SHIVAMOGGA NEWS TODAY

ಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಟಗರುಗಳ ಭರ್ಜರಿ  ಕಾಳಗ: ಹೇಗಿತ್ತು ಗೊತ್ತಾ..?

Prathapa thirthahalli ನವೀಕರಣ: 16 ಫೆಬ್ರ 2026, 4:03 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ಸುತ್ತಲೂ ಸಾವಿರಾರು ಜನ, ಅದ್ದೂರಿಯಾಗಿ ಸಿಂಗಾರಗೊಂಡ ವೇದಿಕೆ, ನೆರೆದಿದ್ದ ಜನರ ಮೈನವಿರೇಳಿಸಲು ಸಜ್ಜಾಗಿದ್ದ ನೂರಾರು ಟಗರುಗಳು ಈ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಗಿದ್ದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರ ಮಟ್ಟದ ಟಗರು ಕಾಳಗ. 

ಶಿವಮೊಗ್ಗದಲ್ಲಿ ಫೆಬ್ರವರಿ 24 ರಿಂದ 28 ರವರೆಗೆ ನಡೆಯಲಿರುವ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ, ನಮ್ಮೂರ ಬಳಗದ ವತಿಯಿಂದ ಈ ಅದ್ದೂರಿ ಸ್ಪರ್ಧೆಯನ್ನು ಫೆಬ್ರವರಿ 15ರಂದು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಫ್ರೀಡಂ ಪಾರ್ಕ್‌ನಲ್ಲಿ ಅದ್ದೂರಿಯಾದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. 

ಅಡಿಕೆ ರೇಟ್ ಎಷ್ಟು? ಶಿವಮೊಗ್ಗ, ದಾವಣಗೆರೆ, ಹೊನ್ನಾಳಿ, ಶಿರಸಿ, ಯಲ್ಲಾಪುರ, ಮಂಗಳೂರು ಮಾರುಕಟ್ಟೆಯ ರಿಪೋರ್ಟ್

National Level Tagaru Kalaga ರೋಮಾಂಚನಕಾರಿ ಸೆಣಸಾಟ

ಟಗರುಗಳನ್ನು ಅವುಗಳ ಹಲ್ಲುಗಳ ಆಧಾರದ ಮೇಲೆ (2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ 8 ಹಲ್ಲು) ವಿಂಗಡಿಸಿ ಸ್ಪರ್ಧೆ ನಡೆಸಲಾಯಿತು. ವಿಶೇಷವಾಗಿ 6 ಮತ್ತು 8 ಹಲ್ಲಿನ ಬಲಿಷ್ಠ ಟಗರುಗಳ ಸೆಣಸಾಟ ನೆರೆದಿದ್ದವರಲ್ಲಿ ರೋಮಾಂಚನ ಸೃಷ್ಟಿಸಿತು. ಕಾಲು ಕೆದರಿ, ದೃಷ್ಟಿ ನೆಟ್ಟು ಪರಸ್ಪರ ಡಿಚ್ಚಿ ಕೊಡುತ್ತಿದ್ದ ಸದ್ದಿಗೆ ಮೈ ಜುಂ ಎನಿಸುತ್ತಿದ್ದರೆ, ಮತ್ತೊಂದೆಡೆ ಮೂಕ ಪ್ರಾಣಿಗಳ ಹೋರಾಟ ಕಂಡು ಅಯ್ಯೋ ಪಾಪ ಎಂಬ ಭಾವನೆಯೂ ಪ್ರೇಕ್ಷಕರಲ್ಲಿ ಮೂಡುತ್ತಿತ್ತು. 

ಕೆಲವು ಟಗರುಗಳು ಆರಂಭದಲ್ಲಿ ಹುಮ್ಮಸ್ಸಿನಿಂದ ಗುದ್ದಿದರೂ ನಂತರ ಹಿಂಜರಿಯುತ್ತಿದ್ದವು. ಇನ್ನೂ ಕೆಲವು ಟಗರುಗಳು ಕಣದಲ್ಲಿ ಹೋರಾಡುವ ಬದಲು ರನ್ನಿಂಗ್​ ನಡೆಸುತ್ತಿದ್ದದ್ದು, ನೆರೆದಿದ್ದ ಜನರಿಗೆ ಭರ್ಜರಿ ಮನೋರಂಜನೆ ನೀಡಿತು. ಅಂತರರಾಜ್ಯ ಮಟ್ಟದ ನೂರಾರು ಟಗರುಗಳು ಈ ಟ್ರೋಫಿಗಾಗಿ ಸೆಣಸಾಡಿದವು. ಮಾಲೀಕರ ಪ್ರತಿಷ್ಠೆ ಮತ್ತು ಗೆಲುವಿಗಾಗಿ ಟಗರುಗಳು ನಡೆಸಿದ ಈ ಕಾದಾಟ ಫೆಬ್ರವರಿ 15ರ ಮಧ್ಯಾಹ್ನ 12 ಗಂಟೆಗೆ ಆರಂಭವಾಗಿ, ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ ಸತತವಾಗಿ ನಡೆಯಿತು. ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಹಾಗೂ ಕಾಮೆಂಟೇಟರ್‌ಗಳ ಪ್ರತಿ ಟಗರುಗಳುಗಳಿಗೆ ನೀಡುತ್ತದ್ದ ಬಿಲ್ಡಪ್​​ ಮಾಲೀಕರುಳನ್ನು ಅಷ್ಟೇ ಅಲ್ಲದೆ ಟಗರುಗಳನ್ನು ಹುರಿದುಂಬಿಸಿದಂತಿತ್ತು 

ಆಯೋಜಕರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ವಿಶೇಷವಾಗಿ ಮಹಿಳೆಯರಿಗಾಗಿ ಪ್ರತ್ಯೇಕ ಪಿಂಕ್ ಗ್ಯಾಲರಿ ಹಾಗೂ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. 

ಆಯೋಜಕರಲ್ಲೊಬ್ಬರಾದ ಗೋಪಿ ಮಾತನಾಡಿ, ಇದು ನಮ್ಮ ಮಣ್ಣಿನ ಗ್ರಾಮೀಣ ಕ್ರೀಡೆ. ಜಲ್ಲಿಕಟ್ಟು, ಹೋರಿ ಬೆದರಿಸುವ ಸ್ಪರ್ಧೆ, ಕುರಿ ಕಾಳಗ ಹಾಗೂ ಡಾಗ್ ಶೋಗಳಂತಹ ಕಾರ್ಯಕ್ರಮಗಳು ನಡೆದಾಗ ಮಾತ್ರ ರೈತರಿಗೆ ಪ್ರಾಣಿಗಳನ್ನು ಸಾಕಲು ಪ್ರೋತ್ಸಾಹ ಸಿಗುತ್ತದೆ. ರೈತರು 10 ರಿಂದ 15 ಲಕ್ಷ ರೂ. ಬೆಲೆಬಾಳುವ ಟಗರುಗಳನ್ನು ಇಲ್ಲಿಗೆ ತಂದಿದ್ದಾರೆ. ಲಕ್ಕಿ ಡಿಪ್ ಮೂಲಕ ಗೆದ್ದವರಿಗೆ ಕುರಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ, ಎಂದು ತಿಳಿಸಿದರು. 

ಒಟ್ಟಾರೆಯಾಗಿ, ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಈ ಟಗರು ಕಾಳಗವು ಕೇವಲ ಒಂದು ಕ್ರೀಡೆಯಾಗಿರದೆ, ಗ್ರಾಮೀಣ ಸೊಗಡು ಮತ್ತು ಸಂಸ್ಕೃತಿಯನ್ನು ಪಟ್ಟಣದ ಜನರಿಗೆ ಪರಿಚಯಿಸುವ ವೇದಿಕೆಯಾಯಿತು. ಪ್ರಾಣಿಗಳ ಶೌರ್ಯ ಮತ್ತು ಮಾಲೀಕರ ಪ್ರೀತಿಯ ಅನಾವರಣದೊಂದಿಗೆ, ಮುಂಬರುವ ಮಾರಿಕಾಂಬಾ ಜಾತ್ರೆಗೆ ಈ ಕ್ರೀಡಾಕೂಟವು ಭರ್ಜರಿ ಮುನ್ನುಡಿ ಬರೆಯಿತು.

National Level Tagaru Kalaga in Shivamogga 
National Level Tagaru Kalaga in Shivamogga 

National Level Tagaru Kalaga in Shivamogga 

shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.