ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಫೆಬ್ರವರಿ 17 ಮತ್ತು 18 ರಂದು ವಿದ್ಯುತ್ ವ್ಯತ್ಯಯ 

ಹಂಚಿಕೊಳ್ಳಿ
WhatsApp Facebook X Telegram
Shivamogga Power Cut Shivamogga Power Cut Shimoga Power Cut Power Cut Alert
Shivamogga Power Cut Shimoga Power Cut Power Cut Alert

ಶಿವಮೊಗ್ಗ: ನಗರದ ಮೆಸ್ಕಾಂ ಉಪವಿಭಾಗ-1ರ ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ತೆರವು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯ ಪ್ರಯುಕ್ತ ಫೆಬ್ರವರಿ 17 ಮತ್ತು 18 ರಂದು ನಗರದ ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

ಪೊಲೀಸ್ ವರ್ಗಾವಣೆ! ಶಿವಮೊಗ್ಗದಿಂದ ಕೃಷ್ಣಮೂರ್ತಿ ಟ್ರಾನ್ಸಫರ್​, ದೊಡ್ಡಪೇಟೆ, ಜಯನಗರಕ್ಕೆ ಹೊಸ ಇನ್​ಸ್ಪೆಕ್ಟರ್​! ಪೂರ್ತಿ ಮಾಹಿತಿ ಒದಿ

ನಿಗದಿತ ಕಾಮಗಾರಿಗಳ ಕಾರಣದಿಂದಾಗಿ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.

ಎಲ್ಲೆಲ್ಲಿ ಕರೆಂಟ್​ ಇರಲ್ಲ 

ಈ ವಿದ್ಯುತ್ ವ್ಯತ್ಯಯವು ನಗರದ ಪ್ರಮುಖ ರಸ್ತೆಗಳಾದ ಎ.ಎನ್.ಕೆ. ರಸ್ತೆ, ಗಾಂಧಿನಗರ ಮುಖ್ಯರಸ್ತೆ, ಜಿಲ್ಲಾ ಪಂಚಾಯತ್ ಮುಖ್ಯರಸ್ತೆ ಹಾಗೂ ಕುವೆಂಪು ರಸ್ತೆಯ ವ್ಯಾಪ್ತಿಯಲ್ಲಿ ಕಂಡುಬರಲಿದೆ. ಇದರೊಂದಿಗೆ ಚನ್ನಪ್ಪ ಲೇಔಟ್, ಅಚ್ಯುತರಾವ್ ಲೇಔಟ್, ಸವಳಂಗ ರಸ್ತೆ, ವೆಂಕಟೇಶನಗರ ಹಾಗೂ ಇವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ರಸ್ತೆ ಅಭಿವೃದ್ಧಿಯ ಭಾಗವಾಗಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಮೆಸ್ಕಾಂ ಸ್ಪಷ್ಟಪಡಿಸಿದೆ.

Scheduled Power Cut in Shivamogga on Feb 17 

Scheduled Power Cut  Power Cut in Shivamogga Shimoga Power Cut Update
Scheduled Power Cut Power Cut t 
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor