಾಡು ಟುಡೆ ಸುದ್ದಿ / ಹೊಸನಗರ / ನವರಾತ್ರಿ ಉತ್ಸವದ ಸಿದ್ಧತೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ , ಅವಘಡ ಸಂಭವಿಸಿ ಅರ್ಚಕರೊಬ್ಬರು ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ತಾಲೂಕಿನ ಯಡೂರು ಸಮೀಪದ ಕರಿಗಲ್ಲು ಗ್ರಾಮದಲ್ಲಿ ಸೋಮವಾರ ನಡೆದಿದೆ. ಉಳ್ತಿಗಾ ಗ್ರಾಮದ ಮೇಲುಸುಂಕ ನಿವಾಸಿ ಶೇಷಾಚಲ ಭಟ್ಟ (61) ಮೃತಪಟ್ಟವರು.

ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ಸಿದ್ಧತೆ ನಡೆಸುವ ಸಲುವಾಗಿ ಶೇಷಾಚಲ ಭಟ್ಟ ಅವರು ಮನೆಯಿಂದ ದೇವಸ್ಥಾನಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಕರಿಗಲ್ಲು ಗ್ರಾಮದ ಬಳಿ ಸಾಗುತ್ತಿದ್ದ ವೇಳೆ ಸ್ಕೂಟಿ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯನ್ನು ನೋಡಿದವರಿಲ್ಲ, ತಿರುವಿನಂಚಿನಲ್ಲಿ ಮಳೆಯಿದ್ದ ಕಾರಣಕ್ಕೆ ಸ್ಕೂಟಿ ಸ್ಕಿಡ್ ಆಗಿದೆ ಎಂದು ಸ್ಥಳೀಯರು ಅನುಮಾನಿಸಿದ್ದಾರೆ. ಇನ್ನೂ ಅಪಘಾತದಲ್ಲಿ ಶೇಷಾಚಲ ಭಟ್ಟ ಅವರ ತಲೆಗೆ ಗಂಭೀರ ಪೆಟ್ಟಾಗಿ, ತೀವ್ರ ರಕ್ತಸ್ರಾವ ಉಂಟಾಗಿದೆ. ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಮೃತ ಶೇಷಾಚಲ ಭಟ್ಟ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor