SHIVAMOGGA NEWS TODAY

ಮಿಷನ್ ಪ್ರಕೃತಿ: ಪರಿಸರ ಸಂರಕ್ಷಣೆಯಲ್ಲಿ ಸಾಧನೆ ಮಾಡಿದ ರಾಜ್ಯದ 10 ಶಾಲೆಗಳಿಗೆ ಅತ್ಯುತ್ತಮ ಶಾಲೆ ಪ್ರಶಸ್ತಿ ಗೌರವ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕ (SSK) ಮತ್ತು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಿಷನ್ ಪ್ರಕೃತಿ ತರಗತಿಯಿಂದ ಸಂರಕ್ಷಣೆಯತ್ತ ಅಭಿಯಾನದ ಸಮಾರೋಪ ಸಮಾರಂಭ ವಿಕಾಸ ಸೌಧದಲ್ಲಿ ನಡೆಯಿತು. ಈ ವಿಶೇಷ ವೇದಿಕೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಅತ್ಯುತ್ತಮ ಶಾಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. 

ಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಟಗರುಗಳ ಭರ್ಜರಿ  ಕಾಳಗ: ಹೇಗಿತ್ತು ಗೊತ್ತಾ..?

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗಬಾರದು. ವಿದ್ಯಾರ್ಥಿಗಳು ವಿಷಯಗಳನ್ನು ಆಳವಾಗಿ ಗ್ರಹಿಸಿ, ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಜಪಾನ್ ದೇಶದ ಸ್ವಚ್ಛತಾ ಶಿಸ್ತನ್ನು ಮಾದರಿಯಾಗಿಟ್ಟುಕೊಂಡು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲಿದೆ ಎಂದು ಆಶಯ ವ್ಯಕ್ತಪಡಿಸಿದರು

ಮುಂದಿನ ವರ್ಷದಿಂದ ನೈತಿಕ ವಿಜ್ಞಾನ ಪಠ್ಯ ಅಳವಡಿಕೆ

ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಲು ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿಯವರೆಗೆ ನೈತಿಕ ವಿಜ್ಞಾನ ವಿಷಯವನ್ನು ಕಡ್ಡಾಯವಾಗಿ ಪರಿಚಯಿಸಲಾಗುವುದು ಎಂದು ಸಚಿವರು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಬಿಸಿಯೂಟ, ರಾಗಿಮಾಲ್ಟ್, ಮೊಟ್ಟೆ ಹಾಗೂ ಉಚಿತ ಸಮವಸ್ತ್ರಗಳಂತಹ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. 

ಪ್ರಶಸ್ತಿ ವಿಜೇತ ಶಾಲೆಗಳ ಪಟ್ಟಿ

ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಈ ಕೆಳಗಿನ ಶಾಲೆಗಳಿಗೆ ಪ್ರಶಸ್ತಿ ನೀಡಲಾಯಿತು:

ಜಿ.ಎಂ.ಪಿ.ಎಚ್.ಎಸ್, ಎಮ್ಮಿಗನೂರು (ಬಳ್ಳಾರಿ)

ಜಿ.ಕೆ.ಎಚ್.ಪಿ.ಎಸ್, ಕಾತ್ರಾಳ (ಬೆಳಗಾವಿ)

ಜಿ.ಎಚ್.ಎಸ್, ಅಲಿಪುರ (ಚಿಕ್ಕಬಳ್ಳಾಪುರ)

ಜಿ.ಎಚ್.ಪಿ.ಎಸ್, ಹಿರೇಗೋಣಿಗೆರೆ (ದಾವಣಗೆರೆ)

ಜಿ.ಎಚ್.ಪಿ.ಎಸ್, ಜೋಡಳ್ಳಿ (ಕಲಘಟಗಿ)

ಕೆ.ಪಿ.ಎಸ್, ಕೋಟೇಶ್ವರ (ಉಡುಪಿ)

ಡಿ.ಕೆ.ಜೆಡ್.ಪಿ, ಅಳಿಯೂರು (ದಕ್ಷಿಣ ಕನ್ನಡ)

ಕೆ.ಎಸ್.ಎಸ್ ಜಿ.ಎಚ್.ಎಸ್, ಹಕ್ಲಾಡಿ (ಉಡುಪಿ)

ಕೆ.ಜಿ.ಬಿ.ವಿ, ಯಳಂದೂರು (ಚಾಮರಾಜನಗರ)

ಜಿ.ಎಚ್.ಪಿ.ಎಸ್, ಮಲ್ಲೂರು (ಉಡುಪಿ)

Mission Prakriti 10 Schools Win Best School Awards

Mission Prakriti 10 Schools Win Best School Awards
Mission Prakriti 10 Schools Win Best School Awards
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.